Thursday, May 31, 2012

ಮರೀಚಿಕೆ,

ಕನಸ ಕಾಣಬೇಡವೋ
ಹುಡುಗ, ಮರೀಚಿಕೆಯಂತೆ
ಅದು ಕೈಗೆಟುಕಲಾರದು
ಅಂದಿದ್ದೆ ನೀನು.........


ನಿನಗ್ಹೇಗೆ ಗೊತ್ತಿತ್ತೆ
ಹುಡುಗಿ, ನನ್ನ ಕನಸ
ತುಂಬಾ ತುಂಬಿದ್ದು
ನೀನು ಮತ್ತು ನಿನ್ನ
ಪ್ರೀತಿ ಅಂತ...

=====================
ಮೊದಲ ಮಳೆಗೆ ಅರಳಿದೆ
ಮಣ್ಣಿನ ವಾಸನೆ,
ನನ್ನವಳ ಮೊದಲ ಮುತ್ತಿನ ಕಂಪು
ಆ ಕಂಪಿನಲ್ಲಿದೆ
ಪ್ರೀತಿಯ ತಂಪು,,,,,

ಹೊರಗೆ ಒಂದೇ ಸಮನೆ ಜಡಿಮಳೆ
ಒಳಗೆ ನನ್ನವಳ ನೆನಪಿನ ಅಲೆ

ಕೆಲಸದವೇಳೆ ಕಾಡುವ ನೆನಪು
ಪುಷ್ಪದೊಳಗಿನ ಪರಿಮಳದಂತೆ

ಮನನೊಂದು
ದೂರವಾದ ಮುಗ್ದ ಪ್ರೇಮಿಗಳ ಅಳು
ಈ ಮಳೆ ಹನಿಗಳು.......


------------------------ ಒಂಟಿಪ್ರೇಮಿ

===============

No comments: