Thursday, September 6, 2012

ಸುಟ್ಟು ಬೂದಿಯಾದವು.

ಬೆಂಕಿಯಲ್ಲಿ
ಅವಳ ಪ್ರೇಮ ಪತ್ರಗಳನ್ನಾಕಿದೆ
ಉರಿಯಲಿಲ್ಲ

ಜೊತೆಗೆ
ನನ್ನ ನೆನಪುಗಳನ್ನೂ
ಹಾಕಿದೆ
ಸುಟ್ಟು ಬೂದಿಯಾದವು.

ಬಯಸಿದ್ದು ಸಿಗದೇಇದ್ದರೆ

ಚಿಕ್ಕವನಿದ್ದಾಗ
ಬಯಸಿದ್ದು
ಸಿಗದೇಇದ್ದರೆ
ಅತ್ತು 'ಪಡೆದೆ'

ದೊಡ್ಡವನಾದಾಗ
ಬಯಸಿದ್ದು
ಸಿಗದೇ ಇದ್ದಾಗ
ಅತ್ತು 'ಮರೆತೆ'

ಜೀವನದಲ್ಲಿ ತುಂಬಾ ಅವಸರ ಪಟ್ಟೆ ಅಂತ ಅನ್ನಿಸಿದ್ದು

ಜೀವನದಲ್ಲಿ ತುಂಬಾ
ಅವಸರ ಪಟ್ಟೆ ಅಂತ ಅನ್ನಿಸಿದ್ದು
ನನ್ನವಳು ಅವಳ ಸ್ನೇಹಿತೆಯನ್ನು
ಪರಿಚಯ ಮಾಡಿಸಿದಾಗ...

ಹುಡುಗರಿಗೆ ಸಲಹೆ

ಕಣ್ತುಂಬ ನಿದ್ದೆ ಮಾಡಬೇಕಾ?
ಹೊಟ್ಟೆ ತುಂಬಾ ಊಟ ಮಾಡಬೇಕಾ?
Mobile ನಲ್ಲಿ Balance ಹಾಗೇ ಉಳಿಬೇಕಾ?

ಹಾಗಾದ್ರೆ ಹುಡುಗೀರಿಂದ ದೂರವಿರಿ

ತ್ಯಾಗ

ನಾನು ಅವಳ ಪ್ರೀತಿಗಾಗಿ
ಏನೆಲ್ಲಾ ತ್ಯಾಗ ಮಾಡಿದೆ

ಅವಳೂ ಕೂಡ ಅವಳ
ಪ್ರೀತಿಗಾಗಿ
ನನ್ನ ತ್ಯಾಗ ಮಾಡಿದಳು

ಮರಳಿನ ಕಣ ನಾನು

ಸಾಗರದ ದಡದಲ್ಲಿ
ನಿನಗಾಗಿ ಕಾಯುತ್ತಿರುವ
ಮರಳಿನ
ಕಣ ನಾನು

ಅಲೆಯಂತೆ ನನ್ನ ಬಾಳಲಿ
ಎಂದು ಬರುವೆ ನೀನು???

ಅವಳು ಮೋಸ ಮಾಡುತ್ತಾಳೆಂದು ಗೊತ್ತಿದ್ದರೆ

ಅವಳು ಮೋಸ
ಮಾಡುತ್ತಾಳೆಂದು
ಗೊತ್ತಿದ್ದರೆ

ಅವಳಹಾಗೇ
ನಾನೂ ಕೂಡ
ಇನ್ನೊಬ್ಬರನ್ನ
Additional ತರ
ನೆನಪಿನಲ್ಲಾದರೂ
ಇಟ್ಟುಕೊಂಡಿರುತ್ತಿದ್ದೆ