ಬೀದಿ ಬಿಕಾರಿ ನಾನಲ್ಲ
ದಾರಿತಪ್ಪಿಯೂ ಬಂದಿಲ್ಲ
ನಾನಾರೆಂದು ಗೊತ್ತಾಗಲಿಲ್ಲವೆ?
ಇರಲಿ ಬಿಡು:
ಈಗ ನೀನು ಉಪ್ಪರಿಗೆಯಲ್ಲಿರುವೆ.
ಅದೆಷ್ಟೋಸಲ ಬಂದು
ನನ್ನ ಮನದ ಕದವ ತಟ್ಟಿ
ಎದೆಯ ಮುಟ್ಟಿ
ಕೊಟ್ಟಿದ್ದ ಭಾಷೆ ನೆನಪಿಲ್ಲವೇ?
ಹೋಗಲಿ ಬಿಡು:
ಪ್ರೀತಿಯ ಪವಿತ್ರತೆ ಗೊತ್ತಿಲ್ಲ ನಿನಗೆ
ನನ್ನ ಮನೆಯಂಗಳಕೆ
ಹಾಕಬೇಕಿದ್ದ ರಂಗೋಲಿ
ಇನ್ನೊಬ್ಬರ ಮನೆಯಂಗಳದ
ರಂಗವಲ್ಲಿಯಾಗಿರುವೆ ಈಗ.
ಓ ಅರಗಿಣಿಯೇ
ನೆನಪಿದ್ದರೆ ಸಾಕು ನಿನಗೆ
ನೀ ಹಾಕುವ ರಂಗೋಲಿ
ನನ್ನ ಹೃದಯದ ಸುಟ್ಟ ಬೂದಿ ಎಂದು...!!