Thursday, April 5, 2012

ಸಮಾಧಿಯೊಳಗಿನ ನಿಜ








ಜನ ಏಕೆ ಈ ತರ ನನ್ನ ನೋಡ್ತ ಇದಾರೆ ಅಂತ ಗೊತ್ತಾಗ್ತ ನೇ ಇಲ್ಲ. ಹೌದು ನಾನೇನೋ ತಪ್ಪು ಮಾಡಿದಿನಿ ಅನ್ನೋತರ ನನ್ನ ನೋಡ್ತಿದಾರೆ, ನಾನಿಲ್ಲಿ ಸ್ಮಾಶಾನದಲ್ಲಿ ಒಂಟಿಯಾಗಿ ನಿಂತಿದ್ದೆನೆ, ನನ್ನ ಕಣ್ಣೀರ ಜೊತೆ ಮಳೆಹನಿಗಳೂ ಸಹ ಒಂದಾಗಿ ಕಣ್ಣೀರು ಸುರಿಸುತ್ತಿವೆ, ಅವಳ ಸಮಾಧಿ ಮುಂದೆ ನಿಂತ ನನಗೆ ದುಃಖ ನಿಲ್ಲುತ್ತಿಲ್ಲ, ೀ ಜನರಿಗೆ ನನ್ನ ಬಗ್ಗೆ ಅನುಕಂಪವೋ ವ್ಯಗ್ಯವೋ ತಿಳಿಯುತ್ತಿಲ್ಲ ಬಿಟ್ಟ ಕಣ್ಣು ಬಿಟ್ಟಂತೆಯೇ ನನ್ನ ಕಡೆ ತಾತ್ಸಾರ ದಿಂದ ನೋಡುತ್ತ ಊರಕಡೆ ತೆರಳುತ್ತಿದ್ದಾರೆ. 'ಜನರೆಲ್ಲಾ ಕೇಳುತ್ತಿದ್ದರು ನಿನಗೂ ಅವಳಿಗೂ ಏನು ಸಂಬಂಧ. ?' ಎಂದು ಅವರಿಗೇನು ಗೊತ್ತು ಹೆಸರೇ ಇಲ್ಲದ ಸಂಬಂಧಗಳು ನೂರೆಂಟಿವೆ ಎಂದು? ಅವರಾರಿಗೂ ನಾನು ಅವಳ ಮನೆಗೆ ಹೋಗುವುದು ಇಷ್ಟ ಇರಲಿಲ್ಲ, ಹಲವಾರು ಜನರ ಬಾಯಲ್ಲಿ ನಮ್ಮ ಬಗ್ಗೆ ತರಾವರಿ ಕಥೆಗಳು ಹುಟ್ಟಿಕೊಂಡಿವೆ.ಅವಳು ಈಗ ಇದ್ದಿದ್ದರೆ ಏನೆಂದುಕೊಳ್ಳುತ್ತಿದ್ದಳೋ? ಅವಳೀಗ ಚಿರ ನಿದ್ರೆಗೆ ಜಾರಿದ್ದಾಳೆ, ಬಹುಷ ಅವಳ ಸಾವಿಗೆ ನಾನೂಕೂಡ ಕಾರಣವಾಗಿದ್ದೆ. !.


ಮೊನ್ನೆ ಸಂಜೆ ನನಗೆ ತುಂಬಾ ಜ್ವರ ಎದ್ದೇಳಲೂ ಸಹ ಆಗದಂತಹ ಕೈಕಾಲು ನೋವು, ನಾನವಳ ಮನೆಯ ಹಾಸಿಗೆಯಲ್ಲಿದ್ದೆ ರಾತ್ರಿ ಎಂಟು ಗಂಟೆಯಾದರೂ ಅವಳ ಸುಳಿವಿಲ್ಲ. ಬಹುಷ ಡಾಕ್ಟರ್ ರನ್ನು ಕರೆತರಲು ಹೋಗಿರಬಹುದು, ಹೊರಗೆ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು, ಬೆಳಕಾದರೂ ಅವಳು ಬರಲಿಲ್ಲ ಆದರೆ ಸುದ್ದಿ ಬಂತು ಅವಳು ಸಿಡಿಲ ಹೊಡೆತಕ್ಕೆ ಸಿಕ್ಕಿ ಸತ್ತಳೆಂದು. ನಿಂತನೆಲವೇ ಕುಸಿದುಹೋದ ಅನುಭವ ನನಗೆ,
ಅವಳ ಅಂತ್ಯ ಸಂಸ್ಕಾರಕ್ಕೆ ಬಂದ ಜನ ಸಾವಿರಾರು ಬಗೆ ಬಗೆಯಾಗಿ ನಮ್ಮ ಆಡಿಕೊಂಡರು ಅವಳನ್ನು ಸಮಾಧಿ ಮಾಡಿದ ಬಳಿಕ ಎಲ್ಲರೂ ಹೋದರೂ ನನಗೆ ಅಲ್ಲಿಂದ ಹೊರಡಲು ಮನಸ್ಸಾಗಲಿಲ್ಲ. ಅವಳ ಅಗಲಿಕೆಯ ನೋವಿನಿಂದ ಹೊರ ಬಾ ಎಂದು ಸಂತೈಸುವಂತೆ ಮಳೆ ಬೀಳುತ್ತಿದೆ. ಸ್ಮಶಾನದಲ್ಲಿ ನನ್ನ ಹೊತುಪಡಿಸಿ ಯಾರೂ ಇಲ್ಲ , ರಾತ್ರಿಯಾಗುತ್ತಾ ಮಳೆ ಹೆಚ್ಚಾಯಿತು.  ಆ ಮಂದ ಬೆಳಕಿನಲಿ ಭಾರವಾದ ಹೆಜ್ಜೆಗಳನ್ನಿಡುತ್ತ ಸ್ಮಾಶಾನದ ಗೇಟ್ ಬಳಿಯತ್ತ ನೆಡೆಯುತ್ತಿದ್ದೆ.

ಅರೇ ಅದೇನಾಶ್ಚರ್ಯ !! ಯಾವುದೋ ಸಮಾಧಿಯೊಗಿದ್ದ ದೇಹವೊಂದು ಮೇಲೆ ಬಂದು ತನ್ನ ಸಮಾಧಿ ಮೇಲೆನೋ ಬರೆಯುತ್ತಿತ್ತು.  ಹೌದು ಸ್ಪಷ್ಟವಾಗಿ ಕಾಣಿಸುತ್ತಿದೆ "ವ್ಯವಹಾರದಲ್ಲಿ ನಷ್ಟವಾಗಿ ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡು ಸತ್ತೆ " ಎಂದು ಬರೆಯಿತು, ನಾನು ಸುತ್ತಾ ಕಣ್ಣಾಡಿಸಿದೆ ಪ್ರತಿಯೊಂದು ಸಮಾಧಿಯಿಂದ ದೇಹಗಳು ಹೊರ ಬಂದು ತನ್ನ ಸಾವಿನ ಕಾರಣವನ್ನು ಬರೆಯುತ್ತಿದ್ದವು.  ನನಗೆ ತಕ್ಷಣ ಅವಳ ನೆನಪಾಯಿತು, ಅವಳಿರುವ ಸಮಾಧಿಯ ಕಡೆ ಓಡಿದೆ. ಹೌದು ಅವಳ ದೇಹ ಕೂಡ ಎದ್ದು ತನ್ನ ಸಾವಿನ ಕಾರಣವನ್ನು ಬರೆಯುತ್ತಿತ್ತು. "ನನ್ನ ಪ್ರೀತಿಸುವ ಹುಡುಗನಿಗೆ ಮೋಸಮಾಡಿ ಬೇರೊಬ್ಬನನ್ನು 'ಸೇರಿ' ಹಿಂತಿರುಗಿ ಬರುವಾಗ ಸಿಡಿಲುಬಡಿದು ಸತ್ತೆ" ಎಂದು ಅದು ಬರೆಯಿತು. ಅದನ್ನು ಓದಿ ಮುಗಿಸಿದ ಮೇಲೆ ನನಗಲ್ಲಿ ನಿಲ್ಲಲಾಗಲಿಲ್ಲ........