Sunday, June 5, 2011

ಆಹ್ವಾನ....



ಬಾ ಗೆಳತಿ ಬಾ ಒಳಗೆ
ಹೃದಯ ಮಂದಿರದೊಳಗೆ
ಕಸಕೊಳೆಯ ತೆಗೆದು ಪರಿಶುದ್ದವಾಗಿರಿಸಿ
ಪ್ರೀತಿ ಹಣತೆಹಚ್ಚಿ
ರಂಗೋಲಿಯನ್ನಿಟ್ಟು
ನಿನಗಾಗಿ ಕಾಯುತ್ತಿರುವೆ
ಬಾ ಗೆಳತಿ ಬಾ ಒಳಗೆ
ಹೃದಯ ಮಂದಿರದೊಳಗೆ

ಮರೀಚಿಕೆಯಾಗಿದ್ದವಳೇ
ಈಗಲಾದರೂ ಒಳಗೆ ಬಾ
ಕಾಲನ್ನೂರುವ ಮುನ್ನ
ಕಾಲನ್ನೊರಿಸಿಕೋ ಒಮ್ಮೆ
ಹೃದಯ ಸೇರುವ ಮುನ್ನ
ಪರಿಶುದ್ದವಾಗಲಿ ಮನ
ನಿಷ್ಕಲ್ಮಷಳಾಗು, ಬಾ ಒಳಗೆ
ಹೃದಯ ಮಂದಿರದೊಳಗೆ

ಪ್ರೀತಿಯ ಜೋತಿಯ ಆರಿಸುವ
ಬಿರುಗಾಳಿಯಾಗಬೇಡ
ಸಂಗಾತಿಯಾಗಿ ಬಾ
ಬಾಳ ವೀಣೆಯ ನುಡಿಸು
ಅಪಸ್ವರವು ಬೇಡ ಸುಸ್ವರವು ಇರಲಿ
ಬಾ ಗೆಳತಿ ಬಾ ಒಳಗೆ
ಹೃದಯ ಮಂದಿರದೊಳಗೆ

No comments: