Sunday, November 27, 2011

“ಪ್ರೀತಿ ಗಾಗಿ ನೆತ್ತರು ಹರಿಸಿದ ಯುವರಾಜ ” ಮರೆಯಲಾರದ ನೇಪಾಳಿ ಪ್ರೇಮ ಕಥೆ



೨೦೦೧ ಜೂನ್  ೧ ನೇ  ತಾರೀಖು ನೇಪಾಳದ ಕರಾಳ ದಿನಗಳಲ್ಲಿ ಒಂದು, ರಾಜ ಮನೆತನ ರಕ್ತದ ಮಡುವಿನಲ್ಲಿ ಬಿದ್ದ ದಿನ ಅದು . ೨೦೦೧ ರ ಜೂನ್  ೧ ಮರೆತರೂ  ಮರೆಯಲಾರದ ದಿನದಂತೆ ೧೦ ವರುಷ ಕಳೆದರೂ ಇಂದಿಗೂ  ಜನರನ್ನು ಆಗಾಗ ಕಾಡುತ್ತಿರುತ್ತದೆ.  “ಪ್ರೀತಿ ಎಂದರೆ ಮಾಯೆ ” ಅನ್ನೋದು ವಿಶ್ವಕ್ಕೆ ಅರಿವಾಗುವಂತೆ ಮಾಡಿದ ದುರಂತ ಪ್ರೇಮ ಕಾವ್ಯದ ಅಂತಿಮ ದಿನ . ರಾಜ ಪಟ್ಟವನ್ನು  ಸ್ವಿಕರಿಸ ಬೇಕಾದ ಯುವರಾಜ ರಾಜಪಟ್ಟ ಏರಲು ಕೇವಲ ೩ ದಿನಗಳು ಇರುವಾಗ ಪ್ರೀತಿಗೋಸ್ಕರ ತನ್ನ ಕುಟುಂಬದ ಅಂತ್ಯ ಹಾಡಿದ ದಿನವದು .

ದೀಪೇಂದ್ರ ನೇಪಾಳಿ  ರಾಜಕುಮಾರ ಬಿರೇಂದ್ರ ಹಾಗು ರಾಣಿ ಐಶ್ವರ್ಯ ನ ಪ್ರೀತಿಯ ಪುತ್ರ . ತನ್ನ ಬಾಲ್ಯದ ದಿನಗಳಲ್ಲಿ ಅತೀ ಚುರುಕುತನವನ್ನ ಹೊಂದಿದ ಹುಡುಗನಾಗಿದ್ದ ದೀಪೇಂದ್ರ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು  ನೇಪಾಲದ ರಾಜಧಾನಿ ಕಾಟ್ಮಂಡುವಿನಲ್ಲಿ ಇರುವ ಬುದ್ಧ ನಿಕೇತನ ಶಾಲೆಯಲ್ಲಿ ಮುಗಿಸಿದ್ದ . ಉನ್ನತ ವಿದ್ಯಾಭ್ಯಾಸವನ್ನು ಇಟನ್ ಕಾಲೇಜ್ ಇಂಗ್ಲೆಂಡ್ ನಲ್ಲಿ ಮುಗಿಸಿದ ಪ್ರತಿಭಾವಂತ . ಅಲ್ಲಿಂದ ನೇಪಾಳಕ್ಕೆ ಹಿಂತಿರುಗಿದ ಯುವರಾಜ ನೇಪಾಳ ದ ತ್ರಿಭುವನ್ ಯುನಿವರ್ಸಿಟಿಯಲ್ಲಿ ತನ್ನ ಉನ್ನತ ವ್ಯಾಸಂಗವನ್ನ ಮುಗಿಸಿ ಹಾಗೆ .ಪಿ.ಹೆಚ್.ಡಿ ಯನ್ನು ಪಡೆದುಕೊಂಡಿದ್ದ . ಜೊತೆಗೆ ದೀಪೇಂದ್ರ ಅತ್ಯುತ್ತಮ ಕರಾಟೆ ಪಟು ಕೂಡ ಆಗಿದ್ದ .

ಹಾಗೆ ಎಲ್ಲಾ  ವಿಭಾಗದಲ್ಲೂ ಮುಂದಿದ್ದ ದೀಪೇಂದ್ರ ನ ಜೀವನದಲ್ಲಿ ಬದಲಾವಣೆಯ ತಂಗಾಳಿಯನ್ನು ಬೀಸಿದವಳು ಭಾರತ ದ ಪ್ರತಿಷ್ಠಿತ  ಕುಟುಂಬವಾದ “ರಾಣ ” ಕುಟುಂಬದ ಸದಸ್ಯೆ ದೇವಯಾನಿ ರಾಣ. ದೇವಯಾನಿ ಯ ಪ್ರೇಮ ಪಾಶದಲ್ಲಿ ಸಿಲುಕಿದ ದೀಪೇಂದ್ರ ಈ ಜಗತ್ತನ್ನೇ ಮರೆತು ಬಿಟ್ಟ . ದೇವಯಾನಿ ಬಿಟ್ಟರೆ ಈ ಜಗತ್ತೇ ಇಲ್ಲ ಅನ್ನೋ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸಿದ ದೀಪೇಂದ್ರ ಹಾಗೂ ದೇವಯಾನಿ ಜೋಡಿ ಅನೇಕ ಸಲ ಜೈಪುರದ ಪ್ರೇಕ್ಷಣಿಯ ಸ್ಥಳಗಳಲ್ಲಿ ಕಾಣ ಸಿಗುತ್ತಿದ್ದವು . ಆಗಿನ ಕೆಲವು ಪತ್ರಿಕೆಗಳು ಅದನ್ನ ತನ್ನ ಪತ್ರಿಕೆಯ ಮುಖ ಪುಟದಲ್ಲಿ ಪ್ರಕಟಿಸಿದ್ದವು ಕೂಡ . ಹಾಗೆ ಕೆಲವು ವರುಷದ ನಂತರ ಇದೇ ಪ್ರೇಮ ಕಾವ್ಯ ದ ದುರಂತ ಅಂತ್ಯ ತನ್ನ ಪತ್ರಿಕೆಯ ಮುಖ ಪುಟದಲ್ಲಿ ಪ್ರಕಟವಾಗಲಿದೆ ಎನ್ನೋದು ಆ ಪತ್ರಿಕೆ ಯವರು ಉಹಿಸಿರಲು ಸಾದ್ಯವಿಲ್ಲ .


ಹೀಗೆ  ಸುಮಾರು ೫ ವರುಷ ನಡೆದ ಪ್ರೇಮ ಕಥೆ ಯ ಅಂತ್ಯ ಆದದ್ದು ಜುನ್ ೧ ೨೦೦೧ ರಂದು . ನೇಪಾಳ ರಾಜ ಕುಟುಂಬ ಒಂದೇ ಕಡೆ ಸೇರಿ ರಾತ್ರಿಯ ಬೋಜನದ ಸಮಯವನ್ನ ಸವಿಯುತಿತ್ತು . ಅಲ್ಲಿ ದೀಪೇಂದ್ರ ತನ್ನ ಮದುವೆಯ ವಿಚಾರವನ್ನ ತಾಯಿ ಐಶ್ವರ್ಯ ಹತ್ತಿರ ಪ್ರಸ್ತಾಪಿಸಿದ್ದಾನೆ . ರಾಣ ಕುಟುಂಬದ ಹುಡುಗಿ ತನ್ನ ರಾಜ ಮನೆತನದ ಸೊಸೆಯಾಗುವುದು ರಾಣಿ ಐಶ್ವರ್ಯಳಿಗೆ ಇಷ್ಟವಿರಲಿಲ್ಲ . ಯಾವುದೇ ಕಾರಣಕ್ಕೂ ದೇವಯಾನಿ ನೇಪಾಳಿ ರಾಜಕುಟುಂಬದ ಸೊಸೆಯಾಗಲು ಸಾಧ್ಯ ವಿಲ್ಲ ಅನ್ನೋದನ್ನ ನೇರವಾಗಿ ದೀಪೇಂದ್ರನಿಗೆ ಹೇಳಿದ್ದಾಳೆ . ಪ್ರೀತಿಯ ಭಲೆಯಲ್ಲಿ ಸಿಲುಕಿದ ದಿಪೇಂದ್ರ ತನ್ನ ತಾಯಿಯ ಈ ಮಾತನ್ನು ಸಹಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಷ್ಟಾಗಿ ದೇವಯಾನಿಯ ಪ್ರೀತಿ  ದೀಪೇಂದ್ರನನ್ನು   ಸುತ್ತಿ ಕೊಂಡಿತ್ತು .
ಅಲ್ಲಿಂದ ನೇರವಾಗಿ ತನ್ನ ಕೊಠಡಿಗೆ ಹೋದ ದೀಪೇಂದ್ರ ತನ್ನ ಬಳಿ ಇದ್ದ ವಿದೇಶಿ ನಿರ್ಮಿತ ಬಂದೂಕು ತಗೆದುಕೊಂಡು “ಡಿನ್ನರ್ “  ಕೋಣೆಗೆ  ಹಿಂದಿರುಗಿದ. ಆ ಪರಿಸ್ಥಿತಿಯಲ್ಲಿ ತಾಯಿಯ ಪ್ರೀತಿ ,ತಂದೆಯ ಮಮತೆ , ಸಹೋದರರ ಒಡನಾಟ ಯಾವುದೂ  ದಿಪೇಂದ್ರ ನ ಕಣ್ಣ ಮುಂದೆ ಬಂದಿಲ್ಲ . ಬಂದದ್ದು “ಪ್ರೀತಿ ” ಎಂಬ ಮಾಯೆ ಅಷ್ಟೇ .ತನ್ನಲ್ಲಿದ್ದ ಬಂದೂಕಿನಿಂದ ಅಲ್ಲಿದ್ದ   ತನ್ನ ತಾಯಿ ತಂದೆ ಸಹೋದರರು ಎಲ್ಲರ ಮೇಲೆ   ಮನ ಬಂದಂತೆ ಗುಂಡಿನ ಮಳೆಗರೆದ ….. ರಾಜ ಮನೆತನ ರಕ್ತ ಸಿಕ್ತವಾಯಿತು . ಅಷ್ಟಕ್ಕೂ ಸಂತುಷ್ಟನಾಗದ  ರಾಜಕುಮಾರ ತನ್ನ ತಲೆಗೆ ತಾನೇ  ಗುಂಡು ಹಾರಿಸಿ ಕೊಂಡ . ಆದರೂ ಆಗ  ಅವನ ಪ್ರಾಣ ಪಕ್ಷಿ ಹಾರಲಿಲ್ಲ.  ಆದರೆ ಜೂನ್  ೪ ೨೦೦೧ ರ ಸಂಜೆ ರಾಜ ಮನೆತನದ ದಿಪೇಂದ್ರ ಬರದ ಲೋಕಕ್ಕೆ ಪಯಣ ಬೆಳೆಸಿದ .. ಇಲ್ಲಿಗೆ ಸಿಹಿಯಾದ ಪ್ರೇಮ ಕಾವ್ಯ ದುರಂತ ಅಂತ್ಯವನ್ನ ಕಂಡು ಇತಿಹಾಸದ ಪುಟ ಸೇರಿತು


ವಿಶ್ವ ಕನ್ನಡಿಗ ನ್ಯೂಸ್  ನಿಂದ ಎರವಲು ಪಡೆಯಲಾಗಿದೆ..