Thursday, June 14, 2012

ಹಳೇ ಸ್ಟಾಕ್ ಗಳು -9

ಅಂದು
ನಿನ್ನ ಕಣ್ಣಂಚಿನಲಿ
ಪ್ರೀತಿ ಹರಿದು
ಬಂತು
ಇಂದು
ನೆನಪುಗಳನ್ನು
ಎಣಿಸುತ್ತಿದ್ದೆನೆ
ಏಕಾಂಗಿಯಾಗಿ
ಕುಳಿತು.

--------------

ಹೇಗಿದ್ದಿಯಾ? ಎಂದು
ಇಂದು ಕೇಳುತ್ತಿದ್ದಿಯಲ್ಲ
ನೆನಪಿಲ್ಲವೇ?
ಪ್ರೀತಿಯ
ಶವದ ಪೆಟ್ಟಿಗೆಗೆ
ನೀನೇ
ಕೊನೆಯ ಮೊಳೆ ಹೊಡೆದದ್ದು

-----------
ಸೊಗಸಾದ ಸವಿಸಂಜೆಯಲಿ
ಕೆಂಪಾದ ಸೂರ್ಯ ತಂಪಾಗುವ ವೇಳೆಯಲಿ
ನನ್ನವಳು-ನಾನು ಕಡಲ ತೀರದಲಿ

ಕೇಳಿದಳು ನನ್ನಾಕೆ; ಎಷ್ಟು ಪ್ರೀತಿಸುವೆ ನನ್ನನ್ನು?
ಸಾಗರದಾಳ, ಭೂಮಿಯಗಲ, ಆಕಾಶದೆತ್ತರ.....
ಎಂದ್ಹೇಳಲಿಲ್ಲ ನಾನು

ಅನ್ನದ ಅಕ್ಕಿಯಷ್ಟೆಂದೆ,ರಾಗಿಯ ಕಾಳಷ್ಟೆಂದೆ
ಏಕೆಂದರೆ ಅದಿಲ್ಲದೆ ಬದುಕಿಲ್ಲ
ಬದುಕಲು ಸಾದ್ಯವಿಲ್ಲ!

-------------
ಮುಗ್ಗರಿಸಿ ಬಿದ್ದಾಗಲೆಲ್ಲಾ
ಎದ್ದುಮತ್ತೆ
ನೆಡೆಯುವ ಛಲ
ಮಗುವಿಗೆ
ಬೀಳುವುದೆಂದರೆ
ಎಲ್ಲಿಲ್ಲದ ಅವಮಾನ
ನನಗೆ

_______ _______

ಸೇರದಾಗಿದೆ ಊಟ
ದೂರ ಓಡಿದೆ ನಿದ್ದೆ
ನೀ ಬರುವ ಮೊದಲು
ನಾ ಚೆನ್ನಗಿಯೇ ಇದ್ದೆ
ತಪ್ಪೆಲ್ಲವೂ ನಿನ್ನದೆ ಗೆಳತಿ
ನೀನೇಕೆ ನನ್ನ ಮನಸ್ಸನ್ನು ಕದ್ದೆ?


_______ _______

ಭೂಮಿ-ಆಕಾಶವನ್ನು
ನನ್ನ ಹೆಸರಿಗೆ ಬರೆದರೂ
ಬೇಡ ನನಗೆ
ಹೃದಯ ಬಯಸುವ
ನೀನೊಬ್ಬಳೆ ಸಿಕ್ಕರೆ
ಸಾಕೆನಗೆ

...............................


ಸೂರ್ಯನಿರುವನು
ಹಗಲಿಗೆ
ಚಂದ್ರನಿರುವನು
ಇರುಳಿಗೆ
ಹಗಲಿರುಳು
ನೀನು
ನನ್ನ ಬಾಳಿಗೆ

No comments: