Wednesday, May 18, 2011

ಹೊಸ ಬೈಕ್









ಸಂತಾ ಮತ್ತು ಬಂತಾ ಒಂದೇ ಆಫೀಸಿನಲ್ಲಿ ಕೆಲಸ ಮಾಡುವವರು. ದಿನಾ ಜೊತೆಯಲ್ಲಿ ಬಸ್ಸಿನಲ್ಲಿ ಹೋಗುವವರು. ಒಂದು ದಿನ ಸಂತಾ ಬಸ್ಸಿಗೆ ಕಾಯುತ್ತಿದ್ದಾಗ ಬಂತಾ ಹೊಸ ಬೈಕಿನಲ್ಲಿ ಬಂದ. ಸಂತಾಗೆ ಆಶ್ಚರ್ಯವಾಯಿತು. "ಇದು ಯಾವಾಗ ಹೊಸ ಬೈಕು ತೆಗೆದುಕೊಂಡೆ" ಎಂದು ಕೇಳಿದ. ಬಂತಾ ಹೇಳಿದ "ಲಾಟರಿ ಹೊಡೆಯಿತು".
"ಹೌದೇ? ಹೇಗೆ? "
"ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಹೊರಡುವಾಗ ತುಂಬ ರಾತ್ರಿ ಆಗಿತ್ತು. ಯಾವ ಬಸ್ಸೂ ಸಿಗಲಿಲ್ಲ. ಆಗ ಒಂದು ಬೈಕ್ ಬಂತು. ಲಿಫ್ಟ್ ಬೇಕಾ ಎಂದು ಕೇಳಿತು. ಬೈಕಿನಲ್ಲಿ ಹಿಂದೆ ಕುಳಿತು ಹೋಗುತ್ತಿದ್ದಾಗ ಗೊತ್ತಾಯಿತು, ಬೈಕಿನಲ್ಲಿದ್ದದ್ದು ಹೆಣ್ಣು ಎಂದು. ಆಕೆ ಒಂದು ನಿರ್ಜನ ಪ್ರದೇಶದಲ್ಲಿ ಬೈಕು ನಿಲ್ಲಿಸಿದಳು. ತನ್ನೆಲ್ಲಾ ಬಟ್ಟೆ ಕಳಚಿ ಇಟ್ಟಳು. ನಂತರ ಹೇಳಿದಳು -ಎಲ್ಲ ನಿನ್ನದೇ. ಏನು ಬೇಕೊ ತೆಗೆದುಕೊ. ನಾನು ಬೈಕು ತೆಗೆದುಕೊಂಡು ಬಂದೆ"
"ನೀನು ಮಾಡಿದ್ದು ಸರಿಯಾಗಿದೆ. ಹೆಣ್ಣಿನ ಬಟ್ಟೆ ತೆಗೆದುಕೊಂಡು ನಮಗೇನು ಪ್ರಯೋಜನ?"
 




Saturday, April 23, 2011

_ಹೃದಯದ ಬೂದಿ_



ಬೀದಿ ಬಿಕಾರಿ ನಾನಲ್ಲ
ದಾರಿತಪ್ಪಿಯೂ ಬಂದಿಲ್ಲ
ನಾನಾರೆಂದು ಗೊತ್ತಾಗಲಿಲ್ಲವೆ?
ಇರಲಿ ಬಿಡು:
ಈಗ ನೀನು ಉಪ್ಪರಿಗೆಯಲ್ಲಿರುವೆ.


ಅದೆಷ್ಟೋಸಲ ಬಂದು
ನನ್ನ ಮನದ ಕದವ ತಟ್ಟಿ
ಎದೆಯ ಮುಟ್ಟಿ
ಕೊಟ್ಟಿದ್ದ ಭಾಷೆ ನೆನಪಿಲ್ಲವೇ?
ಹೋಗಲಿ ಬಿಡು:
ಪ್ರೀತಿಯ ಪವಿತ್ರತೆ ಗೊತ್ತಿಲ್ಲ ನಿನಗೆ

ನನ್ನ ಮನೆಯಂಗಳಕೆ
ಹಾಕಬೇಕಿದ್ದ ರಂಗೋಲಿ
ಇನ್ನೊಬ್ಬರ ಮನೆಯಂಗಳದ
ರಂಗವಲ್ಲಿಯಾಗಿರುವೆ ಈಗ.

ಓ ಅರಗಿಣಿಯೇ
ನೆನಪಿದ್ದರೆ ಸಾಕು ನಿನಗೆ
ನೀ ಹಾಕುವ ರಂಗೋಲಿ
ನನ್ನ ಹೃದಯದ ಸುಟ್ಟ ಬೂದಿ ಎಂದು...!!







Thursday, April 21, 2011

ಕೆಲವು ಸಾಲುಗಳು

ಕಣ್ತುಂಬ ನೀರು
ನೋವಿಂದ ಅಲ್ಲ: ನಿನ್ನ ನೆನಪಿಂದ!!

ಕನಸಾಗಲಾರೆ ನಾ
ಬೆಳಗಾದ ಮೇಲೆ ಇಲ್ಲದ ಭಯ!!

ತುಟಿಯಮೇಲೆ ತುಟಿ,
ಮುತ್ತಿಗಲ್ಲ: ಮೌನಕ್ಕೆ!!

ನಕ್ಕು ಬಿಡಬೇಡ
ಪ್ರೀತಿಯಿದು ಕಾಗದದ ಹೂವಲ್ಲ!

ನಾನು ಬರೆಯುತ್ತಾ ಹೋಗಬೇಕು
ಹಾಗಾಗಿ ನೀ ಪ್ರೀತಿಸುತ್ತಾ ಹೋಗು!!





Thursday, April 14, 2011

ಜೀವನವೆಂದರೆ!!!

ಉರಿ ಬಿಸಿಲಿನಲಿ
ಡಾಂಬರಿನ ದಾರಿಯಲಿ
ಕೊಡೆ ಹಿಡಿದು
ಬರಿಗಾಲಲ್ಲಿ ನೆಡೆದಂತೆ...





Saturday, February 19, 2011

_ದೇವರಲ್ಲಿ ಒಂದು ಮನವಿ_


ಓ ನನ್ನ Cricket ದೇವರೇ
ನೀನು ಗೆದ್ದೇ ಗೆಲ್ಲಿಸುತ್ತಿಯ ಅಂತ
ಇಡೀ ವಿಶ್ವಕ್ಕೇ ಗೊತ್ತು
ಆ ಒಂದು ಶಕ್ತಿ ನಿನ್ನಲ್ಲಿದೆ.

ಇದು ಸ್ವಲ್ಪ ಅತಿಶಯೋಕ್ತಿಯಾಗ ಬಹುದು
ಆದರೆ

ನಾವು ನಿಮ್ಮ ಮೇಲೆ ಇಟ್ಟಿರುವ
ಭರವಸೆ ಅತಿಯಾದುದು

ನಿನ್ನ ಕೈಯಲ್ಲಿ ಒಮ್ಮ
ವಿಶ್ವಕಪ್ ನೋಡುವಾಸೆ

ಮರೆಯದೇ ತೆಗೆದುಕೊಂಡು ಬಾ!!!


----------------ಒಂಟಿಪ್ರೇಮಿ

Sunday, February 6, 2011


Sunday, January 30, 2011