ದಾರಿಹೋಕ ನಾನು: ಕತ್ತಲಾಗಿಬಿಟ್ಟಿದೆ
ಇದೊಂದು ರಾತ್ರಿ ನಿನ್ನ ಹೃದಯದಲ್ಲಿ ತಂಗಲೇ??
ಹೆಚ್ಚೇನು ಆಸೆಗಳಿಲ್ಲ; ಇದೊಂದು ಜನ್ಮ
ಜೊತೆಇದ್ದು ಬಿಡು, ನನ್ನ ಜೀವವೇ.
ಆಗಸದಲ್ಲೀಗ ಸೂರ್ಯನಿಲ್ಲ; ಚಂದ್ರನಿದ್ದಾನೆ
ಇಲ್ಲೀಗ ನೀನು ಇಲ್ಲ, ಉಳಿದಿರುವುದು
ಎದೆಗೆ ತಂಪನೆರೆವ ನಿನ್ನ ನೆನಪೊಂದೆ
ನಿನ್ನ ನೆನಪಾಗುವುದು; ಅತ್ತತ್ತು ಕರಗುವುದು
ನನ್ನದು ಇದ್ದೇ ಇದೇ ಬಿಡು, ನೀನು ಹೇಗಿದ್ದಿಯಾ?
ಬದುಕಿದ್ದೇ ಕನಸೋ ಕನಸದ್ದೇ ಬದುಕೋ
ನಿನ್ನ ಪ್ರೀತಿ ನಿಜವೋ ವಿದ್ರೋಹವೋ? ನಿಜವೆ ಹೇಳೆ!!
ಕೈ ಕೈ ಹಿಡಿದು ನೆಡೆಯ ಬೇಕೆಂದು ಕೊಂಡಿದ್ದೆವಲ್ಲ; ಬದುಕೆಲ್ಲ
ಇರಲಿ ಬಿಡು, ಬೀದಿಯಲಿ ಒಬ್ಬಂಟಿ ನಾನೊಬ್ಬನೇ ಅಲ್ಲ
ಕನಸುಗಳನಂತೂ ಕಸಿದುಕೊಂಡಿದ್ದಿಯ; ನನ್ನ ಬದುಕೇ
ಕಣ್ಣೀರನ್ನೂ ತೆಗೆದುಕೋ, ಏಕೆ ಸುಮ್ಮನಿದ್ದಿಯಾ?
ಈಗ ಯಾರ ಮನೆಯಂಗಳದ ರಂಗವಲ್ಲಿಯೇ ನೀನು?
ನನ್ನ ಹೃದಯದ ನೀನು ಬೂದಿಯೇ !!
ಇದೊಂದು ರಾತ್ರಿ ನಿನ್ನ ಹೃದಯದಲ್ಲಿ ತಂಗಲೇ??
ಹೆಚ್ಚೇನು ಆಸೆಗಳಿಲ್ಲ; ಇದೊಂದು ಜನ್ಮ
ಜೊತೆಇದ್ದು ಬಿಡು, ನನ್ನ ಜೀವವೇ.
ಆಗಸದಲ್ಲೀಗ ಸೂರ್ಯನಿಲ್ಲ; ಚಂದ್ರನಿದ್ದಾನೆ
ಇಲ್ಲೀಗ ನೀನು ಇಲ್ಲ, ಉಳಿದಿರುವುದು
ಎದೆಗೆ ತಂಪನೆರೆವ ನಿನ್ನ ನೆನಪೊಂದೆ
ನಿನ್ನ ನೆನಪಾಗುವುದು; ಅತ್ತತ್ತು ಕರಗುವುದು
ನನ್ನದು ಇದ್ದೇ ಇದೇ ಬಿಡು, ನೀನು ಹೇಗಿದ್ದಿಯಾ?
ಬದುಕಿದ್ದೇ ಕನಸೋ ಕನಸದ್ದೇ ಬದುಕೋ
ನಿನ್ನ ಪ್ರೀತಿ ನಿಜವೋ ವಿದ್ರೋಹವೋ? ನಿಜವೆ ಹೇಳೆ!!
ಕೈ ಕೈ ಹಿಡಿದು ನೆಡೆಯ ಬೇಕೆಂದು ಕೊಂಡಿದ್ದೆವಲ್ಲ; ಬದುಕೆಲ್ಲ
ಇರಲಿ ಬಿಡು, ಬೀದಿಯಲಿ ಒಬ್ಬಂಟಿ ನಾನೊಬ್ಬನೇ ಅಲ್ಲ
ಕನಸುಗಳನಂತೂ ಕಸಿದುಕೊಂಡಿದ್ದಿಯ; ನನ್ನ ಬದುಕೇ
ಕಣ್ಣೀರನ್ನೂ ತೆಗೆದುಕೋ, ಏಕೆ ಸುಮ್ಮನಿದ್ದಿಯಾ?
ಈಗ ಯಾರ ಮನೆಯಂಗಳದ ರಂಗವಲ್ಲಿಯೇ ನೀನು?
ನನ್ನ ಹೃದಯದ ನೀನು ಬೂದಿಯೇ !!
No comments:
Post a Comment