Thursday, May 31, 2012

:ಕೆಲವು ಸಿನಿಮಾ ವಿಷಯಗಳು:

:ಕೆಲವು ಸಿನಿಮಾ ವಿಷಯಗಳು:
(ಇವು ಸಿನಿಮಾಗಳಲ್ಲಿ ಮಾತ್ರ ಸಾದ್ಯ)


*ನಾಯಕ ಎಷ್ಟೇ ಬಡವನಾಗಿದ್ದರೂ ಒಳ್ಳೆಯ ಜೀನ್ಸ್/ ಶೂ ಧರಿಸಬಲ್ಲ.
*ನಾಯಕನ ರಕ್ತ ಅಪಾಯದಲ್ಲಿರುವವರ ರಕ್ತಕ್ಕೆ ಯಾವಾಗಲೂ ಮ್ಯಾಚ್ ಆಗುತ್ತದೆ.
*ಯಾರಿಗಾದರೂ ಅಪಘಾತವಾದಲ್ಲಿ ಅವರನ್ನು ಸೀದಾ ಆಸ್ವತ್ರೆಯ ಅಪರೇಷನ್ ಕೋಣೆಗೆ ಮೊದಲು ಕರೆದುಕೊಂಡು ಹೋಗಲಾಗುತ್ತದೆ.(ಕ್ಯೂ ನಿಲ್ಲುವುದಿಲ್ಲ/ಆಸ್ವತ್ರೆಯ ಸಾಮಾನ್ಯ ನಿಯಮಗಳು ಅವರಿಗೆ ಅನ್ವಯಿಸಲ್ಲ)
*ನಾಯಕಿಗೆ ಅಪಾಯಬಂದರೆ ಕೆಲವೇ ಕ್ಷಣಗಳಲ್ಲಿ ನಾಯಕ ಅವಳಮುಂದೆ ಹಾಜರ್ (ಎಷ್ಟೇ ದೂರವಿರಲಿ)
*ನಾಯಕ ಯಾರನ್ನದರೂ ಚೇಜ್ ಮಾಡಬೇಕಾದಲ್ಲಿ ಅವನ ಸಮೀಪದಲ್ಲಿ ಬೈಕ್/ಕಾರ್ ಕೀ ಸಮೇತ ರೆಡಿ ಇರುತ್ತದೆ ಹಾಗೂ ಬೈಕ್/ಕಾರ್ ನ ಮಾಲೀಕ ಅದು ಹೋದ ನಂತರ ಓಡಿ ಬರುತ್ತಾನೆ, (ಅವನು ಗಾಡಿ ಕಳುವಾದಕ್ಕೆ ಪೋಲಿಸ್ ಗೆ ಕಂಪ್ಲೇಟ್ ಕೊಡಲ್ಲ ಬಿಡಿ)
*ನಾಯಕನಿಗೆ ಬೈಕ್ ನಿಂದ ಹಿಡಿದು ಹೆಲಿಕ್ಯಾಷ್ಟರ್ ವರೆಗೂ ಎಲ್ಲಾ ವಾಹನವನ್ನೂ ಚಲಾಯಿಸಬಲ್ಲ (ಯಾವ ಟ್ರಾಫಿಕ್ ಪೋಲೀಸ್ ಕೂಡ DL ಕೇಳಲ್ಲ)
*ನಾಯಕ ಎಷ್ಟೇ ದಡ್ಡನಾಗಿದ್ದರೂ ಸಾಹಿತ್ಯರಚಿಸಿಕೊಂಡು ಹಾಡಬಲ್ಲ ಮತ್ತು ಡ್ಯಾನ್ಸ್ ಮಾಡಬಲ್ಲ.
*ವಿಲನ್ ಗಳು ಎಷ್ಟೇ ಗುಂಡು ಹೊಡೆದರೂ ಅವು ನಾಯಕನಿಗೆ ಬೀಳಲ್ಲ.
*ನಾಯಕ ಎಲ್ಲಾ ವಿಲನ್ ಗಳನ್ನು ಕಲಾತ್ಮಕವಾಗಿ ಶೂಟ್ ಮಾಡಬಲ್ಲ. ಅವನಗುರಿ ತಪ್ಪಲ್ಲ. & ಅವನ ಗನ್ ನಲ್ಲಿ ಬುಲೆಟ್ಸ್ ಖಾಲಿಯಾಗಲ್ಲ.
*ನಾಯಕನಿಗೆ ಎಷ್ಟೇ ಗುಂಡು ಬಿದ್ದರೂ ಅವನು ಮಾತಾಡಬಲ್ಲ/ ಕೆಲವರನ್ನು ಒಂದು ಗೂಡಿಸಬಲ್ಲ (ವಿಲನ್ ಗಳಿಗೆ ಇದು ಅನ್ವಯಿಸಲ್ಲ)


- ಇನ್ನೂ ತುಂಬಾ ಇವೆ .... TVಲಿ ಯಾವುದೋ ಹಳೆ ಸಿನಿಮಾ ಬರ್ತಿದೆ ಅದನ್ನ ನೋಡ್ಕೊಂಡು ಅಮೇಲೆ ಇನ್ನು ಸ್ವಲ್ಪ ಹೇಳ್ತಿನಿ.

1 comment:

Unknown said...

Maga totally right thought's