ಒಮ್ಮೆ ಒಬ್ಬಾತ 3 ದಿನಗಳ ಕಾಲ ಕಷ್ಟಪಟ್ಟು
ಒಂದು ಅಧ್ಭುತವಾದ ಪೇಂಟಿಂಗ್ ಅನ್ನು
ರಚಿಸಿದ.ಆ ಪೇಂಟಿಂಗ್ ಹೇಗಿದೆ ಎಂದು ಜನಗಳ
ಅಭಿಪ್ರಾಯ ತಿಳಿಯ ಬೇಕೆಂದು ಆಸೆಪಟ್ಪ.
ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು
ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು
ಸಾಲನ್ನು ಬರೆದಿದ್ದ "ನಾನು ಮೊದಲ ಬಾರಿ ಬರೆದ
ಪೇಂಟಿಂಗ್ ಇದು. ಇದರಲ್ಲಿ ಲೋಪಗಳು ನಿಮಗೆ
ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೊ
ಅಲ್ಲಿ ಒಂದು × ಚಿನ್ಹೆ ಬರೆಯಿರಿ "ಎಂದು
ಅದರಲ್ಲಿತ್ತು .
.
.
ಸಂಜೆಯ ಹೊತ್ತಿಗೆ ಆ ಚಿತ್ರಕಾರ ಪುನಃ ಬಂದು
ಚಿತ್ರವನ್ನು ನೋಡಿದ. ಆತನಿಗೆ ಒಮ್ಮೆಲೇ ಅಳು
ಬಂದಿತು. ಕಾರಣ ಏನಂದರೆ ಆ ಚಿತ್ರದ ತುಂಬಾ ×
ಚಿನ್ಹೆಗಳೇ ತುಂಬಿ ಹೋಗಿತ್ತು.
.
ಚಿತ್ರಕಾರ ಅಳುತ್ತಾ ತನಗೆ ಚಿತ್ರಕಲೆ ಹೇಳಿಕೊಟ್ಟ
ಗುರುವಿನ ಬಳಿಗೆ ಬಂದು ಈ ರೀತಿ ಹೇಳಿದ
"ನಾನು ಪೇಂಟಿಂಗ್ ಮಾಡಲು ಸಾಧ್ಯವಿಲ್ಲ
ಎಂದು ಈ ದಿನ ನನಗೆ ತಿಳಿಯಿತು "ಎಂದು
ವಿಷಾದಿಸಿದ. ಗುರುಗಳು ಆತನಿಗೆ ಸಮಾಧಾನ ಮಾಡಿ
ಮತ್ತೆ ಆದೇ ಪೇಂಟಿಂಗ್ ಅನ್ನು ಪುನಃ ರಚನೆ
ಮಾಡು ಎಂದು ಹೇಳಿದರು. ಮತ್ತೊಮ್ಮೆ ಆ
ಪೇಂಟಿಂಗ್ ಬರೆದು ತಂದ ಈ ಬಾರಿ ಕೂಡ ಅದೇ
ಸ್ಥಳದಲ್ಲಿ ಇಟ್ಟು ಕೆಳಗೆ ಹೀಗೆ ಬರೆಸಿದರು
ಗುರುಗಳು " ನಾನು ಬರೆದ ಮೊದಲ
ಪೇಂಟಿಂಗ್ ಇದು. ಇದರಲ್ಲಿ ನಿಮಗೆ ಲೋಪಗಳು
ಕಾಣಿಸಬಹುದು . ಎಲ್ಲಿ ಲೋಪ ಕಾಣುತ್ತದೆಯೊ
ಅಲ್ಲಿ ಕೆಳಗೆ ಇಟ್ಟಿರುವ ಕುಂಚ ಹಾಗೂ
ವರ್ಣಗಳನ್ನು ಉಪಯೋಗಿಸಿ ಸರಿ ಮಾಡಿ "ಎಂದು
ಇತ್ತು.
.
ಒಂದು ವಾರ ಕಾಲ ಕಳೆದರು ಒಬ್ಬರಾದರು
ಅದರಲ್ಲಿರುವ ಲೋಪಗಳನ್ನು ಸರಿಪಡಿಸಲಿಲ್ಲ.
.
ಹೀಗೆಕೆ ಆಯಿತು?
ಎದುರಿನಲ್ಲಿರುವ ವ್ಯಕ್ತಿಯ ಕುರಿತು ವಿಮರ್ಶೆ
ಮಾಡುವುದು ಬಹಳ ಸುಲಭ
ಸರಿ ತಿದ್ದುವುದು ಬಹಳ ಕಷ್ಟ.
ಸಮಾಜದಲ್ಲಿ ತಪ್ಪು ಹುಡುಕುವುದು ಸುಲಭ.
ಸರಿಪಡಿಸುವುದು ಕಷ್ಟ.
Tuesday, April 2, 2019
ಅಧ್ಭುತವಾದ ಪೇಂಟಿಂಗ್
Subscribe to:
Post Comments (Atom)
No comments:
Post a Comment