ಒಮ್ಮೆ ರಾಜಸ್ಥಾನದ ರಾಜ "ಜೈ ಸಿಂಗ್ " ಲಂಡನ್ ಪ್ರವಾಸ ಕೈಗೊಂಡಿದ್ದರು ಅದೊಂದು ದಿನ ಜೈಸಿಂಗ್ ಲಂಡನ್ ನ "ಬಾಂಡ್ " ಬೀದಿಯಲ್ಲಿ ಸಾಮಾನ್ಯ ಪ್ರಜೆಯಂತೆ ನಡೆದುಬರುತ್ತಿದ್ದರು ಆಗ "ರೋಲ್ಸ್ ರಾಯ್ಸ್ "ಕಾರಿನ ಮಾರಾಟ ಮಳಿಗೆ ಅವರ ಕಣ್ಣಿಗೆ ಬಿತ್ತು.
ಅಂಗಡಿಯ ಒಳಗೆ ಬಂದ ಜೈಸಿಂಗ್ ಕಾರನ್ನು ಕೊಂಡುಕೊಳ್ಳುವ ಮನಸ್ಸಾಯಿತು.
ಅದರಂತೆ ಅಲ್ಲಿನ ಮಾಲೀಕನ ಬಳಿ ಕಾರಿನ ಬೆಲೆಯ ಬಗ್ಗೆ ವಿಚಾರಿಸಿದರು ಜೈಸಿಂಗ್ ಅವರ ಸಾಮಾನ್ಯ ವೇಷಭೂಷಣಗಳನ್ನು ನೋಡಿದ ಮಾಲೀಕ ಕಾರಿನ ಬಗ್ಗೆ ಸರಿಯಾದ ಮಾಹಿತಿ ನೀಡದೇ ಜೈಸಿಂಗ್ ಅವರಿಗೆ ಸರಿಯಾದ ಮಾಹಿತಿ ನೀಡದೆ ಉಡಾಫೆ ಮಾತುಗಳನ್ನಾಡಿ ಅವರನ್ನು ತುಚ್ಚವಾಗಿ ಕಂಡನು.
ಇದರಿಂದ ಅವಮಾನಿತರಾದ ಜೈಸಿಂಗ್ ನೇರವಾಗಿ ತಾವು ಉಳಿದುಕೊಂಡಿದ್ದ ಹೋಟೆಲ್ ಗೆ ಹೋದವರೇ ತಮ್ಮ ಸೇವಕರಿಗೆ ತಾವು ಕಾರಿನ ಮಳಿಗೆಗೆ ಹೋಗಬೇಕೆಂದು ಆಜ್ಞೆ ಮಾಡಿದರು.
ಕಾರಿನ ಮಳಿಗೆವರೆಗೆ ರತ್ನಗಂಬಳಿಯ ಹಾಸು ಉರುಳಿತು ರಾಜ ಜೈಸಿಂಗ್ ರಾಜಪೋಷಾಕಿನಲ್ಲಿ ಕಾರಿನ ಮಳಿಗೆಗೆ ಆಗಮಿಸಿದರು ಇದನ್ನು ಕಂಡ ಮಾಲೀಕ ಕಕ್ಕಾಬಿಕ್ಕಿಯಾದನು ಸ್ವಲ್ಪ ಹೊತ್ತಿನ ಮುಂಚೆ ಇಲ್ಲಿಗೆ ಬಂದಿದ್ದ ಸಾಮಾನ್ಯ ವ್ಯಕ್ತಿ ಇವರೇನಾ...?.ಎಂದು ಆಶ್ಚರ್ಯವಾಯಿತು.
ರಾಜ ಜೈಸಿಂಗ್ ಕೂಡಲೇ ಅಂಗಡಿಯಲ್ಲಿದ್ದ ಒಟ್ಟು 6 ಕಾರುಗಳನ್ನು ಖರೀದಿಸಿ ಸಾಗಣೆ ವೆಚ್ಚವನ್ನೂ ತಾವೇ ಪಾವತಿ ಮಾಡಿ ಭಾರತಕ್ಕೆ ತಂದರು.ಅಷ್ಟಕ್ಕೇ ಸುಮ್ಮನಾಗದ ಜೈಸಿಂಗ್ 6 ಐಷಾರಾಮಿ ಕಾರುಗಳನ್ನೂ ನಗರದ ಬೀದಿಗಳ ಕಸ ತುಂಬಿ ಸಾಗಿಸಲು ಬಳಸುವಂತೆ ತಮ್ಮ ರಾಜ್ಯದ ನಗರಪಾಲಿಕೆಗೆ ಆಜ್ಞೆ ಮಾಡಿದರು.ಅದರಂತೆ ರೋಲ್ಸ್ ರಾಯ್ಸ್ ಕಾರುಗಳು ಕಸದ ವಾಹನಗಳಾದವು.
ದಿನಕಳೆದಂತೆ ಈ ಸುದ್ದಿ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿತು "ರೋಲ್ಸ್ ರಾಯ್ಸ್" ಕಂಪನಿಯ ಪ್ರತಿಷ್ಠೆ.ಬೇಡಿಕೆ ದಿನಕಳೆದಂತೆ ಕುಸಿಯತೊಡಗಿತು.ಇದ
ರಿಂದ ಕಂಗೆಟ್ಟ ಕಂಪನಿ ರಾಜ ಜೈಸಿಂಗ್ ರಿಂದ ವಿವರಣೆ ಕೇಳಿತು ಜೈಸಿಂಗ್ ಲಂಡನ್ನಿನ ಷೋರೋಮಿನಲ್ಲಿ ತಮಗಾದ ಅವಮಾನವನ್ನು ವಿವರಿಸಿದರು.
ಕೂಡಲೇ ಕಂಪನಿಯು ತಮ್ಮಿಂದಾದ ಪ್ರಮಾದಕ್ಕೆ ರಾಜ ಜೈಸಿಂಗ್ ರಲ್ಲಿ ಕ್ಷಮೆಕೇಳಿತು ಅಷ್ಟಲ್ಲದೇ ಮತ್ತೆ 6 ಹೊಸ ಕಾರುಗಳನ್ನು ಉಚಿತವಾಗಿ ನೀಡುತ್ತೇವೆ ಕಾರಿನಲ್ಲಿ ಕಸ ಸಾಗಾಣಿಕೆಗೆ ಮಾಡುವುದನ್ನು ದಯವಿಟ್ಟು ಕೂಡಲೇ ನಿಲ್ಲಿಸಿ ಎಂದು ಬೇಡಿಕೊಂಡಿತು.ರಾಜ ಜೈಸಿಂಗ್ ಕಂಪನಿಯ ಕೋರಿಕೆಯನ್ನು ಮನ್ನಿಸಿ ಕಸ ಸಾಗಾಟವನ್ನು ನಿಲ್ಲಿಸಿ 6 ಹೊಸ ಕಾರುಗಳನ್ನು ಉಚಿತವಾಗಿ ಪಡೆದರು.
ಆ ಮೂಲಕ ಒಬ್ಬ ಭಾರತೀಯನಿಗೆ ಬ್ರಿಟಿಷ್ ಕಂಪನಿ "ರೋಲ್ಸ್ ರಾಯ್ಸ್" ನಿಂದ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡರು.
ಸ್ವಾಭಿಮಾನಿ ಭಾರತೀಯರಿಗೆ ಮಾದರಿಯಾದರು.
This is the power of Bharatiyas!
Friday, April 5, 2019
ಜೈ ಸಿಂಗ್ ಮತ್ತು ರೋಲ್ಸ್ ರಾಯ್ಸ್ ಕಾರು
Subscribe to:
Post Comments (Atom)
No comments:
Post a Comment