Thursday, June 23, 2011

ಲವ್ವರ್ ಇಲ್ಲದೇ ಇದ್ದರೆ ಆಗುವ 10 ಲಾಭಗಳು

ಲವ್ವರ್ ಇಲ್ಲದೇ ಇದ್ದರೆ ಆಗುವ 10 ಲಾಭಗಳು

1) ಸಮಯದ ಉಳಿತಾಯ.
2) ಕಣ್ತುಂಬ ನಿದ್ದೆ.
3) ಕಡಿಮೆ ಮಿಸ್ಡ್ ಕಾಲ್ ಗಳು.
4) ಚಿಂತೆಯಿಂದ ಮುಕ್ತಿ.
5) ಬೇಸರ ತರುವ SMS ನಿಂದ ದೂರ.
6) ನಿಮ್ಮ ನಂಬರ್ ಯಾಕೆ busy ಇತ್ತು? ಅಂತ ಯಾರೂ ಕೇಳಲ್ಲ.
7) ಸ್ನಾನಕ್ಕೆ ಹೋಗುವಾಗ ಮೊಬೈಲ್ ಸೈಲೆಂಟ್/ಆಫ್ ಮಾಡುವ ಅವಶ್ಯಕತೆಇಲ್ಲ.
8) ದಿನಕೊಂದು ಹುಡುಗಿ/ಹುಡುಗನ ಬಗ್ಗೆ ಕನಸು ಕಾಣಬಹುದು.
9) ಮೊಬೈಲ್ ಕರೆನ್ಸಿ ಬೇಗ ಖಾಲಿಯಾಗಲ್ಲ.
10) ಜನ ನಮ್ಮ ಬಗ್ಗೆ ಏನಂದುಕೊಂಡಾರು ಎಂಬ ಗಿಲ್ಟ್ ಕಾಡಲ್ಲ.

Friend Request not a love Letter

ಒಬ್ಬ ಹುಡುಗ Facebook ನಲ್ಲಿ ಹುಡುಗಿಯೊಬ್ಬಳಿಗೆ Friend Request ಕಳುಹಿಸಿದ, ಅವಳು ಅದನ್ನು Accept  ಮಾಡದೇ ಇದ್ದಾಗ

"I had sent you a Friend Request not a love Letter" ಎಂದು ಕಾಮೆಂಟ್ ಮಾಡಿದ

Sunday, June 5, 2011

ನನ್ನ ಮೊದಲ ಪತ್ರ


   
    ದಿನವೂ ಮುಂಜಾನೆ ಎದ್ದೂ ಪೂರ್ವದತ್ತ ಓಡುತ್ತೆನೆ ನನಗೆ ಅಲ್ಲಿ ಸೂರ್ಯ ಮೂಡುವುದು ಕಾಣುವುದಿಲ್ಲ ಕೆನ್ನೆ ಕೆಂಪಾಗಿಸಿಕೊಂಡು ಮೇಲೇರಿ ಬಂದಂತೆ ಕಾಣುತ್ತದೆ.ಇದೊ ಈ ಪತ್ರವನ್ನು ಸಂಪೂರ್ಣ ಓದು! ಇಲ್ಲಿರುವುದು ಶಬ್ದಗಳಲ್ಲ :ನನ್ನ ಕಣ್ಣೀರ ಹನಿಗಳು ಇಲ್ಲಿರುವುದು ಅಕ್ಷರಗಲ್ಲ: ನನ್ನ ಹೃದಯದ ತುಣುಕುಗಳು ಪ್ರತಿ ವಾಕ್ಯವೂ ಮುಗಿಯುವುದು ಪೂರ್ಣ ವಿರಾಮ ಚಿನ್ಹೆಯಿಂದ ಅಲ್ಲ ನಿಟ್ಟುಸಿರಿನಿಂದ.
ಮೊದಮೊದಲು ನಿನ್ನ ನೆನಪಿಸಿಕೊಂಡರೆ ಸಾಕಿತ್ತು;ಮನೆಯಲ್ಲೆಲ್ಲ ಪ್ರೆಮನಾದವೇ ಕೇಳಿಸುತಿತ್ತು ಮನಸ್ಸು ತುಂಬಿ ಬರುತ್ತಿತ್ತು ಈಗ ಬರೀ ಮರಣ ಮೃದಂಗದ ಸದ್ದು ಕೇಳಿಸುತ್ತದೆ ಅದು ಕಿವಿಯ ಮೂಲಕ ದೇಹವನ್ನು ಪ್ರವೇಶಿಸಿ ರಕ್ತದ ಕಣಕಣವನ್ನು ಹಿಂಸಿಸುತ್ತಿದೆ , ಹೃದಯಕ್ಕೆ ಬೆಂಕಿ ಹೊತ್ತಿದೆ ನಿನ್ನ ಮಾತು ಎಂಬ ನೀರು ಮಾತ್ರ ಇದನ್ನು ಆರಿಸ ಬಲ್ಲದು. ನಿನ್ನ ಒಂದು ಮಾತಿನ ಅಮೃತ ಸಿಂಚನಕ್ಕಾಗಿ ನಾನಿಲ್ಲಿ ಕಾದಿರುವೆ, ಈ ಕಾಯುವಿಕೆ ಅರ್ಥಪೂರ್ಣವಾಗಬೇಕಾದರೆ ನೀನು ಈ ಪತ್ರವನ್ನು ಪೂರ್ತಿಯಾಗಿ ಓದಲೇಬೇಕು, ಮೂರು ವರ್ಷಗಳ ಆ ಏಕಾಂಗಿತನದ ಅಸಹನೆಗಳನ್ನೆಲ್ಲ ಶಬ್ದ ಶಬ್ದಗಳಲ್ಲಿ ತುಂಬಿಸಿ ಬರೆದಿದ್ದೇನೆ. ಓದುವ ತಾಳ್ಮೆ ಇಲ್ಲದಿದ್ದರೆ ಕೊನೆ ಪಕ್ಷ ಪತ್ರದ ಕೊನೆಯವರೆಗೂ ಕಣ್ಣಡಿಸುತ್ತಲೆ ಹೋಗು ಅದಕ್ಕೂ ಸಮಯ ಇಲ್ಲದಿದ್ದರೆ ಕೊನೆಗೆ ಅಕ್ಷರಗಳನ್ನಾದರೂ ನಿನ್ನ ಕೈಯಲ್ಲಿ ಒಮ್ಮೆ ನೇವರಿಸು ಹಾಗೆ ನೀನು ಸ್ಪರ್ಶಿಸಿದರೆ ನೀನು ಸ್ಪರ್ಶಿಸುವುದು ಅಕ್ಷರಗಳನ್ನಲ್ಲ ನನ್ನ ಹೃದಯವನ್ನು, ಬೇಕಾದರೆ ಈ ಕಾಗದವನ್ನು ಕಿವಿಯ ಹತ್ತಿರ ಇಟ್ಟು ಕೇಳು ಆ ಮೌನದಲ್ಲಿ, ಏಕಾಂತದಲ್ಲಿ ನಿನಗೆ ಖಂಡಿತ ಕ್ಷೀಣವಾದ ಹೃದಯ ಬಡಿತದ ಸದ್ದು ಕೇಳಿಯೆ ಕೆಳುತ್ತದೆ
ತಿಂಗಳ ಹಿಂದೆ ಎಲೆಯ ಮೆಲಿದ್ದ ಒಂದು ಇಬ್ಬನಿ ನನ್ನನು ಕರೆದು ಏನು ಹೇಳಿತು ಗೊತ್ತ ? "ಸ್ಪಟಿಕದಂತಿರುವ ನನ್ನನ್ನು ಅವಳಿಗೆ ಕೊಡಬಾರದೆ ?" ಗಿಡಗಳಲ್ಲಿರುವ ಪ್ರತಿಯೊಂದು ಹೂವು ಹೇಳುತ್ತದೆ "ನಮಗೆ ಅವಳ ಮುಡಿಯೆರುವ ಆಸೆ ,ನೆರವೇರಿಸುವೆಯಾ " ಹೃದಯವಿಲ್ಲದ ಅವುಗಳಿಗಾದರು ನನ್ನ ಪ್ರೀತಿಯು ಅರ್ಥವಾಗಿದೆ ನಿನಗ್ಯಾಕೆ ಅರ್ಥವಾಗಿಲ್ಲ?  
 ನನಗೆ ಧೈರ್ಯವಿಲ್ಲ ಮೌನವೇ ನನ್ನ ಭಾಷೆ ಆದರೆ ಅದಕ್ಕೆ ಕಾರಣ ನೀನೇ. ನಿನ್ನ ಹೆಸರಿನ ಕೊನೆಯ "" ವನ್ನು ಹೇಳಿದಾಗ ನೀನು 'ನೋ' ಎಂದು ಹೇಳುತ್ತಿಯೋ ಅನ್ನೊ ಭಯ ,
ನಾನು ಮೊದಲು ಎಲ್ಲರಂತೆಯೇ ನಗುತ್ತಿದ್ದೆ ,ಹನಿ ಹನಿ ಮಳೆಗೆ ಮುಖವೊಡ್ಡಿ ಖುಷಿ ಪಡುತ್ತಿದ್ದೆ ಎಲ್ಲರಲ್ಲೂ ಬೆರೆಯುತ್ತಾ ತಮಾಷೆ ಮಾಡುತ್ತ ನಗುತ್ತಲ್ಲಿದ್ದೆ ನಿನ್ನನ್ನು ನೊಡಿದಾಗಿನಿಂದ ಎಲ್ಲವೂ ನಿಂತು ಹೋಗಿದೆ ಮೌನವೇ ಭಾಷೆಯಾಗಿದೆ ಎಲ್ಲರೂ ನಗುವಾಗ ನಾನು ಅಳುತ್ತೇನೆ ಎಲ್ಲರೋ ಅಳುವಾಗ ನನಗೆ ನಗು ಬರುತ್ತದೆ ನಾನಿದನ್ನು ಯಾರಬಳಿ ಹೇಳಲಿ ? ಇಷ್ಟು ಹತ್ತಿರ ಇರುವ ನೀನೇ ಹೃದಯವನ್ನು ಮುಚ್ಚಿಕೊಂಡಿರುವಾಗ ಯಾರ ಕಿವಿಯಲ್ಲಿ ಹೇಳಿ ಏನು ಪ್ರಯೋಜನ ಅದಕ್ಕೆ ಈ ಪತ್ರವೇ ನಮ್ಮೀರ್ವರ ನಡುವೆ 'ಸೇತು 'ಆಗಲಿ ;
ನಮ್ಮ ಪ್ರೀತಿಗೆ ಇರುವ ಅಡ್ಡ ಗೋಡೆ ಜಾತಿಯೂ ಅಲ್ಲ ಸಂಪ್ರದಾಯವು ಅಲ್ಲ ಬದಲಾಗಿ ಭಯ ಈ ಭಯಕ್ಕೆ ನನ್ನ ಅಧೈರ್ಯಕ್ಕೆ ಕಾರಣ ಯಾವುದು ಗೊತ್ತಾ? ಸೈಕಾಲಜಿಯಲ್ಲಿ ಅದಕ್ಕೆ ಸುಂದರವಾದ ಹೆಸರಿದೆ 'Inferiority Complex'

ಹೃದಯ ಬಿಚ್ಚಿ ಹೇಳುತ್ತೇನೆ ಕೇಳು ಮೌನವೆಂಬ ಕತ್ತಲಿರುವ ಭಯದ ಕೋಣೆಯ ಒಳಗೆ ಬಿದ್ದುಕೊಂಡಿದ್ದೇನೆ. ಧೈರ್ಯವೆಂಬ ಬೆಳಕು ಚೆಲ್ಲಿ ಭಾಷೆ ಎನ್ನುವ ಬಾಗಿಲನ್ನು ತೆರೆದು ನನ್ನನ್ನು 'ಬದುಕು' ಎಂಬ ಜಗತ್ತಿಗೆ ಕರೆ ತರುವ ಶಕ್ತಿ ಇರುವುದು ನಿನ್ನೊಬ್ಬಳಿಗೆ ಮಾತ್ರ ಸಾಗರದ ತೆರೆಯೊಂದು ಎಷ್ಟೇ ಮುಂದಕ್ಕೆ ಬಂದರೂ ಅದು ಮರಳಿ ಸಾಗರವನ್ನು ಸೇರ ಬೇಕಷ್ಟೆ? ನನಗೂ ಹಾಗೇಯೇ ಆಗುತ್ತಿತ್ತು. ಧೈರ್ಯ ಎನ್ನುವ ತೆರೆ ಎಷ್ಟು ಮುಂದಕ್ಕೆ ಬಂದರೂ ಭಯದ ಸಾಗರ ಅದನ್ನು ಹಿಂದಕ್ಕೆ ಕರೆದುಕೊಂಡ ಬಿಡುತ್ತಿತ್ತು. ಅದಕ್ಕೆ ಇಂದಿನವರೆಗೂ ನನಗೆ ಏನನ್ನು ಹೇಳಲು ಆಗಿಲ್ಲ.
ಈ ಮನಸು ನೀಡಿದವನ ಕನಸು ಕಡೆಗಣಿಸಬೇಡ. ಈ ಬಂಜರು ಹೃದಯದಲ್ಲಿ ನೀನು ನಾಲ್ಕು ಹನಿ ಚೆಲ್ಲಿ ಹೋದೆ. ಅಲ್ಲಿ ಗಿಡವೊಂದು ಬೆಳೆದು ಹೂ ಬಿಟ್ಟಿದೆ ಆ ಹೂವನ್ನು ಕೈಯಲ್ಲಿ ಎತ್ತಿಕೋ ದಯವಿಟ್ಟು ಕಿತ್ತು ಎಸೆಯ ಬೇಡ ಈ ಸ್ವಾರ್ಥ ಇಲ್ಲದ ನಿಸ್ವಾರ್ಥ ಪ್ರೀತಿ ನಿನಗರ್ಥವಾಗುತ್ತಿಲ್ಲವಾ?
 
ನಿನ್ನ ಕಣ್ಣಿಗೀಗ ಕಾಣಿಸುತ್ತಿರುವುದು ಅಕ್ಷರಗಳಾ ಅಥವಾ ಹೃದಯದ ತುಣುಕುಗಳಾ?
ನಿಜಕ್ಕೂ ನೆಡೆದದ್ದು ಏನೆಂದು ಹೇಳಿಬಿಡುತ್ತೇನೆ. ನಿನ್ನ ಕುರಿತಾದ ಎಲ್ಲಾ ಬಯಕೆಗಳನ್ನೂ ಒಂದು ಕೆಟ್ಟ ಕನಸೆಂದು ಮರೆತು ಆ ನೆನಪುಗಳನ್ನೆಲ್ಲ ಒಂದು ಸುಂದರವಾದ 'ಬಿಳೀ ಕವರ್'ನಲ್ಲಿಕಟ್ಟಿ ಸೂರ್ಯ ಮುಳುಗಿದ ಮೇಲೆ ಪೂರ್ವದಲ್ಲಿದ್ದ ಕಣವೆಯ ಕೆಳಕ್ಕೆ ಎಸೆದು ಬಂದೆ ಅಮವಾಸ್ಯೆಯ ಆ ಮದ್ಯ ರಾತ್ರಿ ನನಗೆ ಏಕೋ ಎಚ್ಚರವಾಯಿತು ! ಹೊರಗೆ ಬಂದು ನೋಡಿದರೆ ಬೆಳದಿಂಗಳಿತ್ತು ನನಗೆ ನಂಬಲೇ ಆಗಲಿಲ್ಲ ! ನೋಡುತ್ತೇನೆ. ನಾನು ಪೂರ್ವದಲ್ಲಿ ಎಸೆದು ಬಂದ ಆ ಕವರ್ ಮೇಲೇರಿ ಬಂದು ಜಗತ್ತಿಗೆಲ್ಲ ಬೆಳಕು ಕೊಡುತ್ತಿತ್ತು (ನನ್ನ ಪ್ರೇಮ ಪಾವಿತ್ರ್ಯತೆಗೆ ಇದೊಂದು ಉದಾಹರಣೆ ಸಾಕೆಂದು ಕೊಂಡಿದ್ದೇನೆ.) ಅದನ್ನು ನೋಡಿ ನನಗೆ ತಡೆಯಲಾಗಲಿಲ್ಲಾ. ಬುದ್ದ ಬೆಳೆದಿಂಗಳಿಗೆ ಎಚ್ಚರಗೊಂಡ ನಾನು ನಿನ್ನ 'ನೆನಪು'ಗಳು ಕೊಟ್ಟ ಆ ಬೆಳಕಿನಲ್ಲಿ ನನ್ನನ್ನು ನಾನೇ ನೋಡಿಕೊಂಡೆ. ನನ್ನಲ್ಲೂ ಜ್ಞಾನವಿದೆ. ತಿಳುವಳಿಕೆ ಇದೆ.ಎಂದು ಅರಿವಾಯಿತು ಆದರೆ ನಾನು ನನ್ನ ತಿಳುವಳಿಕೆಗಳ. ಜ್ಞಾನದ ಸಹಾಯದಿಂದ ನಿನ್ನ ಕುರಿತಾಗಿ ಕನಸುಗಳನ್ನು ಕಟ್ಟಿಕೊಂಡೆ, ವಾಸ್ತವವನ್ನು ಅರಿಯುವ ಯತ್ನ ಮಾಡಲಿಲ್ಲ. ಇಂಟ್ರಾವರ್ಟ ಆಗಿ ನನ್ನ ಕುರಿತೇ ನಾನು ಮರುಕ ಪಡುತ್ತಾ 'Self pity' ಅನ್ನುವ ಕಂದಕದೊಳಗೆ ಬಿದ್ದುಕೊಂಡು ನರಳುತ್ತಿದ್ದೆ ಈಗ ನನಗೆಲ್ಲವೂ ಅರ್ಥವಾಗಿದೆ.
ಪತ್ರವೆಂಬ ಕತ್ತಿಯಿಂದ 'ಭಯ' ಎನ್ನುವ ಗಿಡವನ್ನು ಕಡಿದು ಧೈರ್ಯವೆಂಬ ನೆಲವನ್ನು ನಿರ್ಮಿಸಿದ್ದೇನೆ. ಅದರ ಮೇಲೆ 'ಶ್ರಮ' ಎಂಬ ಕಲ್ಲಿನಿಂದ 'ಕೆಲಸ' ಎನ್ನುವ ಗೋಡೆಯನ್ನು ಕಟ್ಟಿ 'ಹಣ'ವೆನ್ನುವ ಮನೆಯನ್ನು ಕಟ್ಟುತ್ತೇನೆ 'ಬಾ ಇಬ್ಬರೂ ಅದರೊಳಗೆ ಪ್ರೀತಿಯಿಂದ ಬದುಕೋಣ ಇರುವುದೊಂದೇ ಬದುಕು 'ನೂರು ವರುಷಾನ ಹರುಷದಿಂದ ಕಳೆಯೋಣ' ಕಾಲೇಜು ಬಿಟ್ಟು ಹೋಗುವ ಈ ಸಮಯದಲ್ಲಿ ನೀನು ಒಂದು ನಿರ್ಧಾರಕ್ಕೆ ಬರಲೇ ಬೇಕಿದೆ.
ಪೋನ್ ಕೈಯಲ್ಲಿಡಿದು ಕುಳಿ ತಿದ್ದೇನೆ. ಕಾಗದ ಓದಿ ಮುಗಿಸಿದ ತಕ್ಷಣ ಪೋನ್ ಮಾಡು ತಡ ಮಾಡಬೇಡ
ಬರೇ ನಾಲ್ಕು ಶಬ್ದ ಹೇಳಿದರೆ ಸಾಕು
ಬರೇ ನಾಲ್ಕೇ ನಾಲ್ಕು ಶಬ್ದ.......
ಬರೇ ನಾಲ್ಕು.......
ಬರೇ.......

ಆಹ್ವಾನ....



ಬಾ ಗೆಳತಿ ಬಾ ಒಳಗೆ
ಹೃದಯ ಮಂದಿರದೊಳಗೆ
ಕಸಕೊಳೆಯ ತೆಗೆದು ಪರಿಶುದ್ದವಾಗಿರಿಸಿ
ಪ್ರೀತಿ ಹಣತೆಹಚ್ಚಿ
ರಂಗೋಲಿಯನ್ನಿಟ್ಟು
ನಿನಗಾಗಿ ಕಾಯುತ್ತಿರುವೆ
ಬಾ ಗೆಳತಿ ಬಾ ಒಳಗೆ
ಹೃದಯ ಮಂದಿರದೊಳಗೆ

ಮರೀಚಿಕೆಯಾಗಿದ್ದವಳೇ
ಈಗಲಾದರೂ ಒಳಗೆ ಬಾ
ಕಾಲನ್ನೂರುವ ಮುನ್ನ
ಕಾಲನ್ನೊರಿಸಿಕೋ ಒಮ್ಮೆ
ಹೃದಯ ಸೇರುವ ಮುನ್ನ
ಪರಿಶುದ್ದವಾಗಲಿ ಮನ
ನಿಷ್ಕಲ್ಮಷಳಾಗು, ಬಾ ಒಳಗೆ
ಹೃದಯ ಮಂದಿರದೊಳಗೆ

ಪ್ರೀತಿಯ ಜೋತಿಯ ಆರಿಸುವ
ಬಿರುಗಾಳಿಯಾಗಬೇಡ
ಸಂಗಾತಿಯಾಗಿ ಬಾ
ಬಾಳ ವೀಣೆಯ ನುಡಿಸು
ಅಪಸ್ವರವು ಬೇಡ ಸುಸ್ವರವು ಇರಲಿ
ಬಾ ಗೆಳತಿ ಬಾ ಒಳಗೆ
ಹೃದಯ ಮಂದಿರದೊಳಗೆ

Friday, June 3, 2011

ಹೀಗೊಂದು ಪ್ರಶ್ನೆ!!



ನೀನೆಂಬ ಸಂಜೆ ಮಳೆಗಿನ್ಯಾವ ಹೆಸರಿಡಲಿ ??

Thursday, June 2, 2011

ಸಾಕ್ಷಿ...!

ನೀನು ನನಗೆ
ಮೋಸ ಮಾಡಿದ್ದಕ್ಕೆ
ಅವನನ್ನ ಅಗ್ನಿ ಸಾಕ್ಷಿಯಾಗಿ
ಕೈ ಹಿಡಿದ್ದಕ್ಕಿಂತ
ಬೇರೆ ಸಾಕ್ಷಿ ಬೇಕೆ...?