Friday, June 15, 2012

ಹಾಸ್ಯ-ಲಾಸ್ಯ

ನೆಟ್ ನಿಂದ ಹೆಕ್ಕಿದ್ದು

1. ಸ್ತ್ರೀ, ಒಂದು ಮಗುವಿಗೆ ಜನ್ಮವಿತ್ತರೆ ಕಂಗ್ರಾಜ್ಯುಲೇಶನ್ಸ್ ಸಿಗುತ್ತೆ.
ಮದುವೆಯಾದರೆ ಉಡುಗೊರೆಗಳು ಸಿಗುತ್ತವೆ.
ಗಂಡ ತೀರಿಹೋದ್ರೆ ಇನ್ಸ್ಯೂರೆನ್ಸ್ ಸಿಗುತ್ತೆ.
ಆದ್ರೂ ಈ ಹೆಂಗಸ್ರೂ ನಮಗೆ ಅದಿಲ್ಲ, ಇದಿಲ್ಲ ಅಂತ ಕೊರಗ್ತಿರ್ತಾರೆ.
2. ಹುಡುಗಃ ನಾವಿಬ್ರೂ ಓಡಿಹೋಗೋಣ್ವ..?
ಹುಡುಗಿಃ ನಂಗೆ ಒಬ್ಬಳೇ ಬರೋಕೆ ಭಯ ಆಗುತ್ತೆ.
ಹುಡುಗಃ ಹಾಗಾದ್ರೆ ಜೊತೆಗೆ ನಿನ್ನ ತಂಗೀನೂ ಕರ್ಕೋಂಡು ಬಾ.
3. ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲೂ ನಗುವವನಿಗೆ ' ಮದುವೆ ಗಂಡು " ಎನ್ನಬಹುದು.
4. ಹೆಣ್ಣು ಗಂಡಿಗಿರುವ ವ್ಯತ್ಯಾಸ;
ಹೆಣ್ಣು ಗಂಡ ಸಿಗೋವರೆಗೂ ಭವಿಷ್ಯದ ಬಗ್ಗೆ ಯೋಚಿಸುತ್ತಾಳೆ.
ಗಂಡು ಹೆಂಡ್ತಿ ಸಿಕ್ಕಿದ ಮೇಲೆ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ.
5. ಮುದಿಸೊಳ್ಳೆಃ ಮಗೂ... ನಮ್ಮ ಕಾಲದಲ್ಲಿ ರಕ್ತ ಕುಡಿಬೇಕಾದ್ರೆ ಎಷ್ಟು ಕಷ್ಟ ಆಗ್ತಿತ್ತು ಗೊತ್ತಾ.
ಮೊಮ್ಮಗ ಸೊಳ್ಳೆಃ ಯಾಕೆ.. ತಾತ..?
ಮುದಿಸೊಳ್ಳೆಃ ಆವಾಗ ಹುಡುಗೀರು ಮೈ ತುಂಬಾ ಬಟ್ಟೆ ಹಾಕ್ಕೋತಾ ಇದ್ರು.
6. ಗುಂಡ ಹೋಟೆಲ್ ಮ್ಯಾನೇಜರ್ ಗೆ; ನನ್ನ ಹೆಂಡ್ತಿ ಕಿಟಕಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಬೇಗ ಬಾ..
ಹೋಟೇಲ್ ಮ್ಯಾನೇಜರ್ ; ಸಾರ್ ಅದಕ್ಕೆ ನಾನೇನ್ ಮಾಡ್ಲಿ..?
ಗುಂಡ. ; ಅಯ್ಯೋ ಕಿಟಕಿ Open ಆಗ್ತಿಲ್ಲ, ಸ್ವಲ್ಪ ಹೆಲ್ಪ್ ಮಾಡು ಬಾರಯ್ಯ.
7. ಅಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ತನ್ನ ಮನ ಶಾಂತಿಗಾಗಿ
ಇಂದು ಸಿದ್ದಾರ್ಥನು ಮನೆ ಬಿಟ್ಟು ಹೋದನು ಪಕ್ಕದ ಮನೆ ಶಾಂತಿಗಾಗಿ.
8. ಬಾಸ್ ; ಯಾಕೋ ನಾಣಿ ಆಫೀಸಿಗೆ ಲೇಟು.
ನಾಣಿ ; ಹೆಂಡ್ತಿಗೆ ಅಡುಗೆ ಮಾಡಿಟ್ಟು ಬರೋದಕ್ಕೆ ಸ್ವಲ್ಪ ಲೇಟಾಯಿತು ಸಾರ್.
ಬಾಸ್ ; ಈಡಿಯೇಟ್ ಸುಳ್ಳು ಹೇಳಬೇಡ, ನಾನು ಅಡುಗೆ ಮಾಡಿ, ಜೊತೆಗೆ ಪಾತ್ರೆ ತೊಳೆದು ಕರೆಕ್ಟ್ ಟೈಮಿಗೆ ಆಫೀಸಿಗೆ ಬರೋಲ್ವ..!!
9. ನನ್ನಲ್ಲೊಂದು ಕ್ಯಾಮೆರಾ ಇದ್ದಿದ್ರೆ ನಿನ್ನ ಪ್ರತಿಯೊಂದು ಚಲನವಲನಗಳನ್ನು ಕ್ಲಿಕ್ಕಿಸುತ್ತಿದ್ದೆ.
ಆ ಮೋಹಕ ನಗೆ.. ಮುದ್ದು ಮೊಗ ಎಲ್ಲವನ್ನೂ ಕ್ಲಿಕ್ಕಿಸಿ ನನ್ನ ಕಿಚನ್ ನಲ್ಲಿ ಅಂಟಿಸಿ.......
!
!
!
!
ಕಿಚನ್ ನಲ್ಲಿರೋ ಜಿರಲೆ ಮತ್ತು ಇಲಿಗಳನ್ನು ಭಯಪಡಿಸುತ್ತಿದ್ದೆ.
10. ಬಿಕ್ಷುಕಃ ಅಮ್ಮಾ.. ಒಂದು ರೂಪಾಯಿ ಬಿಕ್ಷೆ ಹಾಕಮ್ಮ.
ಆಕೆಃ ಲೋ ಹೀಗೆ ರೋಡ್ ನಲ್ಲಿ ನಿಂತು ಬಿಕ್ಷ ಕೇಳೋಕೆ ನಾಚ್ಗೆ ಆಗೋಲ್ವ..?
ಬಿಕ್ಷುಕ್ಷಃ ಹೋಗಮ್ಮ.. ನೀನು ಕೊಡೋ ಒಂದು ರೂಪಾಯಿಗೆ ನಾನು ಆಫೀಸ್ ನಲ್ಲಿ ಕೂತ್ಕೋಬೇಕಾ..?

No comments: