Thursday, May 31, 2012

ಹಳೇ ಸ್ಟಾಕ್ ಗಳು -4

ಮುದ್ದೆ ಬೆಲ್ಲಕೆ
ಮುತ್ತಿಡುತ್ತದಲ್ಲಾ ಇರುವೆ;

ಮುದ್ದಾದ ನಿನ್ನ ಗಲ್ಲಕೆ
ಮುತ್ತಿಡಲು ನಾ ಇರುವೆ..
=====================

ಹುಡುಗ : ನಿನಗೆ ಏನು ಬೇಕು ಕೇಳು...
ಹುಡುಗಿ : ಏನು ಬೇಕಾದ್ರೂ ಕೊಡ್ತಿಯಾ?
ಹುಡುಗ : ಕೊಡ್ತಿನಿ ಹೇಳು...
ಹುಡುಗಿ : ನಂಗೆ ಚಂದ್ರನ್ನ ತಂದು ಕೊಡು..
ಹುಡುಗ : ಚಂದ್ರನ ತಂದು ಕೊಟ್ರೆ ಭೂಮಿಸುತ್ತ ಏನ್ ನಿಮ್ಮಪ್ಪ ಸುತ್ತಾನಾ?
===================

"ನೆರೆ-ಹೊರೆಯವರನ್ನು ಪ್ರೀತಿಸು - ಬೈಬಲ್"
ನಮ್ಮ ಪಕ್ಕದ ಮನೆ ಹುಡುಗಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ - ಬಸವರಾಜ್
==================

ಪ್ರೀತಿ ಎಂದಿಗೂ ಶಾಶ್ವತ

ಜೊತೆಗಾರರು ಮಾತ್ರ ಬದಲಾಗುತ್ತಾರೆ
=================
ಸುನಾಮಿಯಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಮಗು
ಸಮುದ್ರದ ಮುಂದೆ ಕುಳಿತಿತ್ತು, ಅಲೆಗಳು ಬಂದು ಮಗುವಿನ ಪಾದ ಸ್ಪರ್ಶಿಸುತ್ತಿದ್ದವು. ಮಗು ಮುಗ್ದವಾಗಿ
"ನೀವು ಸಾವಿರಸಾರಿ ಬಂದು ನನ್ನ ಪಾದ ಮುಟ್ಟಿದರೂ ನಾನು ನಿನ್ನ ಕ್ಷಮಿಸಲ್ಲ" ಹೇಳಿತು

================

ಸಂಬಂಧಗಳು ಬಟ್ಟೆಯಹಾಗೆ
ಒಮ್ಮೆ ಹರಿದರೆ ಮುಗೀತು....

ಒಂದುವೇಳೆ ಕೂಡಿಸಿ ಒಲಿದರೂ ಅದು 'ತ್ಯಾಪೆ' ಯಾಗೇ ಇರುತ್ತೆ

===================

ಹಳೇ ಸ್ಟಾಕ್ ಗಳು -3

ಜೀವನದ ಅತಿ ದೊಡ್ಡ ದುರಂತ 'ಪ್ರೀತಿಸುವುದು' ಮತ್ತು 'ಪ್ರೀತಿಸಲ್ಪಡುವುದು'.

====================

ನಾನು ಅವಳನ್ನು ಭಯದಿಂದ ತಬ್ಬಿದಾಗ
ಅವಳಿಗೆ ಧೈರ್ಯ ಹೆಚ್ಚಾಯಿತಂತೆ....
===================
ನನ್ನಾಕೆ ಕೇಳಿದಳು
ನಾ ಕಟ್ಟಿದ ಪಂದ್ಯದಲ್ಲಿ ನೀ ಸೋಲುವೆಯಾ? ಎಂದು

ನಾ ಹೇಳಿದೆ
ನಿನಗೇ ನಾ ಸಂಪೂರ್ಣ ಸೋತಿರುವಾಗ ಇನ್ನು ಪಂದ್ಯದಲ್ಲಿ ಗೆದ್ದರೇನು ಸೋತರೇನು
======================
ಪ್ರೀತಿಲಿ ಬಿದ್ದಾಗ
ಎಲ್ಲವನ್ನೂ ಮರೀತಾರೆ

ಉದಾ: ನಾನು Buzz ಮಾಡೋದನ್ನೇ ಮರೆತಿದ್ದೆ

=====================
ಅವಳಿಗೆ ಮೋಸ ಮಾಡುವ ಅವಸರದಲಿ ನಾ ಆತ್ಮಹತ್ಯೆ ಮಾಡಿಕೊಂಡೆ....
====================
ಅವಳು ನನ್ನ ಸನಿಹವಿದ್ದಾಗಲೆಲ್ಲಾ ನನಗೆ ಚಳಿಗಾಲ......

====================
 ನಿನ್ನನ್ನು ನೋಡಿದ ಕೋಡಲೇ
ನನ್ನನ್ನೇ ನಾ ಮರೆತೆ

ನಿನ್ನ ತಂಗಿಯ ನೋಡಿದ ಕೂಡಲೇ
ನಿನ್ನನ್ನೇ ನಾ ಮರೆತೆ!!!!

==================
ಈಗಿನ ಕಾಲದ ಪ್ರೀತಿಯ ದುರಂತ ಏನು ಗೊತ್ತಾ?

ಹುಡುಗ ಹುಡುಗಿ ಒಬ್ಬರನೊಬ್ಬರು
ಅರ್ಥಮಾಡಿಕೊಳ್ಳದೇ ಪ್ರೀತಿಸುತ್ತಾರೆ!

ಅರ್ಥಮಾಡಿಕೊಂಡ ಮೇಲೆ
ದೂರವಾಗುತ್ತಾರೆ!!
=================
ಅವಳ ಪ್ರೀತಿ
ಹೃದಯದಿ ಚುಚ್ಚುತ್ತಿರುವ
ಎರಡಿಂಚಿನ ಚೂರಿಯಂತೆ

ಕಿತ್ತರೆ ಸತ್ತೇಹೋಗುವೆ
ಬಿಟ್ಟರೆ ಪ್ರತೀ ಕ್ಷಣವೂ
ಅಳುಕುತ ನೋಯಿಸುವುದು
ಏನು ಮಾಡಲಿ???
================

ನನಗೆ ಅವಳು ಮೋಸ ಮಾಡಲಿಲ್ಲ,,,

ನಾನೇ ಮೋಸ ಹೋದೆ!!

ಇಂದು ನನ್ನ ಕಣ್ಣುಗಳಲ್ಲಿ ನೀನು

ಇಂದು ನನ್ನ ಕಣ್ಣುಗಳಲ್ಲಿ
ಬರೆಯಲಾಗದ
ಕವಿತೆಗಳನ್ನು ಓದಬಹುದು.

ನನ್ನ ಕವಿತೆಗಳಲ್ಲಿ
ನಿನ್ನ ಪ್ರೀತಿ ಸತ್ತು ಬಿದ್ದಿರುವುದನ್ನು
ನೋಡಬಹುದು

ನನ್ನ ಹೃದಯದಲ್ಲಿ
ಪ್ರೀತಿಕೊಂದ ಕೊಲೆಗಾರರನ್ನು
ಬೇಟಿಯಾಗಬಹುದು..

ಇಂದು ನನ್ನ ಕಣ್ಣುಗಳಲ್ಲಿ ನೀನು.
ಬರೆಯಲಾಗದ ಕವಿತೆಗಳನ್ನಷ್ಟೇ
ಓದಬಹುದು...

ಕೆಲವು ಹಳೇ ಸ್ಟಾಕ್ ಗಳು -2

ನನಗೆ ಅವಳು ಅವಶ್ಯಕತೆ

ಅವಳಿಗೆ ನಾನು ಅನಿವಾರ್ಯ..

====================

ಹುಡುಗಿರನ್ನ ಅರ್ಥಮಾಡಿಕೊಳ್ಳೊದಂದ್ರೆ
1 ಜಿಬಿ ಫೈಲ್ ಅನ್ನು 2 ಕೆಬಿಪಿಎಸ್ ಸ್ಪೀಡ್ ನಲ್ಲಿ ಡೌನ್ ಲೋಡ್ ಮಾಡಿದ ಹಾಗೆ 95% ಕಂಪ್ಲೀಟ್ ಆದಾಗ ಎರರ್ ಅಂತ ಬರುತ್ತೆ

====================

ಅವಳ ಬೆಣ್ಣೆಯಂತ ಮಾತಿಗೆ ನಾ
ತುಪ್ಪದಂತೆ ಕರಗಿ ಹೋದೆ !!!!!


 

ಕೆಲವು ಹಳೇ ಸ್ಟಾಕ್ ಗಳು.

ಅವಳು ನೀಡಿದ ಮುತ್ತಿನ
ಮತ್ತಿನಿಂದ ಎಚ್ಚರವಾಗುವ ಮುನ್ನವೇ
ಅವಳು ಎದ್ದು ಹೋಗಿದ್ದಳು..

=======================

Girls wants lot of things
From guy


Guy want one thing
from a lot of girls......


======================

ಅವಳಿಲ್ಲದೆ ನಾನು ಬದುಕೋಕಾಗಲ್ಲ

ಆದ್ರೂ

ಅವಳ ಜೊತೆ ಜಗಳವಾಡೋದು ತಪ್ಪಲ್ಲ !!

=====================
ಚುಚ್ಚ ಬೇಡವೆ
ಗೆಳತಿ
ನೆನಪಿನ ಮುಳ್ಳಿಂದ
ಈ ವೇಧನೆ ನನ್ನಿಂದ
ತಡೆಯಲಾಗುವುದಿಲ್ಲ ......

ಕನ್ನಡಕ್ಕಾಗಿ ಕೈ ಎತ್ತಿ

ಕನ್ನಡಕ್ಕಾಗಿ ಕೈ ಎತ್ತಿ


ತುಂಬಾ ಹೊತ್ತು ಎತ್ತಿ ಹಿಡಿದಿದ್ರೆ
ನೋವಾಗುತ್ತೆ ಇಳಿಸಿ.....

-- ಒಂಟಿಪ್ರೇಮಿ....
 

ಶುಭ ಹಾರೈಕೆಗಳು.

ನನ್ನ ಕವಿತೆಗಳ ಸ್ಪೂರ್ತಿಯಾದ
ನನ್ನವಳು ನನ್ನಿಂದ ದೂರವಾಗಿದ್ದಾಳೆ
ಅಲ್ಲಲ್ಲ....
ನನ್ನಿಂದ ದೂರ ಹೊರಟಿದ್ದಾಳೆ
ಅವಳ ಮುಂದಿನ ಬದುಕಿಗೆ ನನ್ನಿಂದ ಶುಭ ಹಾರೈಕೆಗಳು.

===================================

ಬೇಸರವಾ
ಗಿದ್ದು
ನೀನು ಬಿಟ್ಟು ಹೋಗಿದ್ದಕ್ಕಲ್ಲ

ಕಾರಣ ಹೇಳದೆ ಹೋಗಿದ್ದಕ್ಕೆ....

==================================

ಅವಳ
ಪೋಟೋವನ್ನೇನೋ Backup ಮಾಡಿದ್ದೆ.

ಅವಳ ಪ್ರೀತಿಯನ್ನ ಎತ್ತಿಡಲು ಮರೆತ್ತಿದ್ದೆ