ನೆಟ್ ನಿಂದ ಹೆಕ್ಕಿದ್ದು
ಹೀಗೊಮ್ಮೆ ಯೋಚಿಸಿ ಮನಸ್ಸಿಗೂ ಬಾಯಿಗೂ ಮಧ್ಯ ಇರೋ ಫಿಲ್ಟರೇ ಕಿತ್ತು ಹೋದಾಗ ಏನಾಗ ಬಹುದು? ನಿಮಗೆ ಯಾರಾದ್ರು ತರಲೆ ಪ್ರಶ್ನೆ ಕೇಳಿದ್ರೆ ನೀವು ಏನಂತಾ ಉತ್ತರ ಕೊಡಬಹುದು? ಇದು 1 ಈಮೇಲ್ ಪಾರ್‌ವಾರ್ಡ್ ಮತ್ತು 1 ಎಸ್.ಎಂ.ಎಸ್ ಎರಡರ ಆಧಾರದ ಮೇಲೆ ಬರೆದಿದ್ದು. ಮುಂದೆ ಓದಿ ನೋಡಿ..ಹೇಗಿದೆ ಅಂತಾ ಹೇಳಿ.
---------------------------------------------------------------------------------------
ನೀವು ಪರೀಕ್ಷೆಲಿ ಉತ್ತರ ಬರೀತಾ ಇರ್ತೀರಾ. ಟೀಚರ್ ಹತ್ತಿರ ಬಂದಾಗ ಕೇಳ್ತಾರೆ.
ಅವರು ಕೇಳ್ತಾರೆ: ಏನಪ್ಪಾ ಚೆನ್ನಾಗಿ ಓದಿದ್ದೀಯಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ನಿಮ್ಮ ಸಿಲಾಬಸ್ಸು, ನಿಮ್ಮ ಇಂಟರ್ನಲ್ಸು, ನಿಮ ಎಕ್ಸಾಮು, ಈ ಬಿಕನಾಸಿ ಮಾರ್ಕ್ಸು, ನಮ್ ಟೈಮು, ಆ ರಾಸ್ಕಲ್ ಫೆಕಲ್ಟಿ ಸದ್ದು ಎಲ್ಲಾ ಮಿಕ್ಸ್ ಆಗಿ ನನ್ ಲೈಫಲ್ಲೇ ರಿಪೇರಿ ಮಾಡೋಕ್ಕಾಗದೇ ಇರೋ ಗಾಯ ಮಾಡಿದೆ....ನನಗೆ ಗೊತ್ತಾಗೊಯ್ತು ಕಣ್ರಿ ನಾನು ಪಾಸ್ ಆಗಲ್ಲಾ ಅಂತಾ. ಬಿಟ್ಕೊಟ್ಟು ಬಿಟ್ಟೆ ಕಣ್ರಿ.
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: (ಹಲ್ಕಿರಿಯುತ್ತಾ) ಪರವಾಗಿಲ್ಲ ಸಾರ್.

ನೀವು ಬಸ್ಸಲ್ಲಿ ಹೋಗ್ತಾ ಇರ್ತೀರಾ. ಒಬ್ಬ ಡುಮ್ಮಿ ತಮ್ಮ ಹೈ ಹೀಲ್ಡ್ ಹಾಕಿರೋ ಕಾಲಿಂದ ನಿಮ್ಮ ಹವಾಯಿ ಚಪ್ಪಲಿ ಹಾಕಿರೋ ನಿಮ್ಮ ಕಾಲು ಮೆಟ್ಟೇ ಬಿಡ್ತಾಳೆ.
ಅವರು ಕೇಳ್ತಾರೆ: ಪಾಪ ನಿಮಗೆ ಸ್ವಲ್ಪ ನೋವಾಯ್ತೋ ಏನೊ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಇಲ್ಲಮ್ಮಾ ಪುಣ್ಯಾತಗಿತ್ತಿ ದೊಡ್ಡ ಉಪಕಾರ ಆಯ್ತು. ಈ ನೋವೂ ಒಂತರಾ ಹಿತವಾಗಿದೆ ಕಣ್ರಿ. ಸಾಕಾಗಿಲ್ಲ ಅಂದ್ರೆ ಮತ್ತೊಮ್ಮೆ ಮೆಟ್ಟಿ ನೋಡ್ರಿ.
\ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: (ಮುಖ ಕಿವಿಚುತ್ತಾ) ಹಾಂ ಸ್ವಲ್ಪ ಆಯ್ತು. ಇರಲಿ ಬಿಡಿ. ಪರವಾಗಿಲ್ಲ. ಏನ್ಮಾಡೊಕ್ಕಾಗುತ್ತೆ.

ನೀವು ಫಿಲಂ ಥಿಯೇಟರ್ ಬಳಿ ಫಿಲಂ ಟಿಕೆಟ್ ಹಿಡ್ಕೊಂಡು ಓಡಾಡ್ತಾ ಇರ್ತೀರಾ. ಆಗ ನಿಮ್ಮ ಫ್ರೆಂಡ್ ಒಬ್ಬರು ಸಿಗ್ತಾರೆ.
ಅವರು ಕೇಳ್ತಾರೆ: ಏನಪ್ಪಾ ಇಲ್ಲೇನ್ಮಾಡ್ತಾ ಇದ್ದೀಯಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಓಹೋ ಹಾಗಾದ್ರೆ ನಿಮ್ಗೆ ಗೊತ್ತಿಲ್ವಾ.... ನಾನು ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರೋಕೆ ಶುರು ಹಚ್ಕೊಂಡಿದ್ದೀನಿ. ಬೇರೆ ಕೆಲ್ಸಾ ಇಲ್ಲಾ ನೋಡಿ.
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: (ಹಲ್ಕಿರಿದು) ಹ್ಹೆ ಹ್ಹೆ ಏನಿಲ್ಲಾ ಯಾರೋ ಫಿಲಂ ಚೆನ್ನಾಗಿದೆ ಅಂದ್ರು. ನೋಡೋಣ ಅಂತಾ ಬಂದೆ.

ನೀವು ಯಾವುದೋ ಹೊಟೇಲ್ ವೇಟರ್ ಆಗಿದ್ದೀರಾ. ಯಾರೋ ಗಿರಾಕಿ ಬರ್ತಾರೆ.
ಅವರು ಕೇಳ್ತಾರೆ: ಸ್ವಾಮಿ ನಿಮ್ಮ ಹೋಟೆಲ್‌ನಲ್ಲಿ ಊಟ ಚೆನ್ನಾಗಿರುತ್ತೋ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಛೆ ಛೆ ಎಲ್ಲಾದರೂ ಉಂಟೇ? ತುಂಬಾ ಕೆಟ್ಟದಾಗಿರುತ್ತೆ. ನಾವು ಪಾತ್ರೆನೂ ಸರಿಯಾಗಿ ತೊಳೆಯಲ್ಲ. ಕೆಲವೊಮ್ಮೆ ನಾವು ತಿಂದು ಬಿಟ್ಟದ್ದನ್ನೂ ಕೊಡ್ತೀವಿ. ಕೊಡ್ಲಾ?
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: ಒಮ್ಮೆ ತಿಂದು ನೋಡಿ ಸಾರ್. ಮತ್ತೆ ನೀವು ಈ ಹೊಟೇಲ್ ಬಿಟ್ಟು ಬೇರೆಲ್ಲೂ ಊಟಾನೇ ಮಾಡಲ್ಲ.ಕೂತ್ಕೋಳಿ ಸಾರ್. ಬಿಸಿ ಬಿಸಿಯಾದ ಊಟ ತರ್ತೀನಿ.
----------------------------------------------------------------------------------------
ನೀವು ನಿಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಗೆಳೆಯನಿಗೆ ಕೊಡ್ತೀರಾ.
ಅವರು ಕೇಳ್ತಾರೆ: ಏಯ್ ನೀನು ಮದುವೆ ಆಗ್ತೀರೋ ಹುಡುಗಿ ಚೆನ್ನಾಗಿದ್ದಾಳಾ? ಒಳ್ಳೆಯವಳಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಖಂಡಿತಾ ಇಲ್ಲಾ. ಶೂರ್ಪನಖಿಯ ತಂಗಿ ಇದ್ದ ಹಾಗೆ ಇದ್ದಾಳೆ. ಬೀದಿಗೊಂದು ಬಾಯ್‌ಫ್ರೆಂಡ್‌ಗಳೂ ಇದ್ರಂತೆ. ಏನ್ಮಾಡೋದು ಅವಳಪ್ಪ ಕೋಟ್ಯಾದೀಶ. ಬಿಡೋಕಾಗತ್ಯೆ?
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: ಹೌದು ಕಣೋ. ಇಂತಹ ಹುಡುಗಿ ಸಿಗಬೇಕು ಅಂದ್ರೆ ನೂರು ಜನ್ಮದ ಪುಣ್ಯ ಮಾಡಿರಬೇಕು.
-------------------------------------------------------------------------------------------
ಬೆಳಗಿನ ಜಾವ ೩ ಗಂಟೆಗೆ ಯಾರೋ ನಿಮ್ಮನ್ನು ಮನೆಗೆ ಫೋನ್ ಕಾಲ್ ಮಾಡಿ ಎಬ್ಬಿಸುತ್ತಾರೆ.
ಅವರು ಕೇಳ್ತಾರೆ: ಛೆ ಛೆ ಸುಮ್ನೆ ತೊಂದ್ರೆ ಕೊಟ್ಟೆ ಮಲಗಿ ಬಿಟ್ಟಿದ್ರಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಇಲ್ಲ ಇಲ್ಲ ಸುಮ್ಮನೆ ಬೇಜಾರು ಬರುತ್ತೆ ಅಂತಾ ಕಳ್ಳ ಪೋಲಿಸ್ ಆಟ ಆಡ್ತಾ ಇದ್ವಿ. ಅಂತೂ ಫೋನ್ ಮಾಡಿದ್ರಲ್ಲಾ. ತುಂಬಾ ಸಂತೋಷ. ಬನ್ನಿ ಬೆಳಕು ಹರಿಯುವವರೆಗೂ ಹರಟೆ ಹೊಡೆಯೋಣ.
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ: ಛೆ ಛೆ ಹಾಗೇನಿಲ್ಲ ಇನ್ನೇನು ಏದ್ದೇಳು ಹೊತ್ತು. ಹೇಳಿ ಎನು ವಿಷಯ ಅಂತಾ?
------------------------------------------------------------------------------------------
ನೀವು ತಲೆ ಶೇವ್ ಮಾಡಿರೋದು ನೋಡಿ ನಿಮ್ಮ ಗೆಳೆಯರು ನೋಡ್ತಾರೆ.
ಅವರು ಕೇಳ್ತಾರೆ: ಓಹೋ ತಲೆ ಶೇವ್ ಮಾಡಿಸ್ಕೋಂಡ್ರಾ?
ಫಿಲ್ಟರ್ ಇಲ್ಲಾಂದ್ರೆ ನಿಮ್ಮ ಉತ್ತರ: ಇದು ಬೇಸಿಗೆ ಕಾಲ ಅಲ್ವಾ ಎಲ್ಲಾ ಉದುರಿ ಹೋಗಿದೆ. ಮುಂದೆ ಮಳೆಗಾಲದಲ್ಲಿ ಚಿಗುರು ಬಿಡುತ್ತೆ.
ಫಿಲ್ಟರ್ ಇರೋದ್ರಿಂದ ನಿಮ್ಮ ಉತ್ತರ:(ಸ್ವಲ್ಪ ನಾಚುತ್ತಾ) ಹೌದು ಕಣ್ರಿ ಸ್ವಲ್ಪ ಚೇಂಜ್ ಇರಲಿ ಅಂತಾ.
-----------------------------------------------------------------------------------------

No comments:
Post a Comment