Thursday, May 31, 2012

ಹಳೇ ಸ್ಟಾಕ್ ಗಳು -8

ನಾನೂ
ತಪ್ಪು ಮಾಡಿದೆ

ಅವಳೂ
ತಪ್ಪು ಮಾಡಿದಳು


ನಾವಿಬ್ಬರೂ
ತಪ್ಪು ಮಾಡಲಿಲ್ಲ (ಸದ್ಯ)!!!!

=====================

ಅಂದು
ಅವಳು ನನ್ನ ನೋಡಲೆಂದು
ಏನೆಲ್ಲಾ ಪಾಡು ಪಟ್ಟಿದ್ದೆ

ಚಿಕ್ಕ ಮಗುವಿನಂತೆ ಅತ್ತಿದ್ದೆ!

ಇಂದು
ಅದೇಕೋ
ಅವಳು ಕಂಡೊಡನೆ
ತಲೆ ತಗ್ಗಿಸುತ್ತೆನೆ
ಅವಳಿಗೆ ನಾ ಕಾಣದಿರಲೆಂದು!!


=================

ನನ್ನಲ್ಲಿ
ಕಳೆದು ಕೊಂಡಿದ್ದನ್ನು
ಅವಳಲ್ಲಿ
ಹುಡುಕಿದೆ,,,,,,,,,,,


===============

ಹಳೆಯ Buzzಗಳನ್ನು
ನೋಡಿದಾಗ
ಅದರಲ್ಲಿ ನಾ
ಕಾಣುವೆನೆಂದು ಕೊಂಡಿದ್ದೆ

ಆದರೆ
ಅವುಗಳಲ್ಲೂ ಅವಳೇ
ಕಂಡಳು

1 comment:

Madivala Venkatesh/ಮಡಿವಾಳ ವೆಂಕಟೇಶ said...

ಬಸವರಾಜ್ ಅವ್ರೆ-
ಸಖತ್---

ಶುಭವಾಗಲಿ...

\|/