*ತಾಜ್ ಮಹಲ್ – ತೇಜೋ ಮಹಲ್*
ಭಾರತ ಎಂದೊಡನೆ ನಮಗೆ ನೆನಪಾಗುವುದು ಭವ್ಯ ಸಂಸ್ಕೃತಿ, ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಸಾರಿರುವ ದೇಶ ನಮ್ಮದು,
ತಾಜ್ ಮಹಲ್ ಬಗ್ಗೆ ಇತ್ತೀಚಿನ ಸುದ್ದಿಯೊಂದು ಅಂರ್ಜಾಲದಲ್ಲಿ ಹರಿದಾಡುತ್ತಿದೆ ಅದೆಂದರೆ, “ತಾಜ್ ಮಹಲ್ ಹಿಂದೂ ದೇವಾಲಯವಾಗಿತ್ತು ಶಹಜಹಾನ್ ಹಿಂದೂ ದೇವರ ಮೂರ್ತಿಯನ್ನ ಕಿತ್ತೊಗೆದು ಅದನ್ನು ಮಮ್ತಾಜ್ ಸಮಾಧಿಯನ್ನಾಗಿ ಮಾಡಲಾಯಿತು.”
ಇದಕ್ಕೆ ಅಂತರ್ಜಾಲದಲ್ಲಿ ಅನೇಕ ಕಾರಣಗಳನ್ನು ಕೊಡುತ್ತಾರೆ,
ಈ ಲೇಖನ ಬರೆಯುವ ಮುಂಚೆ ನನ್ನನ್ನು ನಾನು ತುಂಬಾ ವಿಮರ್ಶೆ ಮಾಡಿಕೊಂಡಿದ್ದೇನೆ, ಯಾಕೆಂದರೆ ಈ ವಿಷಯಕ್ಕೆ ಸಂಬಂದಿಸಿದಂತೆ ಜೂನ್ 11, 2012 ರಲ್ಲಿ ನಾನು ಒಂದು ಲೇಖನ ಬರೆದಿದ್ದೆ ಆ ಲೇಖನವನ್ನು ಈಗ ಓದಿದರೆ ನನಗೇ ನಗು ಬರುತ್ತದೆ, [ ನೀವೂ ಸಹ ಆ ಲೇಖನವನ್ನು ಒಮ್ಮೆ ಓದಿ. http://ontipremi.blogspot.com/2012/06/blog-post_11.html ] ನಾನು ಓಕ್ ಗೆ ಸಂಬಂಧಿಸಿದಂತೆ ಲೇಖನಗಳನ್ನು ಓದುವಾಗ ನಿಜಕ್ಕೂ ಅದೆಲ್ಲ ನಿಜ ಅಂತನೇ ಅನ್ನಿಸುತ್ತಿತ್ತು. ಆದರೆ ಈಗ ಅದನ್ನ ವಿಶ್ಲೇಷಣೆಗೆ ಒಳಪಡಿಸಿದಾಗ ಆಗ ನಾನು ಪೂರ್ವಗ್ರಹ ಪೀಡಿತನಾಗಿದ್ದೆ ಅಂತ ಸ್ಪಷ್ಟವಾಗಿದೆ. ಅದಿರಲಿ ವಿಷಯಕ್ಕೆ ಬರೊಣ.
ತಾಜ್ ಮಹಲ್ ಅಲ್ಲ ತೇಜೋ ಮಹಲ್ ಎಂಬುದಕ್ಕೆ ಡಾ|| ಓಕ್ ಕೊಡುವ ಕಾರಣಗಳನ್ನು ಹಾಗು ಸತ್ಯಾಂಶಗಳನ್ನು ಪರೀಶೀಲಿಸೋಣ.
1. ತಾಜ್ ಮಹಲ್ ನದಿ ದಂಡೆಯಮೇಲಿದೆ ಸಾಮಾನ್ಯವಾಗಿ ದೇವಾಲಯಗಳು ಮಾತ್ರ ನದಿ ದಂಡೆಯ ಮೇಲಿರುತ್ತವೆ.
** ನಿಜ, ಈ ವಾದವನ್ನು ಒಪ್ಪಬಹುದು, ಆದರೆ ನದಿ ದಡದಮೇಲೆ ಇರುವ ಕಟ್ಟಡಗಳೆಲ್ಲಾ ಹಿಂದೂಗಳದಲ್ಲ!! ಸಾಮಾನ್ಯವಾಗಿ ನಾಗರೀಕತೆಗಳು ಹುಟ್ಟುವುದೇ ನದಿ ಬಯಲುಗಳಲ್ಲಿ,
2. ತಾಜ್ ಮಹಲ್ ಗೋಡೆಯ ಮೇಲೆ ಹಾವಿನ/ ಕಮಲದ ಹೂವಿನ ಚಿತ್ರಗಲಿವೆ.
** ಕಟ್ಟಡವು ಸಂಪೂರ್ಣ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿದೆ, ಅವರ ಬಾಗಿಲುಗಳು ಕಮಾನಿನ ಆಕಾರದಲ್ಲಿವೆ , ಅಂದರೆ ಆ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಂ ಕಲಾಶೈಲಿಗಳ ಸಂಮಿಶ್ರಣದಿಂದ ಹೊಸದೊಂದು ಶೈಲಿ ಹುಟ್ಟಿತ್ತು, ವಿಜಯ ನಗರದ ಕಾಲದಲ್ಲಿನ ಹಲವಾರು ಕಟ್ಟಡಗಳು ಇದೇ ಶೈಲಿಯಲ್ಲಿವೆ ಅಂದ ಮಾತ್ರಕ್ಕೆ ನಾವು ಅದನ್ನು ಮುಸ್ಲಿಂ ಕಟ್ಟಡಗಳು ಎಂದು ಕರೆಯುವಂತಿಲ್ಲ. ಬಹುಷ ಹೊಸ ಶೈಲಿಯೊಂದನ್ನು ರೂಪಿಸಲು ಅಲ್ಲಿ ಪ್ರಯತ್ನಿಸಿರಬಹುದು, ನೆನಪಿರಲಿ: ಭಾರತದಲ್ಲಿ ಯಾವುದೇ ದೇವಾಯಯಕ್ಕೆ ಕಮಾನಿನ ಆಕಾರದ ಭಾಗಿಲುಗಳಿಲ್ಲ!!
3. ಮುಮ್ತಾಜಳ ಸಾವಿನ( ೧೬೩೧) ಕೇವಲ ಎಳು ವರ್ಷಗಳ ತರುವಾಯ ಆಗ್ರಾಕ್ಕೇ ಭೇಟಿ ನೀಡಿದ ಯುರೋಪ್ ಪ್ರವಾಸಿಗ ತನ್ನ ಪ್ರವಾಸದ ಟಿಪ್ಪಣಿಯಲ್ಲಿ ಅಲ್ಲಿಯ ಜನ-ಜೀವನದ ಬಗ್ಗೆ ವಿವರ ನೀಡಿದ್ದನೆ. ಆದರೆ ಎಲ್ಲಿಯೂ ಅವನು ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಚಕಾರವೆತ್ತಿಲ್ಲ.
** ಈ ವಾದದಲ್ಲೇ ಉತ್ತರ ಅಡಗಿದೆ, ತಾಜ್ ಮಹಲ್ ಬಗ್ಗೆ ಎತ್ತದವ ದೇವಾಲಯದ ಬಗ್ಗೆಯೂ ಹೇಳಿಲ್ಲ.!! ಬಹುಶಃ ಆ ಭಾಗಕ್ಕೆ ಅವನು ಬೇಟಿ ನೀಡಿರದಿರ ಬಹುದು ಅಥವಾ ಅವನು ಬರೆದಿರುವ ಪುಸ್ತಕ/ಬರಹಗಳು ನಮಗೆ ಸಿಗದೇ ಇರಬಹುದು
ಒಂದು ವೇಳೆ ದೇವಾಲಯದ ಒಳಗಿನ ಮೂರ್ತಿಯನ್ನು ಮಾತ್ರ ತೆಗೆದು ಹಾಕಿ ನಂತರ ಮಮ್ತಾಜ್ ಶವವನ್ನು ಇಡಲಾಗಿದೆ ಎಂಬುದಾದರೆ, ಕಟ್ಟಡವು 90% ಮುಸ್ಲಿಂ ಶೈಲಿಯಲ್ಲಿದೆ, ಒಂದುವೇಳೆ ಸ್ವಲ್ಪಭಾಗ ಕೆಡವಿ ಮುಸ್ಲಿಂ ಕಟ್ಟಡವನ್ನಾಗಿ ಪರಿವರ್ತಿಸಿದರು ಎಂಬುದಾದರೆ , ಅಂತಹ ಬೃಹತ್ ಕಟ್ಟಡವನ್ನ ಕೆಡವಿ /ದುರಸ್ತಿಗೊಳಿಸುವ ಬದಲು ಹೊಸದನ್ನೇ ನಿರ್ಮಿಸುವುದು ಸುಲಭದ ಕೆಲಸ,
4. ಹಿಂದೂ ದೇವಾಲಯ ಕೆಡವಿ ತಾಜ್ ನಿರ್ಮಿಸಲಾಗಿದೆ .ತಾಜ್ ನ ನೆಲಮಾಳಿಗೆಯಲ್ಲಿ ಶಿವನ ಮೂರ್ತಿಗಳಿವೆ!!
ಸರಿ ಅಲ್ಲಿ ಇದ್ದಂತಹ ದೇವಾಲಯವನ್ನು ಕೆಡವಿ ತಾಜ್ ನಿರ್ಮಿಸಿದ್ದಾರೆ ಎಂದೇ ಅಂದುಕೊಳ್ಳೋಣ, ದೇವಾಲಯವನ್ನು ಕೆಡವಿದ ಮೇಲೆ ಅದರ ಅವಶೇಷಗಳನ್ನು ಯಾರೂ ಸಂರಕ್ಷಣೆ ಮಾಡಿ ಇಡುವುದಿಲ್ಲ, ದೇವಾಲಯವನ್ನು ಹಾಳುಮಾಡುವವನಿಗೆ ಆ ಮೂರ್ತಿಗಳನ್ನು ಸಂರಕ್ಷಣೆ ಮಾಡಬೇಕು ಅಂತ ಯಾಕೆ ಅನ್ನಿಸುತ್ತದೆ,?
ಇನ್ನು ಕೊನೆಯದಾಗಿ ನನಗನ್ನಿಸಿದ್ದು:, ತಾಜ್ ಮಹಲ್ ಯಾವುದೇ ಕಾರಣಕ್ಕೂ ತೇಜೋ ಮಹಲ್ ಅಲ್ಲ, ಕೆಲವರು ತೇಜೋ ಮಹಲ್ ಎನ್ನುತ್ತಾರೆ ಇನ್ನು ಕೆಲವರು ಅಗ್ರೇಶ್ವರ ಎನ್ನುತ್ತಾರೆ, ಕೆಲವರು ದೇವಾಲಯವನ್ನು ನಾಶಮಾಡಿ ಕಟ್ಟಿಸಿದನು ಎಂದರೆ ಇನ್ನು ಕೆಲವರು ದೇವರ ವಿಗ್ರಹಗಳನ್ನು ಮಾತ್ರ ತೆಗೆದು ಮುಸ್ಲಿಂ ಸಮಾಧಿ ನಿರ್ಮಿಸಿದರು ಎಂದು ಹೇಳುವರು ಅವರಲ್ಲೇ ಒಮ್ಮತವಿಲ್ಲ,,,
ಕೊನೆಯದಾಗಿ, ಅಮೃತಶಿಲೆಯಿಂದ ನಿರ್ಮಿಸಿದ ಹಿಂದೂ ದೇವಾಲಯಗಳನ್ನು ಹೆಸರಿಸಿ,
✍✍- *ಬಿ. ಬಿ*
No comments:
Post a Comment