Saturday, May 28, 2011

ಮೇಸೇಜ್ ಪವರ್






ರಾಮ ಬಿಲ್ಲು ಮುರಿದದ್ದಕ್ಕೆ
ಸೀತೆ ಅಪ್ಪನನ್ನು ಬಿಟ್ಟು ಬಂದ್ಲು

ಕೃಷ್ಣ ಕೊಳಲು ಊದಿದ್ದಕ್ಕೆ
ರಾಧೆ ಅಪ್ಪನನ್ನು ಬಿಟ್ಟು ಬಂದ್ಲು

ನಾನು ಬರೀ ಒಂದು ಮೇಸೇಜ್ ಕಳಿಸಿದ್ದಕ್ಕೆ
ಅವಳು ಅವರಪ್ಪನನ್ನ ಕರೆದುಕೊಂಡು ಬಂದ್ಲು........!!






ಮ್ಯಾಜಿಕ್:



ಒಂದು ಗ್ಲಾಸ್ ತಣ್ಣನೆಯ
ನೀರು ತೆಗೆದುಕೊಳ್ಳಿ
ನಿಮ್ಮ ಪಕ್ಕದಲ್ಲಿರುವವರ
ತಲೆಯಮೇಲೆ ಸುರಿಯಿರಿ
ಈಗ ಅವರು ಬಿಸಿಯಾಗುತ್ತಾರೆ !!

Try it.....

Tuesday, May 24, 2011

ಗಾಂಧಿಗೂ ಒಬ್ಬ Lover ಇದ್ದಳು!




ಗಾಂಧೀಗೂ ಒಂದು ಅಫೇರ್ ಇತ್ತು!? ಮಕ್ಕಳೂ ಆಗಿದ್ದರು!! ಇತ್ತ,ಗಾಂಧೀಜಿಯನ್ನೇ ಮೋಹಪರವಶಗೊಳಿಸಿದ ಆಕೆಗೂ ಮದುವೆಯಾಗಿತ್ತು.ಮಕ್ಕಳಿದ್ದರು.ಅಷ್ಟೇ ಅಲ್ಲಾ, ಅಕೆಯ ಗಂಡ ಗಾಂಧೀಜಿಯನ್ನು,ಅವರ ನಾಯಕತ್ವವನ್ನು ಬಹುವಾಗಿ ಮೆಚ್ಚಿಕೊಂಡಿದ್ದ. ಇವತ್ತು ಗಾಂಧೀಜಿಯನ್ನು ಯುಗಪುರುಷ, ದೈವಾಂಶಸಂಭೂತ,ರಾಷ್ಟ್ರಪಿತ ಎಂದಷ್ಟೇ ಭಾವಿಸಿರುವವರಿಗೆ ಈ ಅಫೇರ್ ನ ಸುದ್ದಿ ವಿಚಿತ್ರವಾಗಿ ಕಾಣಬಹುದು.ಶಾಕ್ ನೀಡಬಹುದು.ವಿಪರ್ಯಾಸ ಅನ್ನಿಸಬಹುದು.ಅಥವಾ ನಂಬಲು ಸಾಧ್ಯವೇ ಇಲ್ಲ ಎಂದು ಉದ್ಗರಿಸುವಂತೆ ಮಾಡಲೂಬಹುದು. ಆದರೆ, ಗಾಂಧೀಜಿಗೂ ಒಂದು ಅಫೇರ್ ಇತ್ತೆಂಬುದು ಸ್ಪಷ್ಟ. ಅಂಥ ಗಾಧೀಜಿಯೇ ಕೆಲ ವರ್ಷಗಳ ಮಟ್ಟಿಗೆ ಹೆಣ್ಣೋಬ್ಬಳ ಮೋಹದಲ್ಲಿ ಮುಳುಗಿದ್ದರು ಎಂಬುದು ಅಷ್ಟೇ ಸತ್ಯ! ಆಕೆ ಸರಳದೇವಿ ಗಾಂಧೀಜಿಯ ಮನಸು ಕದ್ದು, ಕೆಲ ಕಾಲದ ಮಟ್ಟಿಗೆ ಅವರಿಗೆ ಸ್ಫೂರ್ತಿ ದೇವತೆಯೇ ಆಗಿದ್ದಾಕೆಯ ಹೆಸರು ಸರಳಾದೇವಿ. ಆಕೆ ಬೇರೆ ಯಾರು ಅಲ್ಲ.ರವೀಂದ್ರನಾಥ ಟ್ಯಾಗೋರ್ ಅವರ ತಂಗಿಯ ಮಗಳು.ಆ ಕಾಲಕ್ಕೇ ಆಕೆ ಭುವನ ಸುಂದರಿ! 'ಬಂಗಾಳದ ಜೋನ್ ಆಫ್ ಆರ್ಕ್' ಎಂಬ ಬಿರುದೇ ಆಕೆಗಿತ್ತು. ಆ ಕಾಲಕ್ಕೇ ಆಕೆ ಪದವಿ ಪದೆದಿದ್ದಳು. ಲೇಖಕಿಯಾಗಿ ಹೆಸರು ಮಾಡಿದ್ದಳು ಮತ್ತು ಮಧುರಾತಿಮಧುರವಾಗಿ ಹಾಡುತ್ತಿದ್ದಳು. ಯಾವುದೆ ಸಮಾರಂಭವಿರಲಿ,ಅಲ್ಲಿ ಸರಳಾದೇವಿ ಬಂದಿದ್ದಾಳೆ ಎಂದರೆ ಜನ ಜಾತ್ರೆಯೇ ಸೇರಿಬಿಡುತ್ತಿತ್ತು. ಎಲ್ಲರೂ ಆಕೆಯ ಚೆಲುವನ್ನು ಆರಾಧಿಸುವವರೇ. ಆ ದಿನಗಳಲ್ಲಿ ಪ್ರಮುಖನಾಯಕರು ಅನಿಸಿಕೊಂಡಿದ್ದ ಪ್ರತಿಯೊಬ್ಬರೂ ಸರಳಾದೇವಿಯ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು.ಕೆಲವರಂತೂ ಆಕೆಗಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ದರಾಗಿದ್ದರು! ಇಂಥ ಸುರಸುಂದರಿಗೆ ಗಾಂಧೀಜಿಯೂ ಮರುಳಾದರು ಅಂದರೆ ಅದರಲ್ಲಿ ಅಚ್ಚರಿ ಏನಿದೆ? 1901ರಲ್ಲಿ ಕೋಲ್ಕತ್ತಾದಲ್ಲಿ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿಯೂ ಬಂದಿದ್ದರು.ಆಗ ಸರಳಾದೇವಿಗೆ 29 ವರ್ಷ. ಇನ್ನೂ ಮದುವೆಯಾಗಿರಲಿಲ್ಲ. ಆ ಹೊತ್ತಿಗೇ ಆಕೆ ಗಾಯಕಿ ಮತ್ತು ಲೆಖಕಿಯಾಗಿ ಹೆಸರು ಮಡಿದ್ದರು. 'ಭಾರತಿ' ಹೆಸರಿನ ಪತ್ರಿಕೆಯನ್ನೂ ಹೊರತರುತಿದ್ದರು. ಸರಳಾದೇವಿ ರಾಗ ಸಂಯೋಜಿಸಿದ್ದ ಗೀತೆಯೊಂದನ್ನು 58ಮಂದಿ ಗಾಯಕ/ಗಾಯಕಿಯರು ಒಟ್ಟಾಗಿ ಹಾಡುವ ಮೂಲಕವೇ ಅಧಿವೇಶನ ಆರಂಭವಾಗಿತ್ತು. ಇದು ಗಾಂಧೀಜಿ ಮತ್ತು ಸರಳಾದೇವಿಯವರ ಮೊದಲ ಭೇಟಿ. ಈ ಸಂದರ್ಭದಲ್ಲಿ ಇಬ್ಬರು ಮದ್ಯೆ ವಿಶೇಷ ಮಾತುಕತೆ,ಪರಸ್ಪರ ಮೆಚ್ಚುಗೆಯ ಮಾತು ಎರಡೂ ಕೇಳಿಬರಲಿಲ್ಲ.ಆದರೆ, ಆ ಹೊತ್ತಿಗಾಗಲೇ ಆಫ್ರಿಕಾದಲ್ಲಿ ವರ್ಣಬೇಧನೀತಿಯ ವಿರುದ್ದ ಸಮರ ಸಾರಿ ಹೆಸರಾಗಿದ್ದ ಗಾಂಧೀಜಿಯಿಂದ ಒಂದು ಲೇಖನ ಬರಸಿದರೆ ಹೇಗೆ ಎಂಬ ಯೋಚನೆ ಸರಳಾದೇವಿಗೆ ಬಂತಂತೆ. ಮುಂದೆ,1940ರಲ್ಲಿ ಬರೆದ ಪುಸ್ತಕವೊಂದರಲ್ಲಿ ಆಕೆಯೇ ಹೀಗೆ ಹೇಳಿಕೋಂಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಸರಳಾದೇವಿಯವರ ತಂದೆ ಜಾನಕಿನಾಥ ಗೋಸಾಲ್ ಅವರು ಗಾಂಧೀಜಿಗೆ ಪರಿಚಿತರೇ ಆಗಿದ್ದರು.ಅವರು ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿದ್ದರು.ಬಾಲ್ಯದಿಂದಲೂ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು,ಸ್ವಾತಂತ್ರ್ಯ ಸಂಗ್ರಾಮದ ಮಾತುಗಳನ್ನು ಕೇಳಿಕೊಂಡು ಬೆಳೆದ ಪರಿಣಾಮ-ಸರಳಾದೇವಿ ಕೂಡ ಸ್ವಾತಮತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡುತಿದ್ದ ಯುವಕರಿಗೆ ಬಹಿರಂಗವಾಗಿ ಪ್ರೋತ್ಸಾಹ ನೀಡುವ ಮೂಲಕ ಪೊಲೀಸರ ಕೆಂಗಣ್ಣಿಗೂ ಬಿದ್ದಿದ್ದರು. ಇಂಥ ಹಿನ್ನೆಲೆಯ ಸರಳಾದೇವಿಗೆ1905 ರಲ್ಲಿ ಪಂಜಾಬ್ ನ ರಾಮ್ ಭುಜ್ ದತ್ ಚೌಧುರಿ ಎಂಬಾತನೊಂದಿಗೆ ಮದುವೆಯಾಯಿತು. ಆರ್ಯ ಸಮಾಜಿಯಾಗಿದ್ದ ಚೌಧುರಿಗೆ ಇದು ಮೂರನೇ ಮದುವೆ. ಮೊದಲ ಇಬ್ಬರು ಹೆಂಡಿರೂ ತೀರಿಕೊಂಡಿದ್ದರು. ಸ್ವಾರಸ್ಯವೆಂದರೆ ರಾಮ್ ಭುಜ್ ದತ್ ಚೌದುರಿ ಕೂಡ 'ಹಿಂದುಸ್ತಾನ್' ಹೆಸರಿನ ಪತ್ರಿಕೆಯನ್ನು ಹೊರತರುತಿದ್ದರು. ಪಂಜಾಬ್ ಆಗ ಲಾಹೋರ್ ಗ ಸೇರಿ ಕೊಂಡಿತ್ತು.ಮಗಳು ಬಂಗಾಳದಲ್ಲಿದ್ದು ಪೊಲೀಸರ ಕೆಂಗಣ್ಣಿಗೆ ಬೀಳುವುದಕ್ಕಿಂತ ಲಾಹೋರ್ ನಲ್ಲಿ ಗಂಡನ ಮನೆಯಲ್ಲಿ ಸುಖವಾಗಿರಲಿ ಎಂದೇ ಆಕೆಯ ತಾಯಿ-ತಂದೆ ಇಚ್ಚಿಸಿದ್ದರು. 1901ರಲ್ಲಿ ಪರಿಚಯವಾಯ್ತಲ್ಲ, ಅಂದನಿಂದ 1919ರವರೆಗೆ ಗಾಂಧೀಜಿ ಮತ್ತು ಸರಳದೇವಿಯರ ಸಂಬಂಧ ಹೇಗಿತ್ತು `ಎಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ. 1919ರಲ್ಲಿ ಲಾಹೋರ್ ಗೆ ಬರುತ್ತಾರೆ ಗಾಂಧೀಜಿ. ಆ ಸಮಯದಲ್ಲಿ ಸರಳಾದೇವಿಯ ಪತಿ ರಾಮ್ ಭುಜ್ ದತ್ ಚೌಧುರಿ ಜೈಲು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಸರಳಾದೇವಿಯನ್ನು ಭೇಟಿಯಾಗುವ ಗಾಂಧಿಜಿ, ಕೆಲ ದಿನಗಳ ನಂತರ ಸಾಬರಮತಿ ಆಶ್ರಮದ ಅನುಸೂಯಾ ಬೆನ್ ಎಂಬಾಕೆಗೆ ಹೀಗೆ ಬರೆಯುತ್ತಾರೆ: 'ಇಲ್ಲಿ ಸರಳಾದೇವಿ ನನ್ನನ್ನು ಚೆನ್ನಾಗಿ, ತುಂಬಾ ಚೆನ್ನಾಗಿ ನೋಡಿಕೊಳ್ತಾ ಇದ್ದಾಳೆ.ಆಕೆಯ ಸಾನಿಧ್ಯದ ನನ್ನಲ್ಲಿ ಹೊಸ ಉತ್ಸಾಹ ತುಂಬಿದೆ.ನನ್ನ ಪಾಲಿಗಂತ್ತೂ ಆಕೆ ಸ್ಫೂರ್ತಿ ದೇವತೆಯೇ ಆಗಿದ್ದಾಳೆ'.... ಮುಂದೆ 1920ರ ಹೊತ್ತಿಗೆ ಗಾಂಧೀಜಿಯ ಮಾತು ಸಂಪೂರ್ಣವಾಗಿ ಬದಲಾಗುತ್ತದೆ 'ಸರಳಾದೇವಿ ಮತ್ತು ನಾನು ಮಾನಸಿಕವಾಗಿ ಮದುವೆಯಾಗಿದ್ದೇವೆ' ಅಂದುಬಿಡುತ್ತಾರೆ!

'ಸರಳಾದೇವಿಯೂ, ನಾನೂ ಮಾನಸಿಕವಾಗಿ ಒಂದ್ದಾಗಿದ್ದೇವೆ' ಎಂದು ಘೋಷಿಸಿದರಲ್ಲ ಆಗ ಸರಳಾದೇವಿಗೆ 47 ವರ್ಷ. ಆದರೇನಂತೆ? ಆಕೆಯ ಚೆಲುವು ಒಂದಿನಿತೂ ಮಾಸಿರಲಿಲ್ಲ. ಆ ನಡುವಯಸ್ಸಿನಲ್ಲೂ ಆಕೆ ಅಪ್ಸರೆಯಂತೆ ಕಾಣುತಿದ್ದಳು.ಮಧುರವಾಗಿ ಹಾಡುತಿದ್ದಳು. ಮುದ್ದಾಗಿ ಬರೆಯುತಿದ್ದಳು.ಜೊತೆಗಿರುವವರಿಗೆ ಇಷ್ತವಾಗುವಂತೆಯೇ ನಡೆದುಕೊಳ್ಳುತ್ತಿದ್ದಳು. ಸರಳಾದೇವಿಯ ಈ ವರ್ತನೆ ಗಾಂಧೀಜಿಗೆ ಎಷ್ಟೊಂದು ಇಷ್ಟವಾಯಿತು ಅಂದರೆ ಪತ್ನಿ ಕಸ್ತೂರಿಬಾ ಅವರನ್ನು ಈಕೆಯೊಂದಿಗೆ ಕ್ಷಣ ಕ್ಷಣವೂ ಹೋಲಿಸಿ ನೋಡುತಿದ್ದರು. ಪ್ರತಿ ಸಂದರ್ಭದಲ್ಲೂ ಅವರ ಮನಸ್ಸು ಸಹಜವಾಗಿಯೇ ಸರಳಾದೇವಿಗೆ ಹೆಚ್ಚು ಅಂಕ ಕೊಡುತಿತ್ತು! ಮುಂದೆ, 1935ರಲ್ಲಿ ಅಮೆರಿಕಾದ ಹೆಸರಾಂತ ಬರಹ ಗಾರ್ತಿ ಮಾರ್ಗರೇಟ ಸಿಂಗರ್ ಅವರೊಂದಿಗೆ ಮಾತಾಡುತ್ತಾ ಗಾಂಧೀಜಿ ಹೀಗೆ ಹೇಳಿದ್ದಾರೆ; 'ನಿಮಗೂ ಗೊತ್ತಿರಬಹುದು; ಕಸ್ತೂರಿಬಾ ಅನಕ್ಷರಸ್ಥೆ, ಸಾಧಾರಣ ಸುಂದರಿ, ವಿದೇಶಿ ಸಂಸ್ಕೃತಿಯ ಗಂಧ-ಗಾಳಿ ಅರಿಯದವಳು. ಆರಂಭದಲ್ಲಿ ಆಕೆಯ ಸಾನ್ನಿದ್ಯ ನನಗೆ ಭೇಡವಾಗಿತ್ತು. ಒಂದು ಸಂದರ್ಭದಲ್ಲಂತೂ ಒಬ್ಬ ಸುಶಿಕ್ಷಿತ, ಸ್ಫುರದ್ರೂಪಿ ಹೆಂಗಸಿನಲ್ಲಿ ನಾನು ಅನುರಕ್ತನಾಗಿಬಿಟ್ಟಿದ್ದೆ.. ಆದರೆ ಅದೃಷ್ಟವಶಾತ್ ಆ ಮೋಹದ ಬಲೆಯಿಂದ ಮುಕ್ತನಾದೆ!' ಗಾಂಧೀಜಿ ಹೇಳಿ ಕೊಂಡ ಆ ಸುಶಿಕ್ಷಿತ ಹೆಂಗಸು ಬೇರೆ ಯಾರೂ ಅಲ್ಲ ಆಕೆಯೇ ಸರಳಾದೇವಿ!


ಇತ್ತ ಸರಳಾದೇವಿ ಕತೆಯೂ ಭಿನ್ನವಾಗಿರಲಿಲ್ಲ. ಆಕೆ ಗಾಂಧೀಜಿಯನ್ನು ಪ್ರೀತಿಸುತಿದ್ದಳು. ಗೌರವಿಸುತಿದ್ದಳು. ಆರಾಧಿಸುತಿದ್ದಳು. ಗಾಂಧೀಜಿ ಜೊತೆಗಿದ್ದಾರೆ ಅಂದರೆ ಆಕೆಯ ಸಂತಸ ಇಮ್ಮಡಿಸುತ್ತಿತ್ತು. ತನ್ನಂತೆಯೇ ಗಾಂಧೀಜಿ ಕೂಡ ಸಂಸಾರಸ್ಥ ಎಂದು ಹೊತ್ತಾದ ನಂತರ ಕೂಡ ಆಕೆಯ ನಿಲುವು ಬದಲಾಗಲಿಲ್ಲ. ಬದಲಿಗೆ, ಮೊದಲ ಹೆಂಡತಿ ತನಗೆ ಸರಿಯಾದ ಜೋಡಿಯಲ್ಲ ಅನಿಸಿದರೆ, ಗಂಡನಾದವನು ಎರಡನೇ ಮದುವೆಯಾದರೆ ತಪ್ಪೇನೂ ಇಲ್ಲ ಎಂದೇ ಆಕೆ ಪದೇಪದೆ ಹೇಳುತಿದ್ದಳು.ಇಂಥ ಸಂದರ್ಭದಲ್ಲೆಲ್ಲ ಗಾಂಧೀಜಿ ಬೇರೆಡೆಲೆ ಮುಖ ತಿರುಗಿಸಿಕೊಂಡು ನಿಂತು ಬಿಡುತ್ತಿದ್ದರು! ಆಕೆ ಬಹುಪತ್ನಿತ್ವದ ಪ್ರತಿಪಾದಕಿ-ಗಾಂಧೀಜಿ ಆ ವಿಷಯದ ಕಟ್ಟಾ ವಿರೋಧಿ. ಹಾಗಿದ್ದರೂ ಇಬ್ಬರ ಮಧ್ಯಒಲವಿನ ಗುಲಾಬಿ ಅರಳಿತು ನಗುತ್ತಲೇ ಇತ್ತು.ಗಾಂಧೀಜಿಯ ಮೇಲಿನ ಪ್ರೇಮದಿಂದಲೇ ಅವರ ಸತ್ಯಾಗ್ರಹ ಚಳುವಳಿ, ಖಾದಿ ಪ್ರಚಾರದ ಸಭೆಗಳಲ್ಲಿ ಸರಳಾದೇವಿ ಪಾಲ್ಗೊಂಳು. ಗಾಂಧೀಜಿಯ ಜೊತೆಜೊತೆಯಲ್ಲೇ ನಡೆದು ಹೋದಳು.
ಗಾಂಧೀಜಿ-ಸರಳಾದೇವಿ ಪ್ರೇಮ ಪ್ರಕರಣ ಪರಾಕಾಷ್ಠೆ ತಲುಪಿದ್ದು ಮತ್ತು ಅಂತ್ಯ ಗೊಂಡದ್ದು 1920 ರಲ್ಲಿ! ಆ ವರ್ಷದ ಆರಂಭದಲ್ಲಿ ಸರಳದೇವಿಯ ಪುತ್ರ ದೀಪಕ್ ಸಾಬರಮತಿ ಆಶ್ರಮಕ್ಕೆ ಬಂದ. ಅದು ವಿಪರೀತ ಶಿಸ್ತಿನ ಆಶ್ರಮ . ತಮಾಷೆಯೆಂದರೆ, ದೀಪಕ್ ಗಾಗಿ ಎಲ್ಲಾ ಕಟ್ಟುಪಾಡುಗಳನ್ನು ಸ್ವತಃಗಾಂದೀಜಿಯೇ ಸಡಿಲಿಸಿ ಬಿಟ್ಟರು! ಮುಂದೆ ಮಾರ್ಚ್ ನಲ್ಲಿ ಸರಳಾದೇವಿಯೇ ಆಶ್ರಮಕ್ಕೆ ಬಂದರು. ಆಗ ಗಾಂದೀಜಿ ಗಂಟೆಗಟ್ಟಲೆ ಆಕೆಯೊಂದಿಗೆ ಹರಟೆಗೆ ಕೂತುಬಿಡುತ್ತಿದ್ದರು. ಪರಿಣಾಮ – ಆ ಹೆಂಗಸಿನ ಜೊತೆ ಬಾಪೂ ಅವರದ್ದು ಎಂಥ ವ್ಯವಹಾರ ಎಂಬಮಾತು ಆಶ್ರಮವಾಸಿಗಳಿಂದಲೇ ಬಂತು.

ವಿಪರ್ಯಸ ಏನೆಂದರೆ- ಸರಳಾದೇವಿಯ ಮೋಹದಲ್ಲಿ ಸಂಪೂರ್ಣ ವಾಗಿ ಮುಳುಗಿದ್ದ ಗಾಂಧೀಜಿಗೆ ಇಂಥಾ ಮಾತುಗಳತ್ತ ಗಮನವೇ ಇರಲಿಲ್ಲ . ಅವರು ಯಾವುದೋ ಧ್ಯಾನಕ್ಕೆ ಬಿದ್ದವರಂತೆ "ಸರಳಾದೇವಿ ನನ್ನ ಶಕ್ತಿ ದೇವತೆ. ಆಕೆ ಮಧುರ ಕಂಠದ ಕೋಗಿಲೆ . ಆಕೆಯ ಜೊತೆಯಲ್ಲಿ ನವಭಾರತ ನಿರ್ಮಾಣ ಸಾಧ್ಯ" ಎಂದೆಲ್ಲಾ ಬರೆದುಬಿಟ್ಟಿದ್ದರು!

ಗಾಂಧೀಜಿಯ ಈ ಪ್ರೇಮದ ಕಥೆ ಚಕ್ರವರ್ತಿ ರಾಜಗೋಪಾಲಾಚಾರಿ, ಗಾಂಧೀಜಿಯ ಕಾರ್ಯದರ್ಶಿಮಹದೇವ ದೇಸಾಯಿ, ಕಸ್ತೂರಿಬಾ,ರವಿಂದ್ರನಾಥ ಟ್ಯಾಗೂರ್ ಎಲ್ಲರಿಗೂ ಗೊತ್ತಿತ್ತು ಗಾಂಧೀಜಿಯನ್ನು ಯಾವ ಸಂದರ್ಭದಲ್ಲೂ ಪ್ರಶ್ನಿಸದಿದ್ದ. ಆಕ್ಷೇಪಿಸದಿದ್ದ ಕಸ್ತೂರಿಬಾ ಈ ವಿಷಯ ತಿಳಿದು ಖಿನ್ನರಾಗಿದ್ದರು. ವಿಪರೀತ ದುಃಖಿಸಿದ್ದರು.ಅವರಿಗಿಂತ ಹೆಚ್ಚಾಗಿ ಗಾಂದಿಜಿಯ ಪುತ್ರ ದೇವದಾಸ್ ಘಾಸಿಗೊಂಡಿದ್ದ.ಸರಳಾದೇವಿಯೊಂದಿಗೆ ಸಂಬಂದ ಮುಂದುವರೆಸುವುದು ಬೇಡವೇ ಬೇಡವೆಂದು ಮೊದಲಿನಿಂದಲೂ ಎಚ್ಚರರಿಸುಲೇ ಇದ್ದರು. ಆದರೆ ಗಾಂಧೀಜಿ ಆ ಮಾತುಗಳಿಗೆ ಕಿವಿಗೊಡುತ್ತಲೇ ಇರಲಿಲ್ಲ. ಯಾವಾಗ ಸಾಬರಮತಿ ಆಶ್ರಮದಲ್ಲಿಯೂ ಗಾಂಧಿ ಮತ್ತು ಸರಳಾದೇವಿ ಅನ್ಯೋನ್ಯವಾಗಿದ್ದಾರೆ ಎಂಬ ಸುದ್ದಿ ಬಂತೋ, ಅಂದೇ ರಾಜಾಜಿ ಖಾರವಾದ ಪತ್ರವೊಂದನ್ನು ಗಾಂಧೀಜಿಗೆ ಬರೆದರು. ಅದರ ಸಾರ ಹೀಗಿದೆ:
'ನನ್ನ ಪ್ರೀತಿಯ ಬಾಪೂ' ನಿಮ್ಮ ಈಗಿನ ಸ್ಥತಿ ನೀಡಿ ನಗಬೇಕೋ ಅಳಬೇಕೋ ತಿಳಿನುತ್ತಿಲ್ಲ. ಸರಳಾದೇವಿ ಒಂದು ಮಾಯೆ ಎಂಬುದು ನಿಮಗೇಕೆ ಅರ್ಥವಾಗುತ್ತಿಲ್ಲ. ನಿಮ್ಮಿಬ್ಬರ ಪ್ರೇಮದ ಕಥೆ ಕೇಳಿ ನಿಮ್ಮ ಮಕ್ಕಳು ಹೇಗೆ ಪ್ರತಿಕ್ರಿಯಿಸಬಹುದು, ಯೋಚಿಸಿಧ್ದೀರಾ? ಇಡೀ ದೇಶ ನಿಮ್ಮೆಡೆಗೆ ಅಭಿಮಾನದಿಂದ ನೋಡುತ್ತಿದೆ. ಆದರೆ, ಅದೇ ಕ್ಷಣದಲ್ಲಿ ನೀವು ಹೆಣ್ಣೊಬ್ಬಳೆಡೆಗೆ ಆಸೆಯಿಂದ ನೋಡುತ್ತ ನಿಂತು ಬಿಟ್ಟಿದ್ದೀರಿ! ಇದು ನಾಚಿಕೆಯ ವಿಷಯವಲ್ಲವೆ? ನೀವಾದರೋ-ಪ್ರಖರ ಸೂರ್ಯ. ಆಕೆ ಎಣ್ಣೆ ಇದ್ದಷ್ಟು ಹೊತ್ತು ಮಾತ್ರ ಉರಿದ ದೀಪ. ಈ ಮಾತು ಅರ್ಥ ಮಾಡಿಕೊಳ್ಳಿ. ಆ ಮೋಹದ ಬಲೆಯಿಂದ ಬೇಗ ಹೊರಬನ್ನಿ.
ಈ ಪತ್ರ ನಿಜಕ್ಕೂ ಗಾಂಧೀಜಿಯ ಮೇಲೆ ಪ್ರಭಾವ ಬೀರಿತು. ಅದುವರೆಗೂ ಸರಳಾದೇವಿಯ ಮೋಹದಲ್ಲಿ ಎಲ್ಲವನ್ನೂ, ಎಲ್ಲರನ್ನೂ ಮರೆತಿದ್ದ ಗಾಂಧೀಜಿ ತಕ್ಷಣವೇ ಎಚ್ಚರಾದರು.ಈ ಅಫೇರ್ ನಿಂದಾಗಿ ತಮ್ಮ ಇಮೇಜ್ ಹಾಳಾಗುತ್ತೆ ಎಂದು ಹೆದುರಿದರೋ ಬೆಳೆದ ಮಕ್ಕಳ ಮುಂದೆ ನಾನು ಸಣ್ಣವ ಆಗಬಾರದೆಂದು ಯೋಚಿಸಿದರೋ ಅಥವಾ ದೇಶದ ಜನರೆಲ್ಲ ನನ್ನನ್ನು ಅಪಹಾಸ್ಯ ಮಾಡುವರೆಂದು ಲೆಕ್ಕ ಹಾಕಿದರೋ....ಭಗವಂತ ಬಲ್ಲ. ಆದರೆ ರಾಜಾಜಿಯ ಪತ್ರ ಓದಿದ ತಕ್ಷಣವೇ-'ಪ್ರೀತಿಯ ರಾಜಾಜಿ, ನಿಮ್ಮ ಎಚ್ಚರದ ಮಾತು, ನನ್ನ ಹೆಂಡತಿ,ಮಕ್ಕಳ ಒಲುಮೆ ದೊಡ್ಡ ಗಂಡಾಂತರದಿಂದ ನನ್ನನ್ನು ಕಾಪಾಡಿತು. ನಮ್ಮ ಸಂಬಂಧವನ್ನು ಇಂದೇ ಮುರಿದುಕೊಳ್ಳುತ್ತಿದ್ದೇನೆ' ಎಂದು ಟೆಲಿಗ್ರಾಂ ಕೊಟ್ಟರು. ಅಷ್ಟೇ ಅಲ್ಲ. ಅಂದೇ ಕೂತು ಸರಳಾದೇವಿಗೂ ಒಂದು ಸುದೀರ್ಘ ಪತ್ರ ಬರೆದರು. ಆ ಪತ್ರದ ಪೂರ್ಣ ಪಾಠ ಹೀಗಿದೆ:
'ಪರಿಚಯವಾದ ದಿನದಿಂದಲೂ ನನ್ನ ಪ್ರೇಮವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದೇನೆ. ನಾವಿಬ್ಬರೂ ಭಾವನಾತ್ಮಕವಾಗಿ, ಮಾನಸಿಕವಾಗಿ ಒಂದಾಗಿದ್ದೇವೆ ಎಂದು ಹೇಳಿದ್ದೇನೆ ಇವತ್ತು ಯೋಚಿಸಿದರೆ-ದೈಹಿಕ ಕಾಂಕ್ಷೆಗಳೇ ಇಲ್ಲದ ಗಂಡು-ಹೆಣ್ಣಿನ ಮಧ್ಯೆ ಮಾತ್ರ ಅಂಥ ಸಂಬಂಧ ಸಾಧ್ಯ ಅನಿಸುತ್ತಿದೆ.ಅಂಥದೊಂದು ಸಂಬಂಧ ಅಣ್ಣ-ತಂಗಿ, ತಂದೆ-ಮಗಳ ಮಧ್ಯೆ ಮಾತ್ರ ಉಳಿದಿರಲು ಸಾದ್ಯ. ಹಾಗೆಯೇ ಬ್ರಹ್ಮಚರ್ಯಪಾಲಿಸುವ ಗಂಡು-ಹೆಣ್ಣಿನ ಮಧ್ಯೆಯೂ ಅಂಥದೊಂದು ಸಂಬಂಧ ಉಳಿಯಲು ಸಾಧ್ಯ. ಅಂಥದೊಂದು ಸಂಬಂಧವನ್ನು ನಿನ್ನೊಂದಿಗೆ ಹೊಂದಿರಬೇಕೆಂಬ ಅಭಿಲಾಷೆ ನನ್ನದು. ಆದರೆ ಅದಕ್ಕೆ ನನ್ನ ಎಲ್ಲ ಕೆಲಸಗಳಿಗೆ, ಹೋರಾಟಗಳಿಗೆ, ಚಿಂತನೆಗಳಿಗೆ ನೀನು ಸ್ಫೂರ್ತಿಯಾಗಿದ್ದೆ. ನನ್ನ ಪರಮಾಪ್ತೆಯಾಗಿದ್ದೆ.ಆದರೆ ಅಂಥದೊಂದು ಬಾಂಧವ್ಯ ಮುಂದೆ ಸಾದ್ಯವಿಲ್ಲ....ಇದು ನಿನಗೆ ನನ್ನ ಕಡೆಯ ಮತ್ತು ಸುದೀರ್ಘ ಪತ್ರ!'
ಹೀಗೆ ಬರೆದ ಗಾಂಧೀಜಿ ಕಡೆಗೆ 'your' L.G' ಎಂದು ಪತ್ರ ಮುಗಿಸುತ್ತಾರೆ. ಇಲ್ಲಿL. G.ಅಂದರೆ Law Giver (ನ್ಯಾಯ ಹೇಳುವವನು ಅಥವಾ ತೀರ್ಪುಗಾರ ಎಂದರ್ಥ!)
ಈ ಪತ್ರ ಓದಿದಾಗ ಸರಳಾದೇವಿ ಪ್ರತಿಕ್ರಿಯಿಸಿದರು ಅಂದರೆ-ಆಕೆ ಕ್ಷಣ ಕಂಪಿಸಿದರಂತೆ. ಆ ಪತ್ರವನ್ನೇ ಮತ್ತೆ ಮತ್ತೆ ಓದಿದರಂತೆ.ಭೋರಿಟ್ಟು ಅತ್ತರಂತೆ.ಇಷ್ಟು ದಿನಗಳ ಮಾತು,ಭಾಷೆ,ಭರವಸೆ, ಇಬ್ಬರ ಮದ್ಯೆ ಪುಟಿದೆದ್ದ ಆಸೆ...ಈ ಯಾವುದಕ್ಕೂ ಅರ್ಥವೇ ಇಲ್ವಾ ಎಂದು ಬಿಕ್ಕಳಿಸುತ್ತಾ ಕೇಳಿದರಂತೆ.
ಎಲ್ಲ ಸರಿ, ಈ ಅಫೇರ್ ನ ವಿಷಯ ತಿಳಿದ ನಂತರ ಕೂಡ ಸರಳಾದೇವಿಯ ಪತಿರಾಯ ರೇಗಲಿಲ್ವಾ? ಆ ದಂಪತಿಯ ಮದ್ಯೆ ಜಗಳ ಆಗಲಿಲ್ವಾ ಸರಳಾದೇವಿಯ ಮಗ ಗಾಂಧೀಜಿಗೆ ಅವಾಜ್ ಹಾಕಲಿಲ್ವಾ....ಇಂಥ ಯಾವ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ. ಬದಲಿಗೆ,1901ರಲ್ಲಿ ಶುರುವಾದ ಗಾಂಧೀಜಿಯ ಪ್ರೇಮ ಪ್ರಕರಣ 1920ರಲ್ಲಿ ಕೊನೆಗೊಂಡಿತು.ನಂತರದ ದಿನಗಳಲ್ಲಿ ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಬ್ಯುಸಿಯಾದರು.ಸರಳಾದೇವಿ 1945ರಲ್ಲಿ ತೀರಿಕೊಂಡರು. ಎಂದಷ್ಟೇ ವಿವರಣೆ ದಕ್ಕುತ್ತದೆ.
(ರಾಜಮೋಹನ ಗಾಧೀ ಬರೆದಿರುವ ಪೆಂಗ್ವಿನ್/ವೈಕಿಂಗ್ ಸಂಸ್ಥೆ ಪ್ರಕಟಿಸಿರುವ 'Mohandas: A True Story of a Man, His People and an Empire' ಪುಸ್ತಕದಿಂದ ಆಯ್ದ ಅಧ್ಯಾಯದ ಭಾವಾನುವಾದ ಇದು)

Wednesday, May 18, 2011

ಹೊಸ ಬೈಕ್









ಸಂತಾ ಮತ್ತು ಬಂತಾ ಒಂದೇ ಆಫೀಸಿನಲ್ಲಿ ಕೆಲಸ ಮಾಡುವವರು. ದಿನಾ ಜೊತೆಯಲ್ಲಿ ಬಸ್ಸಿನಲ್ಲಿ ಹೋಗುವವರು. ಒಂದು ದಿನ ಸಂತಾ ಬಸ್ಸಿಗೆ ಕಾಯುತ್ತಿದ್ದಾಗ ಬಂತಾ ಹೊಸ ಬೈಕಿನಲ್ಲಿ ಬಂದ. ಸಂತಾಗೆ ಆಶ್ಚರ್ಯವಾಯಿತು. "ಇದು ಯಾವಾಗ ಹೊಸ ಬೈಕು ತೆಗೆದುಕೊಂಡೆ" ಎಂದು ಕೇಳಿದ. ಬಂತಾ ಹೇಳಿದ "ಲಾಟರಿ ಹೊಡೆಯಿತು".
"ಹೌದೇ? ಹೇಗೆ? "
"ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಹೊರಡುವಾಗ ತುಂಬ ರಾತ್ರಿ ಆಗಿತ್ತು. ಯಾವ ಬಸ್ಸೂ ಸಿಗಲಿಲ್ಲ. ಆಗ ಒಂದು ಬೈಕ್ ಬಂತು. ಲಿಫ್ಟ್ ಬೇಕಾ ಎಂದು ಕೇಳಿತು. ಬೈಕಿನಲ್ಲಿ ಹಿಂದೆ ಕುಳಿತು ಹೋಗುತ್ತಿದ್ದಾಗ ಗೊತ್ತಾಯಿತು, ಬೈಕಿನಲ್ಲಿದ್ದದ್ದು ಹೆಣ್ಣು ಎಂದು. ಆಕೆ ಒಂದು ನಿರ್ಜನ ಪ್ರದೇಶದಲ್ಲಿ ಬೈಕು ನಿಲ್ಲಿಸಿದಳು. ತನ್ನೆಲ್ಲಾ ಬಟ್ಟೆ ಕಳಚಿ ಇಟ್ಟಳು. ನಂತರ ಹೇಳಿದಳು -ಎಲ್ಲ ನಿನ್ನದೇ. ಏನು ಬೇಕೊ ತೆಗೆದುಕೊ. ನಾನು ಬೈಕು ತೆಗೆದುಕೊಂಡು ಬಂದೆ"
"ನೀನು ಮಾಡಿದ್ದು ಸರಿಯಾಗಿದೆ. ಹೆಣ್ಣಿನ ಬಟ್ಟೆ ತೆಗೆದುಕೊಂಡು ನಮಗೇನು ಪ್ರಯೋಜನ?"