Friday, July 6, 2012

ಹುಡುಗಿಯ ತುಟಿಗೆ ಮುತ್ತಿಟ್ಟಾಗ

ಹುಡುಗಿಯ ತುಟಿಗೆ
ಮುತ್ತಿಟ್ಟಾಗ

ಬೇರೇನೂ
ಆಗಲಿಲ್ಲ
just ಲಿಪ್ ಸ್ಟಿಕ್
ನನ್ನ ತುಟಿಗೂ
ಹತ್ತಿಕೊಂಡಿತು
ಅಷ್ಟೇ.....

ಪ್ರೀತಿಸಿದ ಕಾರಣ

ನೀ ನನ್ನ ಕಣ್ಣೀರ
ಒರೆಸುತ್ತಿಯ
ಎಂದು
ನಿನ್ನ
ಪ್ರೀತಿಸಿದೆ

ಆದರೆ

ನೀ ನನ್ನ ಕಣ್ಣೀರಿಗೆ
ಕಾರಣವಾಗಿರುವೆ

ದಾಖಲಾಗಲೇ ಇಲ್ಲ...

ನನ್ನ ಜೀವನದ
ಖುಷಿ ಕ್ಷಣಗಳನ್ನೇಲ್ಲಾ
ನನ್ನ ಡೈರಿಯಲ್ಲಿ
ದಾಖಲಿಸಿದೆ

ಆದರೆ
ನಿನ್ನ ಪ್ರೀತಿ ಮತ್ತು ನೀನು
ಎಲ್ಲೂ ದಾಖಲಾಗಲೇ ಇಲ್ಲ...

ಮಾತು ಕೂಡ ಕವನವಾಗುತ್ತೆ..

ಅದೇನೋ ಗೊತ್ತಿಲ್ಲ
ಹುಡುಗೀರು
ಎದುರಿಗೆ ಇದ್ದಾಗ

ಮಾತು ಕೂಡ
ಕವನವಾಗುತ್ತೆ..

ಹುಡುಗರು
ಎದುರಿಗೆ
ಕವನಕೂಡ
ಮಾತಾಗುತ್ತೆ......

ನಾ ಪುನರ್ಜನ್ಮಿಸಲು....

ನಾ ಸತ್ತಾಗ
ನೀ ನನ್ನ ಸಮಾಧಿಮೇಲಿಟ್ಟ
ಗುಲಾಬಿಯೊಂದೇ ಸಾಕು
ನಾ ಪುನರ್ಜನ್ಮಿಸಲು....

ದೇವದಾಸನಾಗಲಿಲ್ಲ


ನೂರಾರು
ಹುಡುಗಿಯರು
ನೂರಾರು
ಚೂರಿಗಳು
ಹೃದಯ
ಸಾವಿರಾರು ಚೂರು

ಆದರೂ
ನಾ ದೇವದಾಸನಾಗಲಿಲ್ಲ
ಕುಡಿತಕ್ಕೂ
ದಾಸನಾಗಲಿಲ್ಲ

ಕಾರಣವಿಷ್ಟೇ:
ಅವರಲ್ಲಿ
ಯಾರೊಬ್ಬರೂ
ಪಾರೂ, ಚಂದ್ರಮುಖಿ ಯಾಗಿರಲಿಲ್ಲ..

ಹಳೇ ಸ್ಟಾಕ್ ಗಳು -12

ಕನ್ನಡಿಯಲ್ಲೇಕೆ
ನೋಡಿಕೊಳ್ಳುವೆ
ನಿನ್ನ ಬಿಂಬ..?

ಇಲ್ಲಿ ನೋಡೆ
ನೀನೇ ತುಂಬಿರುವೆ
ನನ್ನ ಕಣ್ ತುಂಬ

==================

ನನ್ನವಳ
ಎತ್ತರಕ್ಕೆ
ತರ ತರದ ಮುತ್ತುಗಳನ್ನೂ
ಸುರಿದರೂ
ಅವು ಅವಳಿಗೆ
ಬೇಡವಂತೆ
ಪ್ರೀತಿಯಿಂದ
ಕೆನ್ನೆಮೇಲೆ
ತುಟಿಯಿಂದ
ಒತ್ತಿದರೆ ಸಾಕಂತೆ....


====================

ಅವಳು ನನ್ನನ್ನು
ವಂಚಿಸಿದಾಗ
ನಾ ಮನಕೆರಳಿ
ಕೊಲೆಗಾರನಾಗಿಬಿಟ್ಟೆ

ಅವಳನ್ನೇನೂ
ಮಾಡಲಿಲ್ಲ
ನನ್ನ ಎದೆಗವಿಚಿಕುಳಿತ
ಅವಳ ಭಾವಚಿತ್ರವನ್ನು
ಹಳೆ ಪುಸ್ತಕದ ಹಾಳೆಗಳನಡುವೆ
ಸಮಾಧಿ ಮಾಡಿಬಿಟ್ಟೆ..