Thursday, May 31, 2012

ಮುತ್ತಿನಿಂದ ಎಚ್ಚರ ತಪ್ಪಿಸುವುದು

'ಮುತ್ತಿನಿಂದ
ಎಚ್ಚರ ತಪ್ಪಿಸುವುದು'.
ಹೇಗೆಂದು
ಗೂಗಲ್ ನಲ್ಲಿ ಹುಡುಕಿದೆ
ಸಿಗಲಿಲ್ಲ.!

ಆದರೆ
ನನ್ನವಳು ನನ್ನ ಮೇಲೆ
ಅದನ್ನು
ಸುಲಭವಾಗಿ
ಪ್ರಯೋಗಿಸಿದಳು!!!!!!!!

ಹರಿತ

ಈ ಜಗತ್ತಿನಲ್ಲಿ
ಎರಡು ಅಲುಗಿನ
ಬ್ಲೇಡಿಗಿಂತ
ಯಾವೂದೂ ಹರಿತವಿಲ್ಲ
ಎಂದು ನಂಬಿದ್ದೆ

'ನಿನ್ನ ಕಂಗಳ ನೋಡುವ ತನಕ'!!

ಹಳೇ ಸ್ಟಾಕ್ ಗಳು -8

ನಾನೂ
ತಪ್ಪು ಮಾಡಿದೆ

ಅವಳೂ
ತಪ್ಪು ಮಾಡಿದಳು


ನಾವಿಬ್ಬರೂ
ತಪ್ಪು ಮಾಡಲಿಲ್ಲ (ಸದ್ಯ)!!!!

=====================

ಅಂದು
ಅವಳು ನನ್ನ ನೋಡಲೆಂದು
ಏನೆಲ್ಲಾ ಪಾಡು ಪಟ್ಟಿದ್ದೆ

ಚಿಕ್ಕ ಮಗುವಿನಂತೆ ಅತ್ತಿದ್ದೆ!

ಇಂದು
ಅದೇಕೋ
ಅವಳು ಕಂಡೊಡನೆ
ತಲೆ ತಗ್ಗಿಸುತ್ತೆನೆ
ಅವಳಿಗೆ ನಾ ಕಾಣದಿರಲೆಂದು!!


=================

ನನ್ನಲ್ಲಿ
ಕಳೆದು ಕೊಂಡಿದ್ದನ್ನು
ಅವಳಲ್ಲಿ
ಹುಡುಕಿದೆ,,,,,,,,,,,


===============

ಹಳೆಯ Buzzಗಳನ್ನು
ನೋಡಿದಾಗ
ಅದರಲ್ಲಿ ನಾ
ಕಾಣುವೆನೆಂದು ಕೊಂಡಿದ್ದೆ

ಆದರೆ
ಅವುಗಳಲ್ಲೂ ಅವಳೇ
ಕಂಡಳು

ಹಳೇ ಸ್ಟಾಕ್ ಗಳು -7

ಮೊನ್ನೆ I puc ಕನ್ನಡ ಎಕ್ಸಂನಲ್ಲಿ
'ಸುರದ್ರೂಪಿ' (ಹ್ಯಾಂಡಸಮ್)
ಅನ್ನೋ ಪದಕ್ಕೆ ಸಮನಾರ್ಥಕ ಪದಕೇಳಿದ್ರೆ

ಎಲ್ಲಾ ಹುಡುಗೀರು ನನ್ನ ಹೆಸರು ಬರೆದಿದ್ದಾರೆ ಕಣ್ರಿ!!!

ಛೇ How many girls are Craz about me yaaaa!!!

==========================

ನಾನು ಅವಳು
ಬೇಟಿಯಾದಾಗ

ಅವಳು 'ಮಾತೇ ಮುತ್ತು' ಅಂದಳು

ನಾನು 'ಮುತ್ತೇ ಮಾತು' ಎಂದೆ!!

==========================

ನಾನು ಅವಳನ್ನೇ
ಪ್ರೀತಿಸುವ

ಅವಶ್ಯಕತೆಯಿಲ್ಲ

ಅನಿವಾರ್ಯತೆ ಇದೆ!!!

===================== 
:ಒಂಟಿಪ್ರೇಮಿ ಗಾದೆ:

'Buzz ನ ಜಗಳ ಈ ಮೇಲ್ ನಲ್ಲಿ ಅಂತ್ಯವಾಯಿತು'

ಹಳೇ ಸ್ಟಾಕ್ ಗಳು -6

ನಾನು ಅವಳನ್ನು ಪ್ರೀತಿಸಿದೆ
ಅವಳೂ ಪ್ರೀತಿಸಿದಳು

ನಾವು ವದುವೆಯಾದೆವು..


ಈಗ ಅವಳು ತನ್ನ ಗಂಡನ ಮನೆಯಲ್ಲಿ
ಸುಖವಾಗಿದ್ದಾಳೆ!!!!

==================

ಈ ಜಗತ್ತಿಗೇ ತಿಳಿಯುವಹಾಗೆ
ನಮ್ಮ ಪ್ರೀತಿಯನ್ನು
ಸಾರಿ ಸಾರಿ
ಹೇಳೋಣ...

ಆದರೆ......


ಯಾವುದೇ ಕಾರಣಕ್ಕೂ
ನಮ್ಮ ತಂದೆ ತಾಯಿಗಳಿಗೆ
ಈ ವಿಷಯ
ತಿಳಿಯದಂತೆ
ಎಚ್ಚರವಹಿಸೋಣ!!!!

====================

ನನ್ನ ಪ್ರೀತಿ ನಿಜವೆಂದು
ಅವಳಿಗೆ ಮೂರೇ ನಿಮಿಷದಲ್ಲಿ
ಗೊತ್ತಾಯಿತು...

ಅವಳ ಪ್ರೀತಿ ಸುಳ್ಳೆಂದು
ತಿಳಿಯಲು
ನನಗೆ ಮೂರು ವರ್ಷ ಬೇಕಾಯಿತು!!!

====================

ನಾನು ಅವಳಲ್ಲಿ
ಪ್ರೀತಿಯನ್ನಷ್ಟೇ ಕೇಳಿದೆ
ಅವಳು ಅದರ ಜೊತೆಗೆ
ನೋವನ್ನೂ ಕೊಟ್ಟಳು

ಅವಾಗ್ಲೇ ಗೊತ್ತಾಗಿದ್ದು
ಪ್ರೀತಿ ಮಾಡಿದ್ರೆ
ನೋವು ಉ(ಖ)ಚಿತ ಅಂತ

================
ಅವಳ ಪ್ರೀತಿ ಪ್ರಪಾತದಂತೆ
ಕೆಲವೊಮ್ಮೆ ಅವಳೇ ತಳ್ಳುತ್ತಾಳೆ

ಇನ್ನು ಕೆಲವೊಮ್ಮೆ
'ನಾನೇ ಬೀಳುತ್ತೆನೆ'.

==============
ಈ ಜಗದಲ್ಲಿ
ಅವಳಿರುವ ಜಾಗ
ಸ್ವರ್ಗವಾದರೆ,


ಉಳಿದದ್ದು
ಖಂಡಿತಾ ನರಕ

ಸರ್ವರ್ 'ಸ್ಲೋ' ಆಗಿದೆ

FDA ಅರ್ಜಿ ತುಂಬಲು
ಅವಳ ಪೋಟೋವನ್ನು
ಅಪ್ ಲೋಡ್ ಮಾಡಿದೆ...

ಈಗ ಇಡೀ ಸರ್ವರ್ 'ಸ್ಲೋ' ಆಗಿದೆ

ಸರ್ವರ್ ಕೂಡ ನನ್ನವಳ ಸೌಂದರ್ಯ ನೋಡುತ್ತ ಮೈ ಮರೆತಿದೆ......

ದುರಂತ ಅಂದ್ರೆ ಹೇಗಿರುತ್ತೆ ನೋಡಿ...

ದುರಂತ ಅಂದ್ರೆ ಹೇಗಿರುತ್ತೆ ನೋಡಿ...

ಸಾವಿರಾರು ರೂಪಾಯಿ ಕೊಟ್ಟು
'ಅಂಡರ್ ವೇರ್' ಖರೀದಿಸಿದರೂ ಕೂಡ

ಹಾಕಿಕೊಂಡಾಗ ಎಲ್ಲರಿಗೂ ತೋರಿಸಿ
ಖುಷಿಪಡುವಂತಿಲ್ಲ!!!!....