Thursday, May 31, 2012

ಮುತ್ತಿನಿಂದ ಎಚ್ಚರ ತಪ್ಪಿಸುವುದು

'ಮುತ್ತಿನಿಂದ
ಎಚ್ಚರ ತಪ್ಪಿಸುವುದು'.
ಹೇಗೆಂದು
ಗೂಗಲ್ ನಲ್ಲಿ ಹುಡುಕಿದೆ
ಸಿಗಲಿಲ್ಲ.!

ಆದರೆ
ನನ್ನವಳು ನನ್ನ ಮೇಲೆ
ಅದನ್ನು
ಸುಲಭವಾಗಿ
ಪ್ರಯೋಗಿಸಿದಳು!!!!!!!!

ಹರಿತ

ಈ ಜಗತ್ತಿನಲ್ಲಿ
ಎರಡು ಅಲುಗಿನ
ಬ್ಲೇಡಿಗಿಂತ
ಯಾವೂದೂ ಹರಿತವಿಲ್ಲ
ಎಂದು ನಂಬಿದ್ದೆ

'ನಿನ್ನ ಕಂಗಳ ನೋಡುವ ತನಕ'!!

ಹಳೇ ಸ್ಟಾಕ್ ಗಳು -8

ನಾನೂ
ತಪ್ಪು ಮಾಡಿದೆ

ಅವಳೂ
ತಪ್ಪು ಮಾಡಿದಳು


ನಾವಿಬ್ಬರೂ
ತಪ್ಪು ಮಾಡಲಿಲ್ಲ (ಸದ್ಯ)!!!!

=====================

ಅಂದು
ಅವಳು ನನ್ನ ನೋಡಲೆಂದು
ಏನೆಲ್ಲಾ ಪಾಡು ಪಟ್ಟಿದ್ದೆ

ಚಿಕ್ಕ ಮಗುವಿನಂತೆ ಅತ್ತಿದ್ದೆ!

ಇಂದು
ಅದೇಕೋ
ಅವಳು ಕಂಡೊಡನೆ
ತಲೆ ತಗ್ಗಿಸುತ್ತೆನೆ
ಅವಳಿಗೆ ನಾ ಕಾಣದಿರಲೆಂದು!!


=================

ನನ್ನಲ್ಲಿ
ಕಳೆದು ಕೊಂಡಿದ್ದನ್ನು
ಅವಳಲ್ಲಿ
ಹುಡುಕಿದೆ,,,,,,,,,,,


===============

ಹಳೆಯ Buzzಗಳನ್ನು
ನೋಡಿದಾಗ
ಅದರಲ್ಲಿ ನಾ
ಕಾಣುವೆನೆಂದು ಕೊಂಡಿದ್ದೆ

ಆದರೆ
ಅವುಗಳಲ್ಲೂ ಅವಳೇ
ಕಂಡಳು

ಹಳೇ ಸ್ಟಾಕ್ ಗಳು -7

ಮೊನ್ನೆ I puc ಕನ್ನಡ ಎಕ್ಸಂನಲ್ಲಿ
'ಸುರದ್ರೂಪಿ' (ಹ್ಯಾಂಡಸಮ್)
ಅನ್ನೋ ಪದಕ್ಕೆ ಸಮನಾರ್ಥಕ ಪದಕೇಳಿದ್ರೆ

ಎಲ್ಲಾ ಹುಡುಗೀರು ನನ್ನ ಹೆಸರು ಬರೆದಿದ್ದಾರೆ ಕಣ್ರಿ!!!

ಛೇ How many girls are Craz about me yaaaa!!!

==========================

ನಾನು ಅವಳು
ಬೇಟಿಯಾದಾಗ

ಅವಳು 'ಮಾತೇ ಮುತ್ತು' ಅಂದಳು

ನಾನು 'ಮುತ್ತೇ ಮಾತು' ಎಂದೆ!!

==========================

ನಾನು ಅವಳನ್ನೇ
ಪ್ರೀತಿಸುವ

ಅವಶ್ಯಕತೆಯಿಲ್ಲ

ಅನಿವಾರ್ಯತೆ ಇದೆ!!!

===================== 
:ಒಂಟಿಪ್ರೇಮಿ ಗಾದೆ:

'Buzz ನ ಜಗಳ ಈ ಮೇಲ್ ನಲ್ಲಿ ಅಂತ್ಯವಾಯಿತು'

ಹಳೇ ಸ್ಟಾಕ್ ಗಳು -6

ನಾನು ಅವಳನ್ನು ಪ್ರೀತಿಸಿದೆ
ಅವಳೂ ಪ್ರೀತಿಸಿದಳು

ನಾವು ವದುವೆಯಾದೆವು..


ಈಗ ಅವಳು ತನ್ನ ಗಂಡನ ಮನೆಯಲ್ಲಿ
ಸುಖವಾಗಿದ್ದಾಳೆ!!!!

==================

ಈ ಜಗತ್ತಿಗೇ ತಿಳಿಯುವಹಾಗೆ
ನಮ್ಮ ಪ್ರೀತಿಯನ್ನು
ಸಾರಿ ಸಾರಿ
ಹೇಳೋಣ...

ಆದರೆ......


ಯಾವುದೇ ಕಾರಣಕ್ಕೂ
ನಮ್ಮ ತಂದೆ ತಾಯಿಗಳಿಗೆ
ಈ ವಿಷಯ
ತಿಳಿಯದಂತೆ
ಎಚ್ಚರವಹಿಸೋಣ!!!!

====================

ನನ್ನ ಪ್ರೀತಿ ನಿಜವೆಂದು
ಅವಳಿಗೆ ಮೂರೇ ನಿಮಿಷದಲ್ಲಿ
ಗೊತ್ತಾಯಿತು...

ಅವಳ ಪ್ರೀತಿ ಸುಳ್ಳೆಂದು
ತಿಳಿಯಲು
ನನಗೆ ಮೂರು ವರ್ಷ ಬೇಕಾಯಿತು!!!

====================

ನಾನು ಅವಳಲ್ಲಿ
ಪ್ರೀತಿಯನ್ನಷ್ಟೇ ಕೇಳಿದೆ
ಅವಳು ಅದರ ಜೊತೆಗೆ
ನೋವನ್ನೂ ಕೊಟ್ಟಳು

ಅವಾಗ್ಲೇ ಗೊತ್ತಾಗಿದ್ದು
ಪ್ರೀತಿ ಮಾಡಿದ್ರೆ
ನೋವು ಉ(ಖ)ಚಿತ ಅಂತ

================
ಅವಳ ಪ್ರೀತಿ ಪ್ರಪಾತದಂತೆ
ಕೆಲವೊಮ್ಮೆ ಅವಳೇ ತಳ್ಳುತ್ತಾಳೆ

ಇನ್ನು ಕೆಲವೊಮ್ಮೆ
'ನಾನೇ ಬೀಳುತ್ತೆನೆ'.

==============
ಈ ಜಗದಲ್ಲಿ
ಅವಳಿರುವ ಜಾಗ
ಸ್ವರ್ಗವಾದರೆ,


ಉಳಿದದ್ದು
ಖಂಡಿತಾ ನರಕ

ಸರ್ವರ್ 'ಸ್ಲೋ' ಆಗಿದೆ

FDA ಅರ್ಜಿ ತುಂಬಲು
ಅವಳ ಪೋಟೋವನ್ನು
ಅಪ್ ಲೋಡ್ ಮಾಡಿದೆ...

ಈಗ ಇಡೀ ಸರ್ವರ್ 'ಸ್ಲೋ' ಆಗಿದೆ

ಸರ್ವರ್ ಕೂಡ ನನ್ನವಳ ಸೌಂದರ್ಯ ನೋಡುತ್ತ ಮೈ ಮರೆತಿದೆ......

ದುರಂತ ಅಂದ್ರೆ ಹೇಗಿರುತ್ತೆ ನೋಡಿ...

ದುರಂತ ಅಂದ್ರೆ ಹೇಗಿರುತ್ತೆ ನೋಡಿ...

ಸಾವಿರಾರು ರೂಪಾಯಿ ಕೊಟ್ಟು
'ಅಂಡರ್ ವೇರ್' ಖರೀದಿಸಿದರೂ ಕೂಡ

ಹಾಕಿಕೊಂಡಾಗ ಎಲ್ಲರಿಗೂ ತೋರಿಸಿ
ಖುಷಿಪಡುವಂತಿಲ್ಲ!!!!....

ಬದುಕಿದ್ದೇ ಕನಸೋ ಕನಸದ್ದೇ ಬದುಕೋ

ದಾರಿಹೋಕ ನಾನು: ಕತ್ತಲಾಗಿಬಿಟ್ಟಿದೆ
ಇದೊಂದು ರಾತ್ರಿ ನಿನ್ನ ಹೃದಯದಲ್ಲಿ ತಂಗಲೇ??

ಹೆಚ್ಚೇನು ಆಸೆಗಳಿಲ್ಲ; ಇದೊಂದು ಜನ್ಮ
ಜೊತೆಇದ್ದು ಬಿಡು, ನನ್ನ ಜೀವವೇ.

ಆಗಸದಲ್ಲೀಗ ಸೂರ್ಯನಿಲ್ಲ; ಚಂದ್ರನಿದ್ದಾನೆ
ಇಲ್ಲೀಗ ನೀನು ಇಲ್ಲ, ಉಳಿದಿರುವುದು
ಎದೆಗೆ ತಂಪನೆರೆವ ನಿನ್ನ ನೆನಪೊಂದೆ

ನಿನ್ನ ನೆನಪಾಗುವುದು; ಅತ್ತತ್ತು ಕರಗುವುದು
ನನ್ನದು ಇದ್ದೇ ಇದೇ ಬಿಡು, ನೀನು ಹೇಗಿದ್ದಿಯಾ?

ಬದುಕಿದ್ದೇ ಕನಸೋ ಕನಸದ್ದೇ ಬದುಕೋ
ನಿನ್ನ ಪ್ರೀತಿ ನಿಜವೋ ವಿದ್ರೋಹವೋ? ನಿಜವೆ ಹೇಳೆ!!

ಕೈ ಕೈ ಹಿಡಿದು ನೆಡೆಯ ಬೇಕೆಂದು ಕೊಂಡಿದ್ದೆವಲ್ಲ; ಬದುಕೆಲ್ಲ
ಇರಲಿ ಬಿಡು, ಬೀದಿಯಲಿ ಒಬ್ಬಂಟಿ ನಾನೊಬ್ಬನೇ ಅಲ್ಲ

ಕನಸುಗಳನಂತೂ ಕಸಿದುಕೊಂಡಿದ್ದಿಯ; ನನ್ನ ಬದುಕೇ
ಕಣ್ಣೀರನ್ನೂ ತೆಗೆದುಕೋ, ಏಕೆ ಸುಮ್ಮನಿದ್ದಿಯಾ?

ಈಗ ಯಾರ ಮನೆಯಂಗಳದ ರಂಗವಲ್ಲಿಯೇ ನೀನು?
ನನ್ನ ಹೃದಯದ ನೀನು ಬೂದಿಯೇ !!

ಎಷ್ಟೋ ಚೆನ್ನಾಗಿರುತ್ತಿತ್ತು

ಈ ಹೃದಯ
ಗಾಜಿನ ಚೂರಾಗಿದ್ದರೆ
ಎಷ್ಟೋ ಚೆನ್ನಾಗಿರುತ್ತಿತ್ತು

ಒಡೆದವಳಿಗೆ
ಸ್ವಲ್ಪವಾದರೂ
ಗಾಯವಾಗುತ್ತಿತ್ತು!,,,,,

ಹಳೇ ಸ್ಟಾಕ್ ಗಳು -5

ನನ್ನವಳ ಕೋಪಕ್ಕಿಂತ

ಜಪಾನ್ ಸುನಾಮಿಯೇ ಎಷ್ಟೋ ಮೇಲು

ನನ್ನವಳ ಕೋಪದ ಮುಂದೆ
ಆ ಸುನಾಮಿ ಏನೇನೂ ಅಲ್ಲ!!
===============

ಬೆಟ್ಟದ ಮೇಲೊಂದು
ಮನೆಯ ಮಾಡಿರುವೆ....

ಮೃಗಗಳದ್ದೇನು ಚಿಂತೆಯಿಲ್ಲ

ಮನುಷ್ಯರದ್ದೇ ಅಂಜಿಕೆ....

===============

ಗೆಲುವಿನಿಂದ ಕಲಿಯುವುದು
ಅತ್ಯಲ್ಪ..
ಸೋಲಿನಿಂದ ಕಲಿಯುವುದು
ಅತ್ಯಂತ....

Online

ದಿನಾ ಬೆಳಿಗ್ಗೆಯಿಂದ ಸಂಜೆವರೆಗೂ
Chat Box ನೋಡ್ತಾ ಇರ್ತಿನಿ
'ಅವಳು ಇವತ್ತಾದ್ರೂ
Online ಗೆ ಬರ್ತಾಳಾ?'ಅಂತ

ಅವಳು Online ಗೂ ಬರಲಿಲ್ಲ
ನನ್ನ line ಗೂ ಬರಲಿಲ್ಲ..

ಜನಗಣತಿ

ಸಮಯದ ಅಭಾವದಿಂದಾಗಿ
Blog ನ ಮೂಲಕ
ಜನಗಣತಿ ಮಾಡ್ತಾ ಇದೀವಿ

ನೀವು (ಓದುತ್ತಿರುವವರು)
ಗಂಡಸರಾಗಿದ್ರೆ "M" ಎಂದು
ಕಾಮೆಂಟ್ ಮಾಡಿ
ಹೆಂಗಸರಾಗಿದ್ರೆ "F" ಎಂದು
ಕಾಮೆಂಟ್ ಮಾಡಿ

ಎರಡೂ ಅಲ್ಲ ಅಂದ್ರೆ
ಕಾಮೆಂಟ್ ಮಾಡದೇ ಸುಮ್ಮನಿರಿ
ನಮಗೆ ಅರ್ಥವಾಗುತ್ತೆ ನಾವು ಬರೆದುಕೊಳ್ತಿವಿ.


ನಮ್ಮ ಜನಗಣತಿಯಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು...

ಮರೆತುಬಿಟ್ಟಿರುತ್ತೆನೆ

"ನಾನು ಕೆಲವೊಮ್ಮೆ
ಪರ್ಸನ್ನು ಮನೆಯಲ್ಲೇ
ಮರೆತುಬಿಟ್ಟಿರುತ್ತೆನೆ"..

ಹಾಗೆಂದು ಅವಳು
ನಂಬುವಂತೆ ಹೇಳುತ್ತೆನೆ...

ಊರ ಬಿಟ್ಟು ಹೊರಟಿದ್ದೇನೆ

ಊರ ಬಿಟ್ಟು
ಹೊರಟಿದ್ದೇನೆ
ನಿಮ್ಮನೆ ಮುಂದೆ ಹಾದು...

ಪ್ರೀತಿಯಿದ್ರೆ
ರಂಗೋಲಿ ಹಾಕು
ಇಲ್ದಿದ್ರೆ
ಬಾಗಿಲು ಹಾಕು

ಕೆಲವೊಮ್ಮೆ ಯೋಚಿಸುತ್ತೆನೆ

ದಿನವೂ ಮುಂಜಾನೆ ಉದಯಿಸಿ
ಸಂಜೆಗೆ ಮುಳುಗುವ
ಸೂರ್ಯನನ್ನು
ನಾನೇಕೆ ನೆನೆಯಲಿ??

ಮುಂಜಾನೆ ಅರಳಿ
ಸಂಜೆ ಬಾಡುವ
ಹೂ ಗಳ ಬಗ್ಗೆ
ನಾನೇಕೆ ಚಿಂತಿಸಲಿ?

ಈ ಜಗತ್ತೇ ಪ್ರಳಯದಲ್ಲಿ
ಕೊಚ್ಚಿ ಹೋದರೂ
ನನಗದರ ಗೊಡವೆಯಿಲ್ಲ

ಆದರೂ
ನಾನು
ಕೆಲವೊಮ್ಮೆ ಯೋಚಿಸುತ್ತೆನೆ
"ನೀನೇಕೆ ನನ್ನ ಅರ್ಥೈಸಲಾರೆ"? ಎಂದು

ಅವಳ ನೆನಪೊಂದನ್ನು ಬಿಟ್ಟು!!

ಮರೆವು
ಎಲ್ಲವನ್ನೂ ಮರೆಸುತ್ತೆ...

ಅವಳ
ನೆನಪೊಂದನ್ನು ಬಿಟ್ಟು!!

ದೇವದಾಸನಾಗಲಿಲ್ಲ

ನೂರಾರೂ
ಹುಡುಗಿಯರು
ನೂರಾರು
ಚೂರಿಗಳು
ಹೃದಯ ಸಾವಿರಾರು ಚೂರು

ಆದರೂ ನಾ

ದೇವದಾಸನಾಗಲಿಲ್ಲ
ಕುಡಿತಕ್ಕೂ ದಾಸನಾಗಲಿಲ್ಲ

ಕಾರಣವಿಷ್ಟೇ

ಅವರಲ್ಲಿ
ಯಾರೊಬ್ಬರೂ
ನಿಯತ್ತಿನಿಂದ
ನನ್ನ
ಪ್ರೀತಿಸಲಿಲ್ಲ!!!

ಹಣತೆ

ನನ್ನ ಮನದಂಗಳದಲ್ಲಿ
ಕತ್ತಲೆಯಾದಾಗಲೆಲ್ಲಾ
ಬೆಳಕಾಗುತ್ತದೆ
ನಿನ್ನ ನೆನಪಿನ ಒಂದೊಂದು
ಹಣತೆ

ದೇವತೆಯನ್ನು ನಂಬುತ್ತೆನೆ!

ನಾನು
ದೇವರನ್ನು ನಂಬುವುದಿಲ್ಲ

ಆದರೆ
ದೇವತೆಯನ್ನು ನಂಬುತ್ತೆನೆ!

ಉದಾಹರಣೆಗೆ:
ನನ್ನವಳನ್ನು ನಾನು ನಂಬುತ್ತೆನೆ.!!!!

ಎಲ್ಲಾ ಹುಡುಗಿಯರನ್ನೂ ನಾನು ದ್ವೇಷಿಸುತ್ತೆನೆ'

'ಜಗತ್ತಿನ
ಎಲ್ಲಾ ಹುಡುಗಿಯರನ್ನೂ ನಾನು
ದ್ವೇಷಿಸುತ್ತೆನೆ'

.
.
.
.
.

"ಈ 'ಪೋಸ್ಟ' ಓದುತ್ತಿರುವವಳನ್ನು ಹೊರತುಪಡಿಸಿ"

ತಪ್ಪು

ಹಲವು ತಪ್ಪುಗಳಿಂದ
ಹೊಸದೊಂದು
ಸೃಷ್ಠಿಯಾಗುತ್ತದೆ!!


ಉದಾ: ಕೆಲವರ ತಪ್ಪಿನಿಂದ
ಮಕ್ಕಳಾಗುತ್ತವೆ...

ಕೊಲೆಗಾರನಾಗಿ ಬಿಟ್ಟೆ...

ಅವಳು ನನ್ನ ವಂಚಿಸಿದಾಗ
ನಾ ಮನ ಕೆರಳಿ
ಕೊಲೆಗಾರನಾಗಿ ಬಿಟ್ಟೆ....



ಅವಳನ್ನೇನೂ ಮಾಡಲಿಲ್ಲ
ನನ್ನ ಎದೆಗವಿಚಿ ಕುಳಿತಿದ್ದ
ಅವಳ ಭಾವಚಿತ್ರವನ್ನು
ಹಳೆಯ ಪುಸ್ತಕದ ಹಾಳೆಗಳ ಮಧ್ಯೆ
ಸಮಾಧಿ ಮಾಡಿಬಿಟ್ಟೆ...!!

ಅವಳನ್ನು ಮರೆಯದಿರಲು ಕಾರಣ

ಮರೆತು ಹೋಗಲು
ಅವಳದು
ಕೇವಲ ನೆನಪಲ್ಲ

:ಕೆಲವು ಸಿನಿಮಾ ವಿಷಯಗಳು:

:ಕೆಲವು ಸಿನಿಮಾ ವಿಷಯಗಳು:
(ಇವು ಸಿನಿಮಾಗಳಲ್ಲಿ ಮಾತ್ರ ಸಾದ್ಯ)


*ನಾಯಕ ಎಷ್ಟೇ ಬಡವನಾಗಿದ್ದರೂ ಒಳ್ಳೆಯ ಜೀನ್ಸ್/ ಶೂ ಧರಿಸಬಲ್ಲ.
*ನಾಯಕನ ರಕ್ತ ಅಪಾಯದಲ್ಲಿರುವವರ ರಕ್ತಕ್ಕೆ ಯಾವಾಗಲೂ ಮ್ಯಾಚ್ ಆಗುತ್ತದೆ.
*ಯಾರಿಗಾದರೂ ಅಪಘಾತವಾದಲ್ಲಿ ಅವರನ್ನು ಸೀದಾ ಆಸ್ವತ್ರೆಯ ಅಪರೇಷನ್ ಕೋಣೆಗೆ ಮೊದಲು ಕರೆದುಕೊಂಡು ಹೋಗಲಾಗುತ್ತದೆ.(ಕ್ಯೂ ನಿಲ್ಲುವುದಿಲ್ಲ/ಆಸ್ವತ್ರೆಯ ಸಾಮಾನ್ಯ ನಿಯಮಗಳು ಅವರಿಗೆ ಅನ್ವಯಿಸಲ್ಲ)
*ನಾಯಕಿಗೆ ಅಪಾಯಬಂದರೆ ಕೆಲವೇ ಕ್ಷಣಗಳಲ್ಲಿ ನಾಯಕ ಅವಳಮುಂದೆ ಹಾಜರ್ (ಎಷ್ಟೇ ದೂರವಿರಲಿ)
*ನಾಯಕ ಯಾರನ್ನದರೂ ಚೇಜ್ ಮಾಡಬೇಕಾದಲ್ಲಿ ಅವನ ಸಮೀಪದಲ್ಲಿ ಬೈಕ್/ಕಾರ್ ಕೀ ಸಮೇತ ರೆಡಿ ಇರುತ್ತದೆ ಹಾಗೂ ಬೈಕ್/ಕಾರ್ ನ ಮಾಲೀಕ ಅದು ಹೋದ ನಂತರ ಓಡಿ ಬರುತ್ತಾನೆ, (ಅವನು ಗಾಡಿ ಕಳುವಾದಕ್ಕೆ ಪೋಲಿಸ್ ಗೆ ಕಂಪ್ಲೇಟ್ ಕೊಡಲ್ಲ ಬಿಡಿ)
*ನಾಯಕನಿಗೆ ಬೈಕ್ ನಿಂದ ಹಿಡಿದು ಹೆಲಿಕ್ಯಾಷ್ಟರ್ ವರೆಗೂ ಎಲ್ಲಾ ವಾಹನವನ್ನೂ ಚಲಾಯಿಸಬಲ್ಲ (ಯಾವ ಟ್ರಾಫಿಕ್ ಪೋಲೀಸ್ ಕೂಡ DL ಕೇಳಲ್ಲ)
*ನಾಯಕ ಎಷ್ಟೇ ದಡ್ಡನಾಗಿದ್ದರೂ ಸಾಹಿತ್ಯರಚಿಸಿಕೊಂಡು ಹಾಡಬಲ್ಲ ಮತ್ತು ಡ್ಯಾನ್ಸ್ ಮಾಡಬಲ್ಲ.
*ವಿಲನ್ ಗಳು ಎಷ್ಟೇ ಗುಂಡು ಹೊಡೆದರೂ ಅವು ನಾಯಕನಿಗೆ ಬೀಳಲ್ಲ.
*ನಾಯಕ ಎಲ್ಲಾ ವಿಲನ್ ಗಳನ್ನು ಕಲಾತ್ಮಕವಾಗಿ ಶೂಟ್ ಮಾಡಬಲ್ಲ. ಅವನಗುರಿ ತಪ್ಪಲ್ಲ. & ಅವನ ಗನ್ ನಲ್ಲಿ ಬುಲೆಟ್ಸ್ ಖಾಲಿಯಾಗಲ್ಲ.
*ನಾಯಕನಿಗೆ ಎಷ್ಟೇ ಗುಂಡು ಬಿದ್ದರೂ ಅವನು ಮಾತಾಡಬಲ್ಲ/ ಕೆಲವರನ್ನು ಒಂದು ಗೂಡಿಸಬಲ್ಲ (ವಿಲನ್ ಗಳಿಗೆ ಇದು ಅನ್ವಯಿಸಲ್ಲ)


- ಇನ್ನೂ ತುಂಬಾ ಇವೆ .... TVಲಿ ಯಾವುದೋ ಹಳೆ ಸಿನಿಮಾ ಬರ್ತಿದೆ ಅದನ್ನ ನೋಡ್ಕೊಂಡು ಅಮೇಲೆ ಇನ್ನು ಸ್ವಲ್ಪ ಹೇಳ್ತಿನಿ.

ಹುಡುಗರ ದೊಡ್ಡತನ

ಹುಡುಗೀರು ಮೋಸ ಮಾಡಿದ್ರೆ
ಒಂದು ಪ್ರಾಣ ಹೋಗುತ್ತೆ,,,

ಹುಡುಗರು ಮೋಸ ಮಾಡಿದ್ರೆ
ಒಂದು ಪ್ರಾಣ ಹುಟ್ಟುತ್ತೆ !!

ಇದು ಹುಡುಗರ ದೊಡ್ಡತನ !!!

ತೆನೆ ಹೊತ್ತ

ತೆನೆ ಹೊತ್ತ
ರಾಗಿ
ಗೊನೆ ಹೊತ್ತ
ಬಾಳೆ
ಬಾಗುತ್ತವೆ

ಏನನ್ನೂ
ಹೊರಲಾರದ್ದು
ಹೆರಲಾರದ್ದು
ಬೀಗುತ್ತವೆ!

ನೀವು ಈಗಲೇ ಮಾಡಬೇಕಾದ ಕೆಲ್ಸ

ನೀವು ಈಗಲೇ ಮಾಡಬೇಕಾದ
ಕೆಲ್ಸ ಒಂದಿದೆ
ಅದೇನು ಗೊತ್ತಾ?

ನಿಮ್ಮ ಹುಡುಗಿ
ನಿಮ್ಮ ಮೊಬೈಲ್ ನಂಬರ್ ನ್ನು
ಏನೆಂದು ಸೇವ್ ಮಾಡಿದಾಳೆ ಅಂತ ನೋಡಿ!!

ಯಾಕೆ ಅಂತಿರಾ?

ನನ್ನ ಹುಡುಗಿ ನನ್ನ ಹೆಸರನ್ನು
ಏನಂಥ ಸೇವ್ ಮಾಡಿದ್ದಾಳೆ ಗೊತ್ತ??
"Bakra NO- 9" ಅಂತ!!


ಈಗ ಹೇಳಿ ನಿಮ್ಮ ಹುಡುಗಿ Cell ನಲ್ಲಿ ನಿಮ್ಮ ಹೆಸರೇನು?

ಮರೀಚಿಕೆ,

ಕನಸ ಕಾಣಬೇಡವೋ
ಹುಡುಗ, ಮರೀಚಿಕೆಯಂತೆ
ಅದು ಕೈಗೆಟುಕಲಾರದು
ಅಂದಿದ್ದೆ ನೀನು.........


ನಿನಗ್ಹೇಗೆ ಗೊತ್ತಿತ್ತೆ
ಹುಡುಗಿ, ನನ್ನ ಕನಸ
ತುಂಬಾ ತುಂಬಿದ್ದು
ನೀನು ಮತ್ತು ನಿನ್ನ
ಪ್ರೀತಿ ಅಂತ...

=====================
ಮೊದಲ ಮಳೆಗೆ ಅರಳಿದೆ
ಮಣ್ಣಿನ ವಾಸನೆ,
ನನ್ನವಳ ಮೊದಲ ಮುತ್ತಿನ ಕಂಪು
ಆ ಕಂಪಿನಲ್ಲಿದೆ
ಪ್ರೀತಿಯ ತಂಪು,,,,,

ಹೊರಗೆ ಒಂದೇ ಸಮನೆ ಜಡಿಮಳೆ
ಒಳಗೆ ನನ್ನವಳ ನೆನಪಿನ ಅಲೆ

ಕೆಲಸದವೇಳೆ ಕಾಡುವ ನೆನಪು
ಪುಷ್ಪದೊಳಗಿನ ಪರಿಮಳದಂತೆ

ಮನನೊಂದು
ದೂರವಾದ ಮುಗ್ದ ಪ್ರೇಮಿಗಳ ಅಳು
ಈ ಮಳೆ ಹನಿಗಳು.......


------------------------ ಒಂಟಿಪ್ರೇಮಿ

===============

ಹಳೇ ಸ್ಟಾಕ್ ಗಳು -4

ಮುದ್ದೆ ಬೆಲ್ಲಕೆ
ಮುತ್ತಿಡುತ್ತದಲ್ಲಾ ಇರುವೆ;

ಮುದ್ದಾದ ನಿನ್ನ ಗಲ್ಲಕೆ
ಮುತ್ತಿಡಲು ನಾ ಇರುವೆ..
=====================

ಹುಡುಗ : ನಿನಗೆ ಏನು ಬೇಕು ಕೇಳು...
ಹುಡುಗಿ : ಏನು ಬೇಕಾದ್ರೂ ಕೊಡ್ತಿಯಾ?
ಹುಡುಗ : ಕೊಡ್ತಿನಿ ಹೇಳು...
ಹುಡುಗಿ : ನಂಗೆ ಚಂದ್ರನ್ನ ತಂದು ಕೊಡು..
ಹುಡುಗ : ಚಂದ್ರನ ತಂದು ಕೊಟ್ರೆ ಭೂಮಿಸುತ್ತ ಏನ್ ನಿಮ್ಮಪ್ಪ ಸುತ್ತಾನಾ?
===================

"ನೆರೆ-ಹೊರೆಯವರನ್ನು ಪ್ರೀತಿಸು - ಬೈಬಲ್"
ನಮ್ಮ ಪಕ್ಕದ ಮನೆ ಹುಡುಗಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ - ಬಸವರಾಜ್
==================

ಪ್ರೀತಿ ಎಂದಿಗೂ ಶಾಶ್ವತ

ಜೊತೆಗಾರರು ಮಾತ್ರ ಬದಲಾಗುತ್ತಾರೆ
=================
ಸುನಾಮಿಯಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಮಗು
ಸಮುದ್ರದ ಮುಂದೆ ಕುಳಿತಿತ್ತು, ಅಲೆಗಳು ಬಂದು ಮಗುವಿನ ಪಾದ ಸ್ಪರ್ಶಿಸುತ್ತಿದ್ದವು. ಮಗು ಮುಗ್ದವಾಗಿ
"ನೀವು ಸಾವಿರಸಾರಿ ಬಂದು ನನ್ನ ಪಾದ ಮುಟ್ಟಿದರೂ ನಾನು ನಿನ್ನ ಕ್ಷಮಿಸಲ್ಲ" ಹೇಳಿತು

================

ಸಂಬಂಧಗಳು ಬಟ್ಟೆಯಹಾಗೆ
ಒಮ್ಮೆ ಹರಿದರೆ ಮುಗೀತು....

ಒಂದುವೇಳೆ ಕೂಡಿಸಿ ಒಲಿದರೂ ಅದು 'ತ್ಯಾಪೆ' ಯಾಗೇ ಇರುತ್ತೆ

===================

ಹಳೇ ಸ್ಟಾಕ್ ಗಳು -3

ಜೀವನದ ಅತಿ ದೊಡ್ಡ ದುರಂತ 'ಪ್ರೀತಿಸುವುದು' ಮತ್ತು 'ಪ್ರೀತಿಸಲ್ಪಡುವುದು'.

====================

ನಾನು ಅವಳನ್ನು ಭಯದಿಂದ ತಬ್ಬಿದಾಗ
ಅವಳಿಗೆ ಧೈರ್ಯ ಹೆಚ್ಚಾಯಿತಂತೆ....
===================
ನನ್ನಾಕೆ ಕೇಳಿದಳು
ನಾ ಕಟ್ಟಿದ ಪಂದ್ಯದಲ್ಲಿ ನೀ ಸೋಲುವೆಯಾ? ಎಂದು

ನಾ ಹೇಳಿದೆ
ನಿನಗೇ ನಾ ಸಂಪೂರ್ಣ ಸೋತಿರುವಾಗ ಇನ್ನು ಪಂದ್ಯದಲ್ಲಿ ಗೆದ್ದರೇನು ಸೋತರೇನು
======================
ಪ್ರೀತಿಲಿ ಬಿದ್ದಾಗ
ಎಲ್ಲವನ್ನೂ ಮರೀತಾರೆ

ಉದಾ: ನಾನು Buzz ಮಾಡೋದನ್ನೇ ಮರೆತಿದ್ದೆ

=====================
ಅವಳಿಗೆ ಮೋಸ ಮಾಡುವ ಅವಸರದಲಿ ನಾ ಆತ್ಮಹತ್ಯೆ ಮಾಡಿಕೊಂಡೆ....
====================
ಅವಳು ನನ್ನ ಸನಿಹವಿದ್ದಾಗಲೆಲ್ಲಾ ನನಗೆ ಚಳಿಗಾಲ......

====================
 ನಿನ್ನನ್ನು ನೋಡಿದ ಕೋಡಲೇ
ನನ್ನನ್ನೇ ನಾ ಮರೆತೆ

ನಿನ್ನ ತಂಗಿಯ ನೋಡಿದ ಕೂಡಲೇ
ನಿನ್ನನ್ನೇ ನಾ ಮರೆತೆ!!!!

==================
ಈಗಿನ ಕಾಲದ ಪ್ರೀತಿಯ ದುರಂತ ಏನು ಗೊತ್ತಾ?

ಹುಡುಗ ಹುಡುಗಿ ಒಬ್ಬರನೊಬ್ಬರು
ಅರ್ಥಮಾಡಿಕೊಳ್ಳದೇ ಪ್ರೀತಿಸುತ್ತಾರೆ!

ಅರ್ಥಮಾಡಿಕೊಂಡ ಮೇಲೆ
ದೂರವಾಗುತ್ತಾರೆ!!
=================
ಅವಳ ಪ್ರೀತಿ
ಹೃದಯದಿ ಚುಚ್ಚುತ್ತಿರುವ
ಎರಡಿಂಚಿನ ಚೂರಿಯಂತೆ

ಕಿತ್ತರೆ ಸತ್ತೇಹೋಗುವೆ
ಬಿಟ್ಟರೆ ಪ್ರತೀ ಕ್ಷಣವೂ
ಅಳುಕುತ ನೋಯಿಸುವುದು
ಏನು ಮಾಡಲಿ???
================

ನನಗೆ ಅವಳು ಮೋಸ ಮಾಡಲಿಲ್ಲ,,,

ನಾನೇ ಮೋಸ ಹೋದೆ!!

ಇಂದು ನನ್ನ ಕಣ್ಣುಗಳಲ್ಲಿ ನೀನು

ಇಂದು ನನ್ನ ಕಣ್ಣುಗಳಲ್ಲಿ
ಬರೆಯಲಾಗದ
ಕವಿತೆಗಳನ್ನು ಓದಬಹುದು.

ನನ್ನ ಕವಿತೆಗಳಲ್ಲಿ
ನಿನ್ನ ಪ್ರೀತಿ ಸತ್ತು ಬಿದ್ದಿರುವುದನ್ನು
ನೋಡಬಹುದು

ನನ್ನ ಹೃದಯದಲ್ಲಿ
ಪ್ರೀತಿಕೊಂದ ಕೊಲೆಗಾರರನ್ನು
ಬೇಟಿಯಾಗಬಹುದು..

ಇಂದು ನನ್ನ ಕಣ್ಣುಗಳಲ್ಲಿ ನೀನು.
ಬರೆಯಲಾಗದ ಕವಿತೆಗಳನ್ನಷ್ಟೇ
ಓದಬಹುದು...

ಕೆಲವು ಹಳೇ ಸ್ಟಾಕ್ ಗಳು -2

ನನಗೆ ಅವಳು ಅವಶ್ಯಕತೆ

ಅವಳಿಗೆ ನಾನು ಅನಿವಾರ್ಯ..

====================

ಹುಡುಗಿರನ್ನ ಅರ್ಥಮಾಡಿಕೊಳ್ಳೊದಂದ್ರೆ
1 ಜಿಬಿ ಫೈಲ್ ಅನ್ನು 2 ಕೆಬಿಪಿಎಸ್ ಸ್ಪೀಡ್ ನಲ್ಲಿ ಡೌನ್ ಲೋಡ್ ಮಾಡಿದ ಹಾಗೆ 95% ಕಂಪ್ಲೀಟ್ ಆದಾಗ ಎರರ್ ಅಂತ ಬರುತ್ತೆ

====================

ಅವಳ ಬೆಣ್ಣೆಯಂತ ಮಾತಿಗೆ ನಾ
ತುಪ್ಪದಂತೆ ಕರಗಿ ಹೋದೆ !!!!!


 

ಕೆಲವು ಹಳೇ ಸ್ಟಾಕ್ ಗಳು.

ಅವಳು ನೀಡಿದ ಮುತ್ತಿನ
ಮತ್ತಿನಿಂದ ಎಚ್ಚರವಾಗುವ ಮುನ್ನವೇ
ಅವಳು ಎದ್ದು ಹೋಗಿದ್ದಳು..

=======================

Girls wants lot of things
From guy


Guy want one thing
from a lot of girls......


======================

ಅವಳಿಲ್ಲದೆ ನಾನು ಬದುಕೋಕಾಗಲ್ಲ

ಆದ್ರೂ

ಅವಳ ಜೊತೆ ಜಗಳವಾಡೋದು ತಪ್ಪಲ್ಲ !!

=====================
ಚುಚ್ಚ ಬೇಡವೆ
ಗೆಳತಿ
ನೆನಪಿನ ಮುಳ್ಳಿಂದ
ಈ ವೇಧನೆ ನನ್ನಿಂದ
ತಡೆಯಲಾಗುವುದಿಲ್ಲ ......

ಕನ್ನಡಕ್ಕಾಗಿ ಕೈ ಎತ್ತಿ

ಕನ್ನಡಕ್ಕಾಗಿ ಕೈ ಎತ್ತಿ


ತುಂಬಾ ಹೊತ್ತು ಎತ್ತಿ ಹಿಡಿದಿದ್ರೆ
ನೋವಾಗುತ್ತೆ ಇಳಿಸಿ.....

-- ಒಂಟಿಪ್ರೇಮಿ....
 

ಶುಭ ಹಾರೈಕೆಗಳು.

ನನ್ನ ಕವಿತೆಗಳ ಸ್ಪೂರ್ತಿಯಾದ
ನನ್ನವಳು ನನ್ನಿಂದ ದೂರವಾಗಿದ್ದಾಳೆ
ಅಲ್ಲಲ್ಲ....
ನನ್ನಿಂದ ದೂರ ಹೊರಟಿದ್ದಾಳೆ
ಅವಳ ಮುಂದಿನ ಬದುಕಿಗೆ ನನ್ನಿಂದ ಶುಭ ಹಾರೈಕೆಗಳು.

===================================

ಬೇಸರವಾ
ಗಿದ್ದು
ನೀನು ಬಿಟ್ಟು ಹೋಗಿದ್ದಕ್ಕಲ್ಲ

ಕಾರಣ ಹೇಳದೆ ಹೋಗಿದ್ದಕ್ಕೆ....

==================================

ಅವಳ
ಪೋಟೋವನ್ನೇನೋ Backup ಮಾಡಿದ್ದೆ.

ಅವಳ ಪ್ರೀತಿಯನ್ನ ಎತ್ತಿಡಲು ಮರೆತ್ತಿದ್ದೆ