Thursday, November 8, 2012

ನಮ್ಮ ಕನ್ನಡಿಗರು

ನಮ್ಮ
ಕನ್ನಡಿಗರು
ವೀರರು
ಶೂರರು
ಧೀರರು
ನವೆಂಬರ್
ಬರುವ
ತನಕ
ಏಳರು

ಹೊಸ ಗಾದೆಗಳು

೧. ಆಳಾಗಿ ದುಡಿ; ಹಾಳಾಗಿ ಹೋಗು

೨. ಕೈ ಕೆಸರಾದರೆ ನಾನೇನು ಮಾಡಲಿ?

೩. ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು

೪. ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ

೫. ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..

೬. ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ

೭. ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು

೮. ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ?

೯. ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.

೧೦. ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ

೧೧. ಮನಸ್ಸೊಳಗೆ ಅನಾಚಾರ, ಮುಖದಲ್ ಬೃಂದಾವನ..

೧೨ ಗೆಳೆಯರ ಜಗಳ ಗುಂಡು ಹಾಕುವ ತನಕ..

೧೩ ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..

Friday, September 14, 2012

Great Love ಅಂದ್ರೆ ಯಾವುದು ಗೊತ್ತಾ?


ನಿನ್ನ ನೋವನೆಲ್ಲ ನುಂಗಿಕೊಂಡು
ಅವಳ ಬಗ್ಗೆ ಕೇರ್ ತಗೊಂಡೆಯಲ್ಲ ಅದು,
ಅವಳು ನಿನ್ನನ್ನು ತಿರಸ್ಕರಿಸಿದಾಗಲೂ
ನೀನು ಮಾತ್ರ ಅವಳನ್ನು ಪ್ರೀತಿಸ್ತಿರೋದು
ಮತ್ತು
ಅವಳು ಬೇರೊಬ್ಬನ್ನ Love ಮಾಡ್ತಿದ್ದಾಗಲೂ
ನಿನ್ನ ಮುಖದಲ್ಲಿ ಇನ್ನೂ ನಗು ಇರೋದು

Monday, September 10, 2012

ಮರೆತ ಕ್ಷಣಗಳನ್ನು...

ಮರೆಯಲು
ಪ್ರಯತ್ನಿಸುತ್ತಿದ್ದೇನೆ
ಅವಳೊಂದಿಗೆ
ಮಾತಾಡಿದ ಕ್ಷಣಗಳನ್ನಲ್ಲ

ಅವಳೊಂದಿಗೆ
ಮಾತಾಡಲು
ಮರೆತ
ಕ್ಷಣಗಳನ್ನು....

ವ್ಯರ್ಥ ಕಣೆ

ನಿನಗೋಸ್ಕರ ನನ್ನ ಜೀವನದ
ಕೋಟ್ಯಾಂತರ ಕ್ಷಣಗಳನ್ನು
ಕಳೆದದ್ದು ವ್ಯರ್ಥ ಕಣೆ

ನನಗೋಸ್ಕರ

ಒಂದು ಹನಿಯೂ
ಕಣ್ಣೀರು ಹಾಕದ ನೀ
ಸ್ವಾರ್ಥಿ ಕಣೆ.....

Thursday, September 6, 2012

ಅವಳು ನನ್ನ ಬಿಟ್ಟು ಹೋಗುವಾಗ

ಅವಳು ನನ್ನ ಬಿಟ್ಟು
ಹೋಗುವಾಗ

ಕರ್ಚಿಫ್ ಕೊಟ್ಟು ಹೊಗೋದು
ಮರೆಯಲಿಲ್ಲ...

'ನಡು'ವೆ

ಪ್ರೀತಿ ಅಂಕುರಿಸಿತು
ನನ್ನ-ಅವಳ
ನಡುವೆ

ಅದಕ್ಕೆ
ಕಾರಣ
ಅವಳ ಬಳುಕುವ
'ನಡು'ವೆ