Thursday, May 31, 2012

ಕೆಲವೊಮ್ಮೆ ಯೋಚಿಸುತ್ತೆನೆ

ದಿನವೂ ಮುಂಜಾನೆ ಉದಯಿಸಿ
ಸಂಜೆಗೆ ಮುಳುಗುವ
ಸೂರ್ಯನನ್ನು
ನಾನೇಕೆ ನೆನೆಯಲಿ??

ಮುಂಜಾನೆ ಅರಳಿ
ಸಂಜೆ ಬಾಡುವ
ಹೂ ಗಳ ಬಗ್ಗೆ
ನಾನೇಕೆ ಚಿಂತಿಸಲಿ?

ಈ ಜಗತ್ತೇ ಪ್ರಳಯದಲ್ಲಿ
ಕೊಚ್ಚಿ ಹೋದರೂ
ನನಗದರ ಗೊಡವೆಯಿಲ್ಲ

ಆದರೂ
ನಾನು
ಕೆಲವೊಮ್ಮೆ ಯೋಚಿಸುತ್ತೆನೆ
"ನೀನೇಕೆ ನನ್ನ ಅರ್ಥೈಸಲಾರೆ"? ಎಂದು

No comments: