Thursday, May 31, 2012

ಕೊಲೆಗಾರನಾಗಿ ಬಿಟ್ಟೆ...

ಅವಳು ನನ್ನ ವಂಚಿಸಿದಾಗ
ನಾ ಮನ ಕೆರಳಿ
ಕೊಲೆಗಾರನಾಗಿ ಬಿಟ್ಟೆ....



ಅವಳನ್ನೇನೂ ಮಾಡಲಿಲ್ಲ
ನನ್ನ ಎದೆಗವಿಚಿ ಕುಳಿತಿದ್ದ
ಅವಳ ಭಾವಚಿತ್ರವನ್ನು
ಹಳೆಯ ಪುಸ್ತಕದ ಹಾಳೆಗಳ ಮಧ್ಯೆ
ಸಮಾಧಿ ಮಾಡಿಬಿಟ್ಟೆ...!!

ಅವಳನ್ನು ಮರೆಯದಿರಲು ಕಾರಣ

ಮರೆತು ಹೋಗಲು
ಅವಳದು
ಕೇವಲ ನೆನಪಲ್ಲ

:ಕೆಲವು ಸಿನಿಮಾ ವಿಷಯಗಳು:

:ಕೆಲವು ಸಿನಿಮಾ ವಿಷಯಗಳು:
(ಇವು ಸಿನಿಮಾಗಳಲ್ಲಿ ಮಾತ್ರ ಸಾದ್ಯ)


*ನಾಯಕ ಎಷ್ಟೇ ಬಡವನಾಗಿದ್ದರೂ ಒಳ್ಳೆಯ ಜೀನ್ಸ್/ ಶೂ ಧರಿಸಬಲ್ಲ.
*ನಾಯಕನ ರಕ್ತ ಅಪಾಯದಲ್ಲಿರುವವರ ರಕ್ತಕ್ಕೆ ಯಾವಾಗಲೂ ಮ್ಯಾಚ್ ಆಗುತ್ತದೆ.
*ಯಾರಿಗಾದರೂ ಅಪಘಾತವಾದಲ್ಲಿ ಅವರನ್ನು ಸೀದಾ ಆಸ್ವತ್ರೆಯ ಅಪರೇಷನ್ ಕೋಣೆಗೆ ಮೊದಲು ಕರೆದುಕೊಂಡು ಹೋಗಲಾಗುತ್ತದೆ.(ಕ್ಯೂ ನಿಲ್ಲುವುದಿಲ್ಲ/ಆಸ್ವತ್ರೆಯ ಸಾಮಾನ್ಯ ನಿಯಮಗಳು ಅವರಿಗೆ ಅನ್ವಯಿಸಲ್ಲ)
*ನಾಯಕಿಗೆ ಅಪಾಯಬಂದರೆ ಕೆಲವೇ ಕ್ಷಣಗಳಲ್ಲಿ ನಾಯಕ ಅವಳಮುಂದೆ ಹಾಜರ್ (ಎಷ್ಟೇ ದೂರವಿರಲಿ)
*ನಾಯಕ ಯಾರನ್ನದರೂ ಚೇಜ್ ಮಾಡಬೇಕಾದಲ್ಲಿ ಅವನ ಸಮೀಪದಲ್ಲಿ ಬೈಕ್/ಕಾರ್ ಕೀ ಸಮೇತ ರೆಡಿ ಇರುತ್ತದೆ ಹಾಗೂ ಬೈಕ್/ಕಾರ್ ನ ಮಾಲೀಕ ಅದು ಹೋದ ನಂತರ ಓಡಿ ಬರುತ್ತಾನೆ, (ಅವನು ಗಾಡಿ ಕಳುವಾದಕ್ಕೆ ಪೋಲಿಸ್ ಗೆ ಕಂಪ್ಲೇಟ್ ಕೊಡಲ್ಲ ಬಿಡಿ)
*ನಾಯಕನಿಗೆ ಬೈಕ್ ನಿಂದ ಹಿಡಿದು ಹೆಲಿಕ್ಯಾಷ್ಟರ್ ವರೆಗೂ ಎಲ್ಲಾ ವಾಹನವನ್ನೂ ಚಲಾಯಿಸಬಲ್ಲ (ಯಾವ ಟ್ರಾಫಿಕ್ ಪೋಲೀಸ್ ಕೂಡ DL ಕೇಳಲ್ಲ)
*ನಾಯಕ ಎಷ್ಟೇ ದಡ್ಡನಾಗಿದ್ದರೂ ಸಾಹಿತ್ಯರಚಿಸಿಕೊಂಡು ಹಾಡಬಲ್ಲ ಮತ್ತು ಡ್ಯಾನ್ಸ್ ಮಾಡಬಲ್ಲ.
*ವಿಲನ್ ಗಳು ಎಷ್ಟೇ ಗುಂಡು ಹೊಡೆದರೂ ಅವು ನಾಯಕನಿಗೆ ಬೀಳಲ್ಲ.
*ನಾಯಕ ಎಲ್ಲಾ ವಿಲನ್ ಗಳನ್ನು ಕಲಾತ್ಮಕವಾಗಿ ಶೂಟ್ ಮಾಡಬಲ್ಲ. ಅವನಗುರಿ ತಪ್ಪಲ್ಲ. & ಅವನ ಗನ್ ನಲ್ಲಿ ಬುಲೆಟ್ಸ್ ಖಾಲಿಯಾಗಲ್ಲ.
*ನಾಯಕನಿಗೆ ಎಷ್ಟೇ ಗುಂಡು ಬಿದ್ದರೂ ಅವನು ಮಾತಾಡಬಲ್ಲ/ ಕೆಲವರನ್ನು ಒಂದು ಗೂಡಿಸಬಲ್ಲ (ವಿಲನ್ ಗಳಿಗೆ ಇದು ಅನ್ವಯಿಸಲ್ಲ)


- ಇನ್ನೂ ತುಂಬಾ ಇವೆ .... TVಲಿ ಯಾವುದೋ ಹಳೆ ಸಿನಿಮಾ ಬರ್ತಿದೆ ಅದನ್ನ ನೋಡ್ಕೊಂಡು ಅಮೇಲೆ ಇನ್ನು ಸ್ವಲ್ಪ ಹೇಳ್ತಿನಿ.

ಹುಡುಗರ ದೊಡ್ಡತನ

ಹುಡುಗೀರು ಮೋಸ ಮಾಡಿದ್ರೆ
ಒಂದು ಪ್ರಾಣ ಹೋಗುತ್ತೆ,,,

ಹುಡುಗರು ಮೋಸ ಮಾಡಿದ್ರೆ
ಒಂದು ಪ್ರಾಣ ಹುಟ್ಟುತ್ತೆ !!

ಇದು ಹುಡುಗರ ದೊಡ್ಡತನ !!!

ತೆನೆ ಹೊತ್ತ

ತೆನೆ ಹೊತ್ತ
ರಾಗಿ
ಗೊನೆ ಹೊತ್ತ
ಬಾಳೆ
ಬಾಗುತ್ತವೆ

ಏನನ್ನೂ
ಹೊರಲಾರದ್ದು
ಹೆರಲಾರದ್ದು
ಬೀಗುತ್ತವೆ!

ನೀವು ಈಗಲೇ ಮಾಡಬೇಕಾದ ಕೆಲ್ಸ

ನೀವು ಈಗಲೇ ಮಾಡಬೇಕಾದ
ಕೆಲ್ಸ ಒಂದಿದೆ
ಅದೇನು ಗೊತ್ತಾ?

ನಿಮ್ಮ ಹುಡುಗಿ
ನಿಮ್ಮ ಮೊಬೈಲ್ ನಂಬರ್ ನ್ನು
ಏನೆಂದು ಸೇವ್ ಮಾಡಿದಾಳೆ ಅಂತ ನೋಡಿ!!

ಯಾಕೆ ಅಂತಿರಾ?

ನನ್ನ ಹುಡುಗಿ ನನ್ನ ಹೆಸರನ್ನು
ಏನಂಥ ಸೇವ್ ಮಾಡಿದ್ದಾಳೆ ಗೊತ್ತ??
"Bakra NO- 9" ಅಂತ!!


ಈಗ ಹೇಳಿ ನಿಮ್ಮ ಹುಡುಗಿ Cell ನಲ್ಲಿ ನಿಮ್ಮ ಹೆಸರೇನು?

ಮರೀಚಿಕೆ,

ಕನಸ ಕಾಣಬೇಡವೋ
ಹುಡುಗ, ಮರೀಚಿಕೆಯಂತೆ
ಅದು ಕೈಗೆಟುಕಲಾರದು
ಅಂದಿದ್ದೆ ನೀನು.........


ನಿನಗ್ಹೇಗೆ ಗೊತ್ತಿತ್ತೆ
ಹುಡುಗಿ, ನನ್ನ ಕನಸ
ತುಂಬಾ ತುಂಬಿದ್ದು
ನೀನು ಮತ್ತು ನಿನ್ನ
ಪ್ರೀತಿ ಅಂತ...

=====================
ಮೊದಲ ಮಳೆಗೆ ಅರಳಿದೆ
ಮಣ್ಣಿನ ವಾಸನೆ,
ನನ್ನವಳ ಮೊದಲ ಮುತ್ತಿನ ಕಂಪು
ಆ ಕಂಪಿನಲ್ಲಿದೆ
ಪ್ರೀತಿಯ ತಂಪು,,,,,

ಹೊರಗೆ ಒಂದೇ ಸಮನೆ ಜಡಿಮಳೆ
ಒಳಗೆ ನನ್ನವಳ ನೆನಪಿನ ಅಲೆ

ಕೆಲಸದವೇಳೆ ಕಾಡುವ ನೆನಪು
ಪುಷ್ಪದೊಳಗಿನ ಪರಿಮಳದಂತೆ

ಮನನೊಂದು
ದೂರವಾದ ಮುಗ್ದ ಪ್ರೇಮಿಗಳ ಅಳು
ಈ ಮಳೆ ಹನಿಗಳು.......


------------------------ ಒಂಟಿಪ್ರೇಮಿ

===============