Saturday, July 21, 2012

ಸಾಲುಗಳು

ಅಂದಿನ
ಅವಳ ನೆನಪುಗಳೇ

ಇಂದು
ನನ್ನ ಕೊಲ್ಲುತ್ತಿವೆ..

--------------------

ನಿನ್ನ ನಗುವ ನೋಡಿ
ಎಚ್ಚರ ತಪ್ಪಿದ್ದೆ

ಇನ್ನೇನು
ಎಚ್ಚರವಾಗುವನಿದ್ದೆ
ಮತ್ತೆ ನೀ
ನಕ್ಕು ಬಿಟ್ಟೆಯಲ್ಲೆ.....

-----@ ಒಂಟಿಪ್ರೇಮಿ

--------------------

ನೀನಿಲ್ಲದ ನಾನು
ನೀರಿಲ್ಲದ ಮೀನು

ನೀನಿದ್ದರೆ ನಾನು
ಬಾನಲ್ಲಿ ಹಾರುವ ಪ್ಲೇನು

ನೀ ನನ್ನ ಜೊತೆಯಿದ್ದರೆ
ನಾ ಸಿಹಿಯಾದ ಜೇನು

ಇಲ್ಲದಿದ್ದರೆ ನಾ ಆಗುವೆ
ಹೆಜ್ಜೇನು...

ನಾನು ಎಂದಿಗೂ ಒಂಟಿಯಲ್ಲ

ನಾನು ಎಂದಿಗೂ
ಒಂಟಿಯಲ್ಲ
ಯಾಕೆಂದರೆ
ಯಾವಾಗಲೂ
ನನ್ನ ಜೊತೆ
ನಿನ್ನ ನೆನಪಿರುತ್ತದೆ,,,,,,

ಇಂದು ನನ್ನ ಕಂಗಳಲ್ಲಿ ನೀನು

ಇಂದು
ನನ್ನ ಕಂಗಳಲ್ಲಿ ನೀನು
ಬರೆಯಲಾಗದ
ಕವಿತೆಗಳನ್ನು
ಓದಬಹುದು

ಇಂದು
ನನ್ನ ಹೃದಯದಲ್ಲಿ
ಪ್ರೀತಿಕೊಂದ
ಕೊಲೆಗಾರರನ್ನು
ಬೇಟಿಯಾಗಬಹುದು...

Friday, July 6, 2012

ನನಗೆ ಸಿಕರೇಟ್ ಎಂದರೆ ತುಂಬಾ ಸಿಟ್ಟು

ನನಗೆ ಸಿಕರೇಟ್ ಎಂದರೆ
ತುಂಬಾ ಸಿಟ್ಟು

ಕಂಡಲ್ಲಿ ಬೆಂಕಿ
ಹಚ್ಚುತ್ತೆನೆ
ಬಾಯಿಗಿಟ್ಟು......

ನಿನ್ನ ಮರೆಯುವ ಪ್ರಯತ್ನ

ನಿನ್ನ ಮರೆಯುವ
ಪ್ರಯತ್ನ
ಕೊನೆಗೂ
ಕೈಗೂಡಲಿಲ್ಲ

ಈ ನಿನ್ನ ನೆನಪು
ನನ್ನ ಹೃದಯದಿಂದ
ಕಳಚಿ
ಬೀಳಲಿಲ್ಲ.

ಖುಷಿಯಿದೆ...

ನನ್ನ ಕವಿತೆಗಳನ್ನು
ನೀನು ಕದ್ದಿದ್ದಕ್ಕೆ
ನನಗೆ
ಬೇಸರವಿಲ್ಲ


ಅವು ನನ್ನವೆಂದು
ಹೇಳುವ
ನಿನ್ನತನದಲ್ಲೇನೋ
ಖುಷಿಯಿದೆ...

ಹುಡುಗಿಯ ತುಟಿಗೆ ಮುತ್ತಿಟ್ಟಾಗ

ಹುಡುಗಿಯ ತುಟಿಗೆ
ಮುತ್ತಿಟ್ಟಾಗ

ಬೇರೇನೂ
ಆಗಲಿಲ್ಲ
just ಲಿಪ್ ಸ್ಟಿಕ್
ನನ್ನ ತುಟಿಗೂ
ಹತ್ತಿಕೊಂಡಿತು
ಅಷ್ಟೇ.....

ಪ್ರೀತಿಸಿದ ಕಾರಣ

ನೀ ನನ್ನ ಕಣ್ಣೀರ
ಒರೆಸುತ್ತಿಯ
ಎಂದು
ನಿನ್ನ
ಪ್ರೀತಿಸಿದೆ

ಆದರೆ

ನೀ ನನ್ನ ಕಣ್ಣೀರಿಗೆ
ಕಾರಣವಾಗಿರುವೆ

ದಾಖಲಾಗಲೇ ಇಲ್ಲ...

ನನ್ನ ಜೀವನದ
ಖುಷಿ ಕ್ಷಣಗಳನ್ನೇಲ್ಲಾ
ನನ್ನ ಡೈರಿಯಲ್ಲಿ
ದಾಖಲಿಸಿದೆ

ಆದರೆ
ನಿನ್ನ ಪ್ರೀತಿ ಮತ್ತು ನೀನು
ಎಲ್ಲೂ ದಾಖಲಾಗಲೇ ಇಲ್ಲ...

ಮಾತು ಕೂಡ ಕವನವಾಗುತ್ತೆ..

ಅದೇನೋ ಗೊತ್ತಿಲ್ಲ
ಹುಡುಗೀರು
ಎದುರಿಗೆ ಇದ್ದಾಗ

ಮಾತು ಕೂಡ
ಕವನವಾಗುತ್ತೆ..

ಹುಡುಗರು
ಎದುರಿಗೆ
ಕವನಕೂಡ
ಮಾತಾಗುತ್ತೆ......

ನಾ ಪುನರ್ಜನ್ಮಿಸಲು....

ನಾ ಸತ್ತಾಗ
ನೀ ನನ್ನ ಸಮಾಧಿಮೇಲಿಟ್ಟ
ಗುಲಾಬಿಯೊಂದೇ ಸಾಕು
ನಾ ಪುನರ್ಜನ್ಮಿಸಲು....

ದೇವದಾಸನಾಗಲಿಲ್ಲ


ನೂರಾರು
ಹುಡುಗಿಯರು
ನೂರಾರು
ಚೂರಿಗಳು
ಹೃದಯ
ಸಾವಿರಾರು ಚೂರು

ಆದರೂ
ನಾ ದೇವದಾಸನಾಗಲಿಲ್ಲ
ಕುಡಿತಕ್ಕೂ
ದಾಸನಾಗಲಿಲ್ಲ

ಕಾರಣವಿಷ್ಟೇ:
ಅವರಲ್ಲಿ
ಯಾರೊಬ್ಬರೂ
ಪಾರೂ, ಚಂದ್ರಮುಖಿ ಯಾಗಿರಲಿಲ್ಲ..

ಹಳೇ ಸ್ಟಾಕ್ ಗಳು -12

ಕನ್ನಡಿಯಲ್ಲೇಕೆ
ನೋಡಿಕೊಳ್ಳುವೆ
ನಿನ್ನ ಬಿಂಬ..?

ಇಲ್ಲಿ ನೋಡೆ
ನೀನೇ ತುಂಬಿರುವೆ
ನನ್ನ ಕಣ್ ತುಂಬ

==================

ನನ್ನವಳ
ಎತ್ತರಕ್ಕೆ
ತರ ತರದ ಮುತ್ತುಗಳನ್ನೂ
ಸುರಿದರೂ
ಅವು ಅವಳಿಗೆ
ಬೇಡವಂತೆ
ಪ್ರೀತಿಯಿಂದ
ಕೆನ್ನೆಮೇಲೆ
ತುಟಿಯಿಂದ
ಒತ್ತಿದರೆ ಸಾಕಂತೆ....


====================

ಅವಳು ನನ್ನನ್ನು
ವಂಚಿಸಿದಾಗ
ನಾ ಮನಕೆರಳಿ
ಕೊಲೆಗಾರನಾಗಿಬಿಟ್ಟೆ

ಅವಳನ್ನೇನೂ
ಮಾಡಲಿಲ್ಲ
ನನ್ನ ಎದೆಗವಿಚಿಕುಳಿತ
ಅವಳ ಭಾವಚಿತ್ರವನ್ನು
ಹಳೆ ಪುಸ್ತಕದ ಹಾಳೆಗಳನಡುವೆ
ಸಮಾಧಿ ಮಾಡಿಬಿಟ್ಟೆ..