Friday, June 15, 2012

ಕೋರ್ಟ್ ನಲ್ಲಿ ಆವಾಂತರ

ನೆಟ್ ನಿಂದ ಹೆಕ್ಕಿದ್ದು

ಕೋರ್ಟ್ ನಲ್ಲಿ ವಾದ-ವಿವಾದ ನಡೆಯುವಾಗಲೂ ಅಲ್ಲೂ ಹಾಸ್ಯ ಭರಿತ ಸನ್ನೀವೇಶ ಗಳಿರುತ್ತೆ. ಕೆಲವೊಮ್ಮೆ ಜಡ್ಜ್ ಕೂಡಾ ಮೂರ್ಖತನದ ಪ್ರಶ್ನೆ ಕೇಳಬಹುದು ಅಥವಾ ಸಾಕ್ಷಿಗಳು ಸಹ ಮುಠ್ಠಾಳತನದ ಉತ್ತರ ನೀಡ ಬಹುದು.
ಒಂದಿಷ್ಟು ಈ ತರಹದ ಸನ್ನೀವೇಶಗಳು ಇಲ್ಲಿವೆ.ಓದಿ ನಕ್ಕು ಬಿಡಿ. Laughing out loud
ಜಡ್ಜ್ : ಅವಳಿಗೆ ಮೂರು ಮಕ್ಕಳು ಅಲ್ವಾ?
ಸಾಕ್ಷಿಃ ಹೌದು
ಜಡ್ಜ್ : ಎಷ್ಟು ಮಂದಿ ಗಂಡು ಮಕ್ಕಳು?
ಸಾಕ್ಷಿ: ಒಂದೂ ಇಲ್ಲ.
ಜಡ್ಜ್ : ಸರಿ. ಯಾವುದಾದರೂ ಹೆಣ್ಣು ಮಕ್ಕಳು ಇದ್ದರಾ?
ಸಾಕ್ಷಿಃ ಅರೆರೆ!! ಯುವರ್ ಆನರ್ ನನಗೆ ಬೇರೆ ಜಡ್ಜ್ ಬೇಕು.
---------------------------------------
ಜಡ್ಜ್ : ಕೊಲೆ ಮಾಡಿದವರು ಹೇಗೆ ಕಾಣ್ತಾ ಇದ್ದರು ಅಂತಾ ವಿವರಿಸ್ತೀರಾ?
ಸಾಕ್ಷಿಃ ಒಂದೈದು ಫೀಟ್ ಇರಬಹುದು ದಪ್ಪವಾದ ಮೀಸೆ ಇತ್ತು.
ಜಡ್ಜ್ : ಗಂಡಸಾ ಅಥವಾ ಹೆಂಗಸಾ
ಸಾಕ್ಷಿಃ ನಿಮಗೇನನಿಸುತ್ತೆ? ಮೀಸೆ ಇದ್ದವರು ಯಾರಿರಬಹುದು?!!!
----------------------------------------
ಜಡ್ಜ್ : ನೀವು ಎಷ್ಟು ಗಂಟೆಗೆ ಡೆಡ್ ಬಾಡಿನಾ ಪರೀಕ್ಷೆ ಮಾಡಿದ್ರಿ ಅಂತಾ ನೆನಪು ಮಾಡ್ಕೋತೀರಾ?
ಡಾಕ್ಟರ್: ನಾನು ಸುಮಾರು 8:30 ಕ್ಕೆ ಪೋಸ್ಟ್ ಮಾರ್ಟಮ್ ಮಾಡಿದೆ.
ಜಡ್ಜ್ : ಮಿಸ್ಟರ್ ಮಂಡಕ್ಕಿ ಯವರು ಆಗ ಸತ್ತಿದ್ರಾ?
ಡಾಕ್ಟರ್ : ಇಲ್ಲ ಅವರು ಪಕ್ಕದಲ್ಲಿ ಕುರ್ಚಿ ಮೇಲೆ ಕೂತು ನಾನ್ಯಾಕೆ ಅವರನ್ನು ಪೋಸ್ಟ್ ಮಾರ್ಟಮ್ ಮಾಡ್ತಾ ಇದೀನಿ ಅಂತಾ ವಿಚಾರ ಮಾಡ್ತಾ ಇದ್ರು!!
-----------------------------------------
ಜಡ್ಜ್ : ಡಾಕ್ಟರ್ ಪೋಸ್ಟ್ ಮಾರ್ಟಮ್ ಮಾಡೋಕ್ಕಿಂತ ಮುಂಚೆ ಹೃದಯ ಬಡ್ಕೋತಾ ಇದೆಯಂತಾ ಮಾಡಿದ್ರಾ?
ಡಾಕ್ಟರ್ ಇಲ್ಲ
ಜಡ್ಜ್ : ಹೋಗಲಿ, ಬಿಪಿ (ರಕ್ತದೊತ್ತಡ) ಚೆಕ್ ಮಾಡಿದ್ರಾ?
ಡಾಕ್ಟರ್ ಇಲ್ಲ
ಜಡ್ಜ್ : ಉಸಿರಾಟ ಇದೆಯಾ ಅಂತಾ ನೋಡಿದ್ರಾ?
ಡಾಕ್ಟರ್ ಇಲ್ಲ
ಜಡ್ಜ್ : ಹಾಗಿದ್ರೆ ರೋಗಿ ನೀವು ಪೋಸ್ಟ್ ಮಾರ್ಟಮ್ ಮಾಡಬೇಕಾದ್ರೆ ಜೀವಂತ ಇರಬಹುದಲ್ವಾ?
ಡಾಕ್ಟರ್ ಇಲ್ಲ
ಜಡ್ಜ್ : ಅದು ಹೇಗೆ ಹೇಳ್ತೀರಿ ಡಾಕ್ಟರ್?
ಡಾಕ್ಟರ್ ಯಾಕೆಂದ್ರೆ ಆ ರೋಗಿಯಲ್ಲಿ ಮೆದುಳು ಇರಲಿಲ್ಲ. ಅದು ಹೊರಗೆ ಬಂದಿತ್ತು
ಜಡ್ಜ್ : ಓಹೋ, ಹಾಗಾ? ಆದ್ರೂ ರೋಗಿ ಜೀವಂತ ಆಗಿರಬಹುದು. ಅಲ್ವಾ?
ಡಾಕ್ಟರ್ ಹೌದೌದು, ಅವನು ಬದುಕಿರ ಬಹುದು. ಈ ಕೋರ್ಟ್ ನ ಜಡ್ಜ್ ಆಗಿರಬಹುದು!!
---------------------------------------
ಜಡ್ಜ್ : ನಾನು ಕೇಳೋ ಪ್ರಶ್ನೆಗೆಲ್ಲಾ ಬರೀ ಉತ್ತರ ಹೇಳಬೇಕು. ಬೇರೇನು ಮಾತನಾಡಬಾರದು ಆಯ್ತಾ?
(ಕಳ್ಳ ಆಯ್ತು ಎಂಬಂತೆ ತಲೆ ಆಡಿಸಿದ)
ಜಡ್ಜ್ : ನೀನು ಎಲ್ಲಿಯವರೆಗೆ ಕಲಿತಿದ್ದೀಯಾ?
ಕಳ್ಳಃ ಉತ್ತರ
(ಜಡ್ಜ್ ಪ್ರಜ್ಞೆ ತಪ್ಪಿ ಬೀಳುವದು ಬಾಕಿ ಇತ್ತು.!!!)

No comments: