Friday, July 6, 2012

ಹಳೇ ಸ್ಟಾಕ್ ಗಳು -12

ಕನ್ನಡಿಯಲ್ಲೇಕೆ
ನೋಡಿಕೊಳ್ಳುವೆ
ನಿನ್ನ ಬಿಂಬ..?

ಇಲ್ಲಿ ನೋಡೆ
ನೀನೇ ತುಂಬಿರುವೆ
ನನ್ನ ಕಣ್ ತುಂಬ

==================

ನನ್ನವಳ
ಎತ್ತರಕ್ಕೆ
ತರ ತರದ ಮುತ್ತುಗಳನ್ನೂ
ಸುರಿದರೂ
ಅವು ಅವಳಿಗೆ
ಬೇಡವಂತೆ
ಪ್ರೀತಿಯಿಂದ
ಕೆನ್ನೆಮೇಲೆ
ತುಟಿಯಿಂದ
ಒತ್ತಿದರೆ ಸಾಕಂತೆ....


====================

ಅವಳು ನನ್ನನ್ನು
ವಂಚಿಸಿದಾಗ
ನಾ ಮನಕೆರಳಿ
ಕೊಲೆಗಾರನಾಗಿಬಿಟ್ಟೆ

ಅವಳನ್ನೇನೂ
ಮಾಡಲಿಲ್ಲ
ನನ್ನ ಎದೆಗವಿಚಿಕುಳಿತ
ಅವಳ ಭಾವಚಿತ್ರವನ್ನು
ಹಳೆ ಪುಸ್ತಕದ ಹಾಳೆಗಳನಡುವೆ
ಸಮಾಧಿ ಮಾಡಿಬಿಟ್ಟೆ..
 

No comments: